ಫೆಬ್ರವರಿ 7ರ ತಾಪಮಾನ ವರದಿ: ಬೆಳಗ್ಗೆ ಚುಮುಚುಮು ಚಳಿ, ಮಧ್ಯಾಹ್ನ ಬಿರುಬಿಸಿಲು
ಬೆಂಗಳೂರು, ಫೆಬ್ರವರಿ 7: ರಾಜ್ಯದಲ್ಲಿ ಚಳಿಯ ಪ್ರಮಾಣ ಮುಂದುವರೆದಿದ್ದು, ಬೆಳಗಿನ ವೇಳೆಯ ಚಳಿ ಮೈ ನಡುಕ ಹುಟ್ಟಿಸಿದರೆ, ಮಧ್ಯಾಹ್ನದ ನಂತರ ಬಿಸಿಲಿಗೆ ಜನರು ಬಳಲಿ ಬೆಂಡಾಗುತ್ತಿದ್ದಾರೆ. ಇನ್ನು ಕಲ್ಯಾಣ ಕರ್ನಾಟಕದ ಬೀದರ್‌ನಲ್ಲಿ ಈ ವರ್ಷ ಕನಿಷ್ಠ ತಾಪಮಾನ ದಾಖಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಸಂಜೆ ವೇಳೆಗೆ ತಂಪಾದ ಗಾಳಿ ಬೀಸುತ್ತಿದೆ. ಇದರ ಜೊತೆಗೆ ಮಲೆನಾಡು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸುತ್ತಿದೆ. ಕಳೆದ ಕೆಲ ದಿನಗಳಿಂದಲೂ ರಾಜ್ಯದಲ್ಲಿ ಬೇಸಿಗೆಯ ಸುಳಿವು ಸಿಗುತ್ತಿದೆ. ಆದರೆ ಚಳಿಯ ಪ್ರಮಾಣ ಶಿವರಾತ್ರಿಯವರೆಗೂ ಮುಂದುವರೆಯಲಿದೆ.
ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಶಿವಮೊಗ್ಗದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಎಂದಿನಂತೆ ಬೆಳಗ್ಗೆ ಚುಮುಚುಮು ಚಳಿ ಸಹ ಇರಲಿದೆ.

ಜಿಲ್ಲಾವಾರು ತಾಪಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ ಗಳಲ್ಲಿ)
ಬೆಂಗಳೂರು 29-16, ಮೈಸೂರು 32-18, ಚಾಮರಾಜನಗರ 32-18, ರಾಮನಗರ 32-17, ಮಂಡ್ಯ 32-18, ಬೆಂಗಳೂರು ಗ್ರಾಮಾಂತರ 29-16, ಚಿಕ್ಕಬಳ್ಳಾಪುರ 28-15, ಕೋಲಾರ 29-16, ಹಾಸನ 31-17, ಚಿಕ್ಕಮಗಳೂರು 31-16, ದಾವಣಗೆರೆ 33-18, ಶಿವಮೊಗ್ಗ 34-18, ಕೊಡಗು 31-16, ತುಮಕೂರು 31-17, ಉಡುಪಿ 31-23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಂಗಳೂರು 31-23, ಉತ್ತರ ಕನ್ನಡ 34-17, ಧಾರವಾಡ 33-17, ಹಾವೇರಿ 33-18, ಹುಬ್ಬಳ್ಳಿ 33-18, ಬೆಳಗಾವಿ 32-17, ಗದಗ 33-18, ಕೊಪ್ಪಳ 32-19, ವಿಜಯಪುರ 33-19, ಬಾಗಲಕೋಟ 34-19, ಕಲಬುರಗಿ 33-19, ಬೀದರ್ 32-18, ಯಾದಗಿರಿ 33-19, ರಾಯಚೂರ 33-20, ಬಳ್ಳಾರಿ 33-19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇನ್ನು ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶದ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರಪ್ರದೇಶ, ಉತ್ತರ ಬಿಹಾರ, ಪಶ್ಚಿಮ ಬಂಗಾಳದ ಉತ್ತರ ಭಾಗ ಮತ್ತು ಪಶ್ಚಿಮ ಅಸ್ಸಾಂನ ಹಲವಾರು ಭಾಗಗಳಲ್ಲಿ ಬೆಳಿಗ್ಗೆ ದಟ್ಟವಾದ ಮಂಜು ಸಾಧ್ಯತೆ ಇದೆ. ಇನ್ನು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಿಮಪಾತ ಆಗುವ ಸಾಧ್ಯತೆಗಳಿವೆ.
ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ
ಕಳೆದ ವರ್ಷ ರಾಜ್ಯದ ಬಹುತೇಕ ಕಡೆ ಮುಂಗಾರು ಮತ್ತು ಹಿಂಗಾರು ಮಳೆಯ ಅಬ್ಬರವಿತ್ತು. ಅಲ್ಲದೆ, ಹೆಚ್ಚು ಸೈಕ್ಲೋನ್‌ಗಳು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸುರಿದ ಅಕಾಲಿಕ ಮಳೆಯಿಂದ ಬಹುತೇಕ ಎಲ್ಲ ಜಲಾಶಯಗಳು ತುಂಬಿದ್ದವು.
Recommended Video

ಸದ್ಯ ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಬೇಸಿಗೆ ವಾತಾವರಣ ಇರಲಿದ್ದು, ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಹಲವು ಜಲಾಶಯಗಳ ಒಳ ಹರಿವು ಬಹುತೇಕ ನಿಂತುಹೋಗಿದೆ.












Click it and Unblock the Notifications