• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಪುಟ ವಿಸ್ತರಣೆ: ಬಿಜೆಪಿ ಭದ್ರಕೋಟೆಗಳಿಗೆ ನೀಡಿಲ್ಲ ಪ್ರಾಶಸ್ತ್ಯ

|

ಬೆಂಗಳೂರು, ಆಗಸ್ಟ್ 20: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಆಗಿ ಪ್ರಮಾಣವಚನ ಸ್ವೀಕರಿಸಿದ 25 ದಿನಗಳ ನಂತರ ಇಂದು ಸಂಪುಟ ವಿಸ್ತರಣೆ ಮಾಡಿದ್ದಾರೆ.

ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು

ಇಂದು 17 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಶಾಸಕರಲ್ಲದೇ ಇರುವ ಒಬ್ಬರು ಸಂಪುಟ ಸೇರಿರುವುದು ವಿಶೇಷ. ಮೊದಲ ಹಂತರ ಸಂಪುಟ ವಿಸ್ತರಣೆಯ ನಂತರ ಮಾಮೂಲಿನಂತೆಯೇ ಕೆಲವು ಅಸಮಾಧಾನದ ದ್ವನಿಗಳು ಎದ್ದಿವೆ. ಜೊತೆಗೆ ಜಿಲ್ಲಾವಾರು ಅಸಮತೋಲನದಿಂದ ಈ ಸಚಿವ ಸಂಪುಟ ಕೂಡಿದೆ ಎಂಬ ಕೂಗು ಸಹ ಎದ್ದಿದೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ

ಉತ್ತರ ಕರ್ನಾಟಕಕ್ಕೆ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಹಾಗೂ ಬಿಜೆಪಿಯ ಭದ್ರ ಕೋಟೆ ಕರಾವಳಿ ಜಿಲ್ಲೆಗಳಿಗೆ ಸೂಕ್ತ ನ್ಯಾಯ ಒದಗಿಸಲಾಗಿಲ್ಲವೆಂಬ ಕೂಗು ಕೇಳಿಬಂದಿದೆ.

ಬಿಜೆಪಿಗೆ ಮತಹಾಕಿರುವ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕೇವಲ ಒಂದು ಮಂತ್ರಿ ಸ್ಥಾನವನ್ನು ಮಾತ್ರವೇ ನೀಡಲಾಗಿದೆ. ಬೀದರ್‌ನ ಔರಾದ್ ಕ್ಷೇತ್ರ ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಮಂತ್ರಿ ಸ್ಥಾನವನ್ನು ನೀಡಲಾಗಿದೆ. ಇದನ್ನು ಹೊರತುಪಡಿಸಿದರೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಂದ ಒಬ್ಬ ಶಾಸಕರಿಗೂ ಮಂತ್ರಿ ಸ್ಥಾನ ನೀಡಲಾಗಿಲ್ಲ.

ಹೈದರಾಬಾದ್ ಕರ್ನಾಟಕಕ್ಕೆ ಒಂದೇ ಸ್ಥಾನ

ಹೈದರಾಬಾದ್ ಕರ್ನಾಟಕಕ್ಕೆ ಒಂದೇ ಸ್ಥಾನ

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬರೋಬ್ಬರಿ 16 ಬಿಜೆಪಿಯ ಶಾಸಕರು ಇದ್ದಾರೆ. ಆದರೆ ಇಷ್ಟು ಜನರಲ್ಲಿ ಕೇವಲ ಒಬ್ಬರಿಗೆ ಮಾತ್ರವೇ ಸಚಿವ ಸ್ಥಾನ ನೀಡಲಾಗಿದೆ. ಇದು ಹೈ-ಕ ಭಾಗದ ಮತದಾರರಿಗೆ ಬೇಸರ ತರಿಸಿದೆ. ಈಗಾಗಲೇ ಈ ಬಗ್ಗೆ ಪ್ರತಿಭಟನೆಗಳು ಸಹ ನಡೆದಿವೆ.

ದಕ್ಷಿಣ ಕನ್ನಡಕ್ಕೆ ಒಂದೂ ಸಚಿವ ಸ್ಥಾನ ಇಲ್ಲ

ದಕ್ಷಿಣ ಕನ್ನಡಕ್ಕೆ ಒಂದೂ ಸಚಿವ ಸ್ಥಾನ ಇಲ್ಲ

ಬಿಜೆಪಿಯ ಭದ್ರಕೋಟೆ ಕರಾವಳಿ ಪ್ರಾಂತ್ಯದ ದಕ್ಷಿಣ ಕನ್ನಡ ಜಿಲ್ಲೆಗೆ ಕೇವಲ ಒಂದು ಮಂತ್ರಿ ಸ್ಥಾನವನ್ನು ಮಾತ್ರವೇ ನೀಡಲಾಗಿದೆ. ಕೊಟ್ಟಿರುವ ಸ್ಥಾನವೂ ಸಹ ವಿಧಾನಪರಿಷತ್‌ ಸದಸ್ಯರಿಗೆ ನೀಡಲಾಗಿದೆಯೇ ಹೊರತು, ಚುನಾವಣೆ ಗೆದ್ದ ಶಾಸಕರಿಗೆ ನೀಡಲಾಗಿಲ್ಲ. ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಒಂದು ಮಂತ್ರಿ ಸ್ಥಾನವನ್ನೂ ನೀಡಲಾಗಿಲ್ಲ.

