DK Shivakumar: ದೇಶದಲ್ಲಿ INDIA ಸರ್ಕಾರ ರಚನೆ ಆಗುತ್ತೆದೆಯಾ? ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದೇನು?
ದೇಶದಲ್ಲಿ ಏಳು ಹಂತದ ಲೋಕಸಭಾ ಚುನಾವಣೆಗಳು ಮುಗಿದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದೆ. ಈ ನಡುವೆ ಎಕ್ಸಿಟ್ ಪೋಲ್‌ಗಳ ಸಹ ಹೊರ ಬಿದ್ದಿದ್ದು, ಬಿಜೆಪಿಗೆ ಬಹುಮತ ಸಿಗುವುದು ಪಕ್ಕಾ ಎಂದು ಹೇಳಿವೆ. ಈ ಎಕ್ಸಿಟ್ ಪೋಲ್‌ಗಳ ಬಗ್ಗೆ ಹಲವು ಮುಖಂಡರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾದು ನೋಡಿ ಎಂದು ಹೇಳುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ. ಆದರೆ ಎಕ್ಸಿಟ್ ಪೋಲ್‌ಗಳಲ್ಲಿ ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವುದು ಖಚಿತ ಎಂದು ತಿಳಿಸಿವೆ. ಈ ಬೆನ್ನಲ್ಲೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಈ ಬಾರಿ INDIA ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಮೈತ್ರಿಕೂಟದಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ಟಿಎಂಸಿ ಸೇರಿವೆ. ಕಾಂಗ್ರೆಸ್‌ನ 'ಚಾಣಕ್ಯ' ಡಿಕೆ ಶಿವಕುಮಾರ್ ಅವರನ್ನು ಎಕ್ಸಿಟ್ ಪೋಲ್ ಕುರಿತು ಕೇಳಿದಾಗ, "ಭಾರತವು ಸಮ್ಮಿಶ್ರ ಸರ್ಕಾರವನ್ನು ರಚಿಸುತ್ತದೆ" ಎಂದು ಹೇಳಿದರು. ಇವರ ಮಾತು ಎಷ್ಟು ಸತ್ಯ ಎಂಬುದು ಇನ್ನೇನು ಕೆಲವೇ ಗಂಟೆಗಳಲ್ಲಿ ಬಹಿರಂಗವಾಗಲಿದೆ.
ರಾಹುಲ್ ಗಾಂಧಿ ಹೇಳಿದ್ದೇನು?
ಕಳೆದ ಕೆಲವು ಚುನಾವಣೆಗಳಲ್ಲಿ ಎಕ್ಸಿಟ್ ಪೋಲ್ ಗಳು ಸರಿಯಾದ ಫಲಿತಾಂಶ ನೀಡಿವೆ ಎಂದು ತಿಳಿಯುತ್ತದೆ. ಆದರೆ 18ನೇ ಲೋಕಸಭಾ ಚುನಾವಣೆಯ ಭವಿಷ್ಯ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಯಾವ ಮೈತ್ರಿ ಕೂಟ ಸುಲಭವಾಗಿ ಮ್ಯಾಜಿಕ್ ನಂಬರ್ ಪಾರು ಮಾಡುತ್ತದೆ ಎಂದು ರೋಚಕತೆ ಹೆಚ್ಚಿಸಿದೆ. ರಾಹುಲ್ ಗಾಂಧಿ ಸಹ ಈ ಎಕ್ಸಿಟ್ ಪೋಲ್‌ಗಳ ಬಗ್ಗೆ ಭಾನುವಾರ ತಮ್ಮ ಹೇಳಿಕೆ ನೀಡಿದ್ದಾರೆ. 'ಇದು ಎಕ್ಸಿಟ್ ಪೋಲ್ ಅಲ್ಲ, ಮೋದಿ ಮಾಧ್ಯಮದ ಸಮೀಕ್ಷೆ, ಇದೊಂದು ಫ್ಯಾಂಟಸಿ ಸಮೀಕ್ಷೆ' ಎಂದು ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಹೊರ ಹೊಮ್ಮುವ ಮುನ್ನ INDIA ಮೈತ್ರಿ ಕೂಟದ ಸಭೆ ದೆಹಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ INDIA ಮೈತ್ರಿ ಕೂಟ ಸರ್ಕಾರ ನಡೆಸುವುದಾಗಿ ತಿಳಿಸಿದ್ದರು.
ಕರ್ನಾಟಕದ ಕಥೆ ಏನು?
ಕರ್ನಾಟಕದಲ್ಲಿ ಕಾಂಗ್ರೆಸ್ ಎರಡು ದಶಕದಿಂದಲೂ ಲೋಕಸಭಾ ಚುನಾವಣೆಯಲ್ಲಿ ಡಬಲ್ ಡಿಜಿಟ್ ಮುಟ್ಟಿಲ್ಲ. ಈ ಬಾರಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಕಾಂಗ್ರೆಸ್ ಸರ್ಕಾರದ ಆಸೆಗೆ ಎಕ್ಸಿಟ್ ಪೋಲ್‌ಗಳು ಪೆಟ್ಟು ನೀಡಿವೆ. ಎಕ್ಸಿಟ್ ಪೋಲ್‌ಗಳ ಸಮೀಕ್ಷೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿವೆ ಎಂದು ಭವಿಷ್ಯ ನುಡಿದಿವೆ. ಅಲ್ಲದೆ ಕಾಂಗ್ರೆಸ್ ಈ ಬಾರಿ ಕಳೆದ ಬಾರಿಗೆ ಹೋಲಿಸಿದರೆ ಉತ್ತಮ ಸಾಧನೆ ಮಾಡಲಿದೆ ಎಂದು ಭವಿಷ್ಯ ನುಡಿದಿದೆ. ಕರ್ನಾಟಕದಲ್ಲಿ ಗ್ಯಾರಂಟಿ ವರ್ಕೌಟ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಕ್ಷಣಗಣನೆ ಆರಂಭವಾಗಿದೆ.












Click it and Unblock the Notifications