DK Shivakumar: ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ: ವಿನಯ್ ಗುರೂಜಿ ಭವಿಷ್ಯ

ಬೆಳಗಾವಿ, ಜನವರಿ 10: ತಮಿಳುನಾಡಿನ ಪ್ರತ್ಯಂಗೀರಾ ದೇವಾಲಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ದೇವಲಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಟೆಂಪಲ್ ರನ್ ನಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವಧೂತ ವಿನಯ್ ಗುರೂಜಿ ಅವರು ಗುರುಗಳ ದಯೆಯಿಂದ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬು ಭವಿಷ್ಯ ನುಡಿದಿದ್ದಾರೆ.

ಇಂದು (ಶುಕ್ರವಾರ) ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವಂತ ಯೋಗವಿದೆ. ಗುರುಗಳ ದಯೆ, ಬಲದಿಂದ ಡಿ ಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.

Vinay Guruji has predicted that DK Shivakumar will become CM

ಡಿಕೆ ಶಿವಕುಮಾರ್ ಸಿಎಂ ಆಗುವದು ನಿಶ್ಚಿತ. ಕಾಂಗ್ರೆಸ್ ಪಕ್ಷಕ್ಕೆ ಸುಮಾರು ಡಿ ಕೆ ಶಿವಕುಮಾರ್ ಕೆಲಸ ಮಾಡಿದ್ದಾರೆ. ಡಿಕೆ ಶಿವಕುಮಾರ್‌ ಮುಖ್ಯಮಂತ್ರಿ ಆದರೆರೆ ಖುಷಿ ಪಡುತ್ತೇವೆ. ನಾಟಕ ಇಲ್ಲದ ರಾಜಕಾರಣಿ ಡಿಕೆ ಶಿವಕುಮಾರ್ ಅವರಿಗೆ ನಾಟಕ ಮಾಡಲು ಬರುವದಿಲ್ಲ. ವೈಕುಂಠ ಏಕಾದಶಿ ದಿನ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅಜ್ಜಯ್ಯ ನ ಮೇಲೆ ನಿಷ್ಠೆ, ಧರ್ಮದ ಮೇಲೆ ಶ್ರದ್ಧೆ ಡಿಕೆ ಶಿವಕುಮಾರ್‌ ಇದೆ. ಗುರುಗಳ ಅನುಗ್ರಹದಿಂದ ಇದೇ ಸರಕಾರದ ಅವಧಿಯಲ್ಲಿ ಡಿಕೆ ಶಿವಕುಮಾರ ಸಿಎಂ ಸೀಟಲ್ಲಿ ಕೂರುತ್ತಾರೆ ಎಂದು ವಿನಯ್ ಗೂರುಜಿ ಭವಿಷ್ಯ ಅವರು ಭವಿಷ್ಯ ನುಡಿದಿದ್ದಾರೆ.

ಡಿಕೆಶಿ ಜೈಲಿಗೆ ಹೋಗಿ ನಂತರ CM ಆಗ್ತಾರೆ: ಎಸ್.ಟಿ ಸೋಮಶೇಖರ್

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಂಡಿತವಾಗಿಯೂ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಜೆಪಿ ಬಂಡಾಯ ನಾಯಕ ಮತ್ತು ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಖ್ಯಾತ ಜ್ಯೋತಿಷಿ ದ್ವಾರಕನಾಥ್ ಅವರು ಸುಮಾರು 25 ವರ್ಷಗಳ ಹಿಂದೆಯೇ ಶಿವಕುಮಾರ್ ಭವಿಷ್ಯದಲ್ಲಿ ಜೈಲಿಗೆ ಹೋಗುತ್ತಾರೆ ಆನಂತರ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು ಎಂದು ಹೇಳಿದರು. ಶಿವಕುಮಾರ್ ಜೈಲುವಾಸದ ಅವರ ಮೊದಲ ಭವಿಷ್ಯವಾಣಿ ಈಗಾಗಲೇ ನಿಜವಾಗಿದೆ. ಅವರು ಮುಂದಿನ ಸಿಎಂ ಆಗುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.

ಡಿಕೆ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದನ್ನು ಲೇವಡಿ ಮಾಡಿದ್ದ ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ಶಾಸಕ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಯ, ಬಸವನಗೌಡ ಪಾಟೀಲ್ ಯತ್ನಾಳ್ ಅವರದ್ದು ನೋಡಿಕೊಳ್ಳಲಿ. ಡಿಕೆ ಶಿವಕುಮಾರ್‌ಗೂ ಯತ್ನಾಳ್ ಗೂ ಏನು ಸಂಬಂಧ?ಶಿವಕುಮಾರ್ ಅವರು, ಯತ್ನಾಳ್ ವಿರುದ್ಧ ಕನಕಪುರದಲ್ಲಿ ಕೇಸ್ ಹಾಕಿದ್ದಾರೆ. ಮೊದಲು ಯತ್ನಾಳ್ ಗೆ ಆ ಕೇಸ್ ಅಟೆಂಡ್ ಮಾಡಲು ಹೇಳಿ. ಡಿಕೆ ಶಿವಕುಮಾರ್‌ ಅವರನ್ನು ಟೀಕೆ ಮಾಡುವ ಬದಲು ನಿನ್ನದೇ ನೂರೆಂಟು ಇದೆ ಅದನ್ನು ನೋಡಿಕೋ ಎಂದು ಎಸ್‌ ಟಿ ಸೋಮಶೇಖರ್‌ ವಾಗ್ದಾಳಿ ನಡೆಸಿದರು.

ಡಿಕೆಶಿಯನ್ನು ಹೊಗಳುವ ತೆಗಳುವ ಕೆಲಸ ನಿನ್ನದಲ್ಲ. ಈಗ ವಕ್ಫ್, ವಿಜಯೇಂದ್ರ ಬಗ್ಗೆ ಏನೋ ಮಾಡ್ತಾ ಇದ್ದೀಯಲ್ಲ ಅದನ್ನು ನೆಮ್ಮದಿಯಾಗಿ ಮಾಡು‌. ಡಿಕೆ ಶಿವಕುಮಾರ್ ಬಗ್ಗೆ ನೀನು ಯಾಕೆ ತಲೆಕೆಡಿಸಿಕೊಳ್ಳುತ್ತೀಯ? ಅವರು ಟೆಂಪಲ್ ಗೆ ಹೋಗ್ತಾರೋ, ಜ್ಯೋತಿಷಿ ಬಳಿ ಹೋಗ್ತಾರೋ ನಿನಗ್ಯಾಕೆ ಅದು. ಅದು ಅವರ ಹಣೆಬರಹ. ನಿನಗೆ ಡಿಕೆಶಿ ಬಗ್ಗೆ ಪದೇ ಪದೆ ಮಾತನಾಡಲು ಯಾರು ಹೇಳಿದ್ದು? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+