ಮೋದಿ 'ವಿರುದ್ದ' ಮತ ಹಾಕುವಂತೆ ಕಲಾವಿದರ ಭಾರೀ ಅಭಿಯಾನ
Recommended Video

ಬೆಂಗಳೂರು, ಏ 8: ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗದಂತೆ ತಡೆಯಲು ಎಲ್ಲಾ ಪ್ರಮುಖ ಪಕ್ಷಗಳು ಒಂದಾಗಿರುವುದು ಒಂದೆಡೆಯಾದರೆ, ಹಿಂದಿನಿಂದಲೂ ಮೋದಿ ವಿರುದ್ದವೇ ಗುರುತಿಸಿಕೊಂಡಿರುವ ರಂಗಭೂಮಿ, ಸಿನಿಮಾ ಕಲಾವಿದರು, ಸಹಿ ಅಭಿಯಾನ ಆರಂಭಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಪ್ರಶಸ್ತಿ ವಾಪಸ್ ಮಾಡುವ ಮೂಲಕ ಗುರುತಿಸಿಕೊಂಡಿದ್ದ ಕಲಾವಿದರು, ಮೋದಿ ಮತ್ತೆ ಪ್ರಧಾನಿಯಾಗದಂತೆ ಮತ ಚಲಾಯಿಸಬೇಕೆನ್ನುವ ಮನವಿ ಪತ್ರಕ್ಕೆ ಸಹಿಹಾಕಿದ್ದಾರೆ.
ಪ್ರಜಾಪ್ರಭುತ್ವ ಉಳಿಸಿ ಎನ್ನುವ ಅಡಿಬರಹದೊಂದಿಗೆ ಆರ್ಟಿಸ್ಟ್ ಯುನೈಟೆಡ್ ಇಂಡಿಯಾ ಸಂಸ್ಥೆ ಈ ಅಭಿಯಾನವನ್ನು ಆನ್ಲೈನ್ ಮೂಲಕ ಆರಂಭಿಸಿದೆ.

ದ್ವೇಷ ರಾಜಕಾರಣ ಮಾಡುತ್ತಾ ಬಂದಿರುವ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಬಾರದು, ಬಿಜೆಪಿ ವಿರುದ್ದ ಮತಚಲಾಯಿಸಿ ಎನ್ನುವ ಅಭಿಯಾನಕ್ಕೆ ಸುಮಾರು 750ಕ್ಕೂ ಹೆಚ್ಚು ಕಲಾವಿದರು ಈಗಾಗಲೇ ಸಹಿ ಮಾಡಿದ್ದಾರೆ.
ನಿರೀಕ್ಷೆಯಂತೆ, ರಾಜ್ಯದಿಂದ ಗಿರೀಶ್ ಕಾರ್ನಾಡ್, ಪ್ರಕಾಶ್ ರೈ, ಶಶಿ ದೇಶಪಾಂಡೆ ಮುಂತಾದವರು ಸಹಿ ಮಾಡಿದ್ದಾರೆ. ಇನ್ನು, ನಾಸಿರುದ್ದೀನ್ ಶಾ, ಕೊಂಕಣ್ ಶರ್ಮಾ, ಅಮೋಲ್ ಪಾಲೇಕಾರ್ ಮುಂತಾದ ಕಲಾವಿದರಿಂದಲೂ ಇದಕ್ಕೆ ಸಹಿಬಿದ್ದಿದೆ.
ಈ ಅಭಿಯಾನದ ಸಂಪೂರ್ಣ ಮಾಹಿತಿ ಈ ಕೊಂಡಿಯಲ್ಲಿ ಲಭ್ಯವಿದೆ












Click it and Unblock the Notifications