ಒಂದು ಬಸ್‌ ಸೀಟ್‌ಗೆ ಹಿಂಗಾ ಮಾಡೋದು, ಮಹಿಳೆಯರ ವಿಡಿಯೋ ವೈರಲ್ !

ಬಸ್ ಸೀಟ್‌ ಇಬ್ಬರು ಮಾಹಿಳೆಯರ ನಡುವೆ ಭಾರೀ ದೊಡ್ಡ ಮಾರಾಮಾರಿಯೇ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸರ್ಕಾರಿ ಬಸ್‌ನಲ್ಲಿ ಸೀಟ್‌ಗಾಗಿ ಮಹಿಳೆಯರು ಮಾಡಿಕೊಂಡಿದ್ದು, ನೋಡಿ ಜನ ಕಂಗಾಲಾಗಿದ್ದಾರೆ.

ಶಕ್ತಿ ಯೋಜನೆ ಜಾರಿಯಾದ ನಂತರ ಕರ್ನಾಟಕದ ಸರ್ಕಾರಿ ಬಸ್‌ಗಳಿಗೆ ಭಾರೀ ಡಿಮ್ಯಾಂಡ್ ಇದೆ. ಬಸ್‌ಗಳಲ್ಲಿ ಸೀಟು ಸಿಗದೆ ಹಾಗೂ ಬಸ್‌ನಲ್ಲಿ ಜನ ತುಂಬಿ ತುಳುಕುತ್ತಿರುವ ದೃಶ್ಯಗಳು ಈಗಲೂ ಕೆಲವೊಮ್ಮೆ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ, ಬೆಳಗಾವಿಯಲ್ಲಿ ಬಸ್‌ ಸೀಟಿಗಾಗಿ ದೊಡ್ಡ ಮಾರಾಮಾರಿಯೇ ನಡೆದಿದೆ.

What women did for a bus seat what is in the viral video

ಸರ್ಕಾರಿ ಬಸ್‌ವೊಂದರಲ್ಲಿ ಇಬ್ಬರು ಮಹಿಳೆಯರು ಸೀಟ್‌ ವಿಚಾರಕ್ಕೆ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಬೆಳಗಾವಿಯ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಸವದತ್ತಿಗೆ ಹೋಗುವುದಕ್ಕೆ ಈ ಮಹಿಳೆಯರು ಸರ್ಕಾರಿ ಬಸ್‌ ಹತ್ತಿದ್ದಾರೆ. ಬಸ್‌ನಲ್ಲಿ ಸೀಟ್‌ ನನ್ನದು ಎಂದು ಇಬ್ಬರು ಜಗಳ ಶುರು ಮಾಡಿಕೊಂಡಿದ್ದಾರೆ.

ಮೊದಲ ಮೊದಲು ಮಹಿಳೆಯರು ಪರಸ್ಪರ ಬೈದಾಡಿಕೊಂಡಿದ್ದಾರೆ. ನಂತರ ಈ ಜಗಳ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ ಇದರ ಬೆನ್ನಲ್ಲೇ ಚಪ್ಪಲಿಯಲ್ಲಿ ಹೊಡೆದಾಡಿದ್ದಾರೆ. ಈ ವೇಳೆ ವೇಳೆ ಅಡ್ಡ ಬಂದಿದ್ದ ಯುವಕನಿಗೂ ಮಹಿಳೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಜಗಳ ಬಿಡಿಸಲು ಬಂದವರಿಗೂ ಬೈಗುಳ: ಬಸ್‌ನಲ್ಲಿ ಸೀಟ್‌ಗಾಗಿ ಜಗಳ ನಡೆದಿದೆ. ಈ ಜಗಳ ಬಿಡಿಸಲು ಬಂದವರಿಗೂ ಈ ಮಹಿಳೆಯರು ಬೈದಿದ್ದಾರೆ. ಚಪ್ಪಲಿ ಕೆಳಗೆ ಬಿಸಾಕು ಎಂದು ಬಸ್‌ನಲ್ಲಿದ್ದ ಉಳಿದ ಪ್ರಯಾಣಿಕರು ಹೇಳುತ್ತಿರುವುದು ವಿಡಿಯೋದಲ್ಲಿ ಇದೆ. ಆದರೆ, ಬಸ್‌ನಲ್ಲಿ ಜಗಳ ಬಿಡಿಸಲು ಜನ ಪರದಾಡಿದ್ದಾರೆ. ಬಸ್‌ ಸೀಟ್‌ಗಾಗಿ ಜಗಳವಾಡಿರುವ ಮಹಿಳೆಯರು ನಂತರ ಕಣ್ಣೀರು ಹಾಕಿರುವುದು ಸಹ ವಿಡಿಯೋದಲ್ಲಿ ಇದೆ. ಒಂದು ಬಸ್‌ ಸೀಟ್‌ಗಾಗಿ ಇಷ್ಟೊಂದು ಜಗಳ ಮಾಡುವ ಅವಶ್ಯಕತೆಯಾದ್ರೂ ಏನಿತ್ತು ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ.

ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದು: ಶಕ್ತಿ ಯೋಜನೆ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಸಾಕಷ್ಟು ಪ್ರಸಿದ್ಧಿ ಗಳಿಸಿದೆ. ಶಕ್ತಿ ಯೋಜನೆಯನ್ನು ಜಾರಿ ಮಾಡಿದ ಮೇಲೆ ಸಾಕಷ್ಟು ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಸ್ಯೆಯೂ ಆಗುತ್ತಿದೆ.

ಶಕ್ತಿ ಯೋಜನೆಯ ಹಿನ್ನೆಲೆ: ರಾಜ್ಯ ಕಾಂಗ್ರೆಸ್‌ ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ್ದ 5 ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಒಂದಾಗಿದೆ. ಶಕ್ತಿ ಯೋಜನೆಗೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ಇದೆ. ಇದರಿಂದ ಮಹಿಳೆಯರು ಸುಲಭವಾಗಿ ಬಸ್‌ಗಳಲ್ಲಿ ಸಂಚರಿಸಲು ಅನುಕೂಲವಾಗಿದೆ. 2023ನೇ ಸಾಲಿನ ಜೂನ್‌ 11ರಂದು ಶಕ್ತಿ ಯೋಜನೆಯನ್ನು ಪರಿಚಯಿಸಲಾಗಿತ್ತು.

ಈ ಯೋಜನೆ ಜಾರಿಯಾದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ , ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+