ಭ್ರಷ್ಟಾಚಾರದ ಸ್ಪರ್ಧೆ ನಡೆದರೆ ಯಡಿಯೂರಪ್ಪ ನಂ. 1: ಅಮಿತ್ ಶಾ!

ದಾವಣಗೆರೆ, ಮಾರ್ಚ್ 27: ಸಿದ್ದರಾಮಯ್ಯ ಸರಕಾರ 10 ಪರ್ಸೆಂಟ್ ಕಮಿಷನ್ ಸರ್ಕಾರ. ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ 1 ಸರಕಾರ ಎನ್ನುತ್ತಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇವತ್ತು ಉಲ್ಟಾ ಹೊಡೆದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರದ ಸ್ಪರ್ಧೆ ನಡೆದರೆ ಅದರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ನಂ.1 ಇರುತ್ತದೆ ಎಂದು ತಮ್ಮ ಹೇಳಿಕೆ ಬದಲಿಸಿದ್ದಾರೆ.

Recommended Video

      ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ 1, ಅಂದ್ರು ಅಮಿತ್ ಶಾ | Oneindia Kannada

      ನಿಜವಾಗಿಯೂ ಶಾ ಯಡಿಯೂರಪ್ಪನವರನ್ನು ಟೀಕಿಸಿದರು ಎಂದುಕೊಳ್ಳಬೇಡಿ. ಅಷ್ಟಕ್ಕೂ ಅವರು ಹಾಗೆ ಹೇಳಿರುವುದು ಬಾಯಿ ತಪ್ಪಿನಿಂದ. ತಕ್ಷಣ ಎಚ್ಚೆತ್ತುಕೊಂಡ ಪಕ್ಕದಲ್ಲಿದ್ದ ಪ್ರಹ್ಲಾದ್ ಜೋಶಿ ಮತ್ತು ಯಡಿಯೂರಪ್ಪ ಅಮಿತ್ ಶಾ ಅವರ ಕಿವಿಯಲ್ಲಿ 'ಸಿದ್ದರಾಮಯ್ಯ' ಎಂದು ಉಸುರಿದರು.

      Yeddyurappa govt is number 1 in corruption race: Amit Shah!

      ತಕ್ಷಣ ತಮ್ಮ ತಪ್ಪನ್ನು ತಿದ್ದಿಕೊಂಡ ಶಾ, ಸಿದ್ದರಾಮಯ್ಯ ಸರ್ಕಾರ ದೇಶದಲ್ಲೇ ನಂಬರ್ 1 ಭ್ರಷ್ಟಾಚಾರ ಸರ್ಕಾರ ಎಂದು ಸಮಜಾಯಿಷಿ ನೀಡಿದರು.

      ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಮಿತ್ ಶಾ ಹೇಳಿಕೆ ವೈರಲ್ ಆಗಿದ್ದು, ಜನರು ಟ್ರೋಲ್ ಮಾಡುತ್ತಿದ್ದಾರೆ.

      ಈ ಸಂಬಂಧ ಟ್ಟೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸುಳ್ಳಿನ ಸರದಾರ ಅಮಿತ್ ಶಾ ಕೊನೆಗೂ ಸತ್ಯ ನುಡಿದ್ದಾರೆ. ಧನ್ಯವಾದಗಳು ಅಮಿತ್ ಶಾ" ಎಂದು ಛೇಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+