ಯಡಿಯೂರಪ್ಪ ಸಿಎಂ: ವೈರಲ್ ಆಯ್ತು ಈ ಪುಟಾಣಿಯ ವಿಡಿಯೋ
ಬಿ ಎಸ್ ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.
ರೈತ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಹಸಿರುಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ಪುಟಾಣಿಯೊಂದು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ರಾಜಕೀಯದ ಕೆಸರೆರಚಾಟದ ಯಾವ ಅರಿವೂ ಇಲ್ಲದ ಮುಗ್ಧ ಮಗು ರಾಜ್ಯದಲ್ಲೇನೋ ಹೊಸದು ಸಂಭವಿಸುತ್ತಿದೆ ಎಂಬ ಉತ್ಸಾಹದಲ್ಲಿ ಸಂಭ್ರಮಿಸುತ್ತಿರುವ ವಿಡಿಯೋ ನೋಡುವುದಕ್ಕೇ ಚೆಂದ.

ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು(75) ಇಂದು(ಮೇ 17) ಬೆಳಿಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದರು.












Click it and Unblock the Notifications