ಬಿಎಸ್ವೈ ಸಂಪುಟದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಘೋರ ಅನ್ಯಾಯ, ಆಕ್ರೋಶ

ಕೊಡಗು, ಮೈಸೂರು, ಮಂಗಳೂರಿಗೆ ಅನ್ಯಾಯ

ಕೊಡಗು, ಮೈಸೂರು, ಮಂಗಳೂರಿಗೆ ಅನ್ಯಾಯ

ಕೊಡಗು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ 15 ಮಂದಿ ಬಿಜೆಪಿ ಶಾಸಕರು ಇದ್ದಾರೆ. ಅದರಲ್ಲಿ ಇಬ್ಬರಿಗೆ ಮಾತ್ರವೇ ಸಚಿವ ಸ್ಥಾನ ನೀಡಲಾಗಿದೆ. ಅವರಲ್ಲಿ ಒಬ್ಬರು ಪಕ್ಷೇತರರು. ತುಮಕೂರಿನ ಮಾಧುಸ್ವಾಮಿ, ಕೋಲಾರ ಪಕ್ಷೇತರ ಶಾಸಕ ನಾಗೇಶ್ ಅವರುಗಳಿಗೆ ಮಾತ್ರವೇ ಅವಕಾಶ ದೊರೆತಿದೆ.

ಹಳೆ ಮೈಸೂರಿನ ಒಬ್ಬರಿಗೂ ದಕ್ಕಿಲ್ಲ ಸಚಿವ ಸ್ಥಾನ; ಕಾರಣವೇನು?

ಬೆಂಗಳೂರು ನಗರಕ್ಕೆ ಭರ್ಜರಿ ಕೊಡುಗೆ

ಬೆಂಗಳೂರು ನಗರಕ್ಕೆ ಭರ್ಜರಿ ಕೊಡುಗೆ

ಬೆಂಗಳೂರು ನಗರಕ್ಕೆ ಮಾತ್ರ ಭರ್ಜರಿ ಕೊಡುಗೆ ನೀಡಿದೆ ಬಿಜೆಪಿ, ಬೆಂಗಳೂರು ನಗರದಲ್ಲಿ ಇರುವ 11 ಶಾಸಕರಲ್ಲಿ ನಾಲ್ಕು ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಅದರಲ್ಲಿಯೂ ಇಲ್ಲಿನ ಶಾಸಕರಿಗೆ ಭಾರಿ ಪ್ರಭಾವಿ ಖಾತೆಗಳೇ ದೊರೆಯುವ ನಿರೀಕ್ಷೆ ಇದೆ.

ಯಡಿಯೂರಪ್ಪ ಸಂಪುಟ: ಸಚಿವ ಸ್ಥಾನ ವಂಚಿತ ಶಾಸಕರ ಪಟ್ಟಿ

ಬೆಳಗಾವಿ-ಶಿವಮೊಗ್ಗಕ್ಕೆ ಎರಡು ಮಂತ್ರಿ ಸ್ಥಾನ

ಬೆಳಗಾವಿ-ಶಿವಮೊಗ್ಗಕ್ಕೆ ಎರಡು ಮಂತ್ರಿ ಸ್ಥಾನ

ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಎರಡು ಮಂತ್ರಿ ಸ್ಥಾನಗಳನ್ನು ನೀಡಲಾಗಿದೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರುಗಳಿದ್ದರೆ, ಬೆಳಗಾವಿಯಲ್ಲಿ ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ ಅವರಿಗೆ ನೀಡಲಾಗಿದೆ. ಇದರಲ್ಲಿ ಲಕ್ಷ್ಮಣ ಸವದಿ ಶಾಸಕರಾಗಿ ಆಯ್ಕೆ ಆಗಿರಲಿಲ್ಲ.

ಪ್ರಾದೇಶಿಕ ಅಸಮತೋಲನೆಯಿಂದ ಕೂಡಿದ ಸಂಪುಟ

ಪ್ರಾದೇಶಿಕ ಅಸಮತೋಲನೆಯಿಂದ ಕೂಡಿದ ಸಂಪುಟ

ಒಟ್ಟಿನಲ್ಲಿ ಇಂದು ನಡೆಸಿರುವ ಸಂಪುಟ ವಿಸ್ತರಣೆ ಜಿಲ್ಲಾವಾರು ಅಸಮತೋಲನೆಯಿಂದ ಕೂಡಿದ್ದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅದರಲ್ಲಿಯೂ ಹೈದರಾಬಾದ್ ಕರ್ನಾಟಕ ಮತ್ತು ಕರಾವಳಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವೇ ಆಗಿದೆ.

English summary
Hyderabad Karnataka and coastal Karnataka not getting justice in Yediyurappa's cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X