ಕಾಗಿನೆಲೆ ಶ್ರೀಗಳು ನಾಟಕ ಮಾಡುತ್ತಿದ್ದಾರೆ: ವರ್ತೂರು ಪ್ರಕಾಶ್

Posted By:
Subscribe to Oneindia Kannada

ಶಿವಮೊಗ್ಗ, ಏಪ್ರಿಲ್ 09: ಕಾಗಿನೆಲೆ ಶ್ರೀಗಳು ಬಿಜೆಪಿಯ ಪರವಾಗಿದ್ದಾರೆ ಆದರೆ ಸ್ವ-ಲಾಭಕ್ಕಾಗಿ ಕಾಂಗ್ರೆಸ್ ಜೊತೆ ಇರುವಂತೆ ನಟಿಸುತ್ತಿದ್ದಾರೆ ಎಂದು ನಮ್ಮ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ವರ್ತೂರು ಪ್ರಕಾಶ್ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಕಾಗಿನೆಲೆ ಶ್ರೀಗಳಾದ ನಿರಂಜನಾನಂದ ಸ್ವಾಮಿಗಳು ಕಾಂಗ್ರೆಸ್‌ಗೆ ಬೆಂಬಲ ನೀಡದಿದ್ದರೆ ಅವರನ್ನು ಮಠದಿಂದಲೇ ಹೊರಗೆ ಹಾಕುತ್ತಾರೆ, ಹಾಗಾಗಿ ಅವರು ಕಾಂಗ್ರೆಸ್ ಪರ ಇರುವಂತೆ ನಟಿಸುತ್ತಿದ್ದಾರೆ' ಎಂದು ಅವರು ಹೇಳಿದರು.

ಕಾರ್ಣಿಕ ಭವಿಷ್ಯ ನಿಜ, ನಮ್ಮ ಕಾಂಗ್ರೆಸ್ ರಾಜ್ಯಭಾರ : ವರ್ತೂರ್ ಪ್ರಕಾಶ್

ಮನದಲ್ಲಿ ಬಿಜೆಪಿ ಪರವಾಗಿಯೇ ಇರುವ, ಆಂತರಿಕವಾಗಿ ಅವರಿಗೆ ಬೆಂಬಲ ಸಹ ನೀಡುತ್ತಿದ್ದಾರೆ. ನಿರಂಜನಾನಂದಪುರಿ ಸ್ವಾಮಿಗಳು ಇತ್ತೀಚೆಗೆ ರಾಹುಲ್ ಅವರನ್ನು ಭೇಟಿ ಆಗಿ, ಅಮಿತ್ ಶಾ ರನ್ನು ಭೇಟಿ ಆಗದೇ ಇದ್ದದ್ದು ಸಹ ಇದೇ ನಾಟಕದ ಒಂದು ಭಾಗವಷ್ಟೆ' ಎಂದು ವರ್ತೂರು ಪ್ರಕಾಶ್ ವಿಶ್ಲೇಷಿಸಿದ್ದಾರೆ.

ಕೋಲಾರ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಎಫ್‌ಐಆರ್

ಚರ್ಚೆ ಹುಟ್ಟುಹಾಕಿದ್ದ ಭೇಟಿ ವಿಷಯ

ಚರ್ಚೆ ಹುಟ್ಟುಹಾಕಿದ್ದ ಭೇಟಿ ವಿಷಯ

ಇತ್ತೀಚೆಗಷ್ಟೆ ಕಾಗಿನೆಲೆ ಶ್ರೀಗಳು ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿದ್ದರು, ಆದರೆ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಆಗಿರಲಿಲ್ಲ, ಇದು ಚರ್ಚೆ ಹುಟ್ಟುಹಾಕಿತ್ತು. ಈಶ್ವರಪ್ಪ ಆಯೋಜಿಸಿದ್ದ ಹಿಂದುಳಿದ ಜನಾಂಗದ ಸಮಾವೇಶದಲ್ಲಿಯೂ ಶ್ರೀಗಳು ಭಾಗವಹಿಸಿರಲಿಲ್ಲ, ಇದು ಅಮಿತ್ ಶಾ ಅವರನ್ನು ಕೆರಳಿಸಿತ್ತು.

ಈಶ್ವರಪ್ಪ ಮೇಲೂ ವಾಗ್ದಾಳಿ

ಈಶ್ವರಪ್ಪ ಮೇಲೂ ವಾಗ್ದಾಳಿ

ಬಿಜೆಪಿ ವಿಧಾನಪರಿಷತ್ ಸದಸ್ಯ ಮತ್ತು ಕುರುಬ ಜನಾಂಗದ ಮುಖಂಡರಲ್ಲೊಬ್ಬರಾದ ಈಶ್ವರಪ್ಪ ಅವರ ವಿರುದ್ಧವೂ ಹರಿಹಾಯ್ದ ವರ್ತೂರು ಪ್ರಕಾಶ್ 'ಈಶ್ವರಪ್ಪ ಎಲ್ಲೂ ತಮ್ಮ ಸಮುದಾಯದ ಬಗ್ಗೆ ಹೇಳಿಕೊಂಡೇ ಇಲ್ಲ, ಅವರಿಗೆ ಕುರುಬ ಸಮುದಾಯದ ಅಭಿವೃದ್ಧಿ ಬೇಕಿಲ್ಲ, ಅವರು ಬಿಜೆಪಿಯ ಬ್ರಾಹ್ಮಣಶಾಯಿತ್ವವನ್ನು ಒಪ್ಪಿಕೊಂಡುಬಿಟ್ಟಿದ್ದಾರೆ' ಎಂದರು.

ಈಶ್ವರಪ್ಪ ಬ್ರಾಹ್ಮಣಶಾಯಿತ್ವ ಒಪ್ಪಿಕೊಂಡಿದ್ದಾರೆ

ಈಶ್ವರಪ್ಪ ಬ್ರಾಹ್ಮಣಶಾಯಿತ್ವ ಒಪ್ಪಿಕೊಂಡಿದ್ದಾರೆ

'ಬಿಜೆಪಿಯಲ್ಲಿ ಅಹಿಂದರಿಗೆ ಸ್ಥಾನವೇ ಇಲ್ಲ, ಹಾಗಾಗಿ ಈಶ್ವರಪ್ಪ ಸಹ ಬಿಜೆಪಿಯ ಬ್ರಾಹ್ಮಣ, ಲಿಂಗಾಯತ ತುಷ್ಠೀಕರಣ ಧ್ಯೇಯವನ್ನೇ ಒಪ್ಪಿ ತಾವೂ ಅದನ್ನೇ ಮಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

ಬಿಎಸ್‌ವೈ ಈಶ್ವರಪ್ಪನ ಮುಗಿಸುತ್ತಾರೆ

ಬಿಎಸ್‌ವೈ ಈಶ್ವರಪ್ಪನ ಮುಗಿಸುತ್ತಾರೆ

ಈ ಬಾರಿ ಚುನಾವಣೆಯಲ್ಲಿ ಈಶ್ವರಪ್ಪಗೆ ಸೋಲಾಗುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದ ವರ್ತೂರು ಪ್ರಕಾಶ್ ಅವರು, 'ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ಅವರೇ ಈಶ್ವರಪ್ಪ ಅವರ ರಾಜಕೀಯ ಜೀವನವನ್ನು ಅಂತ್ಯ ಮಾಡುತ್ತಾರೆ' ಎಂದು ಭವಿಷ್ಯ ನುಡಿದರು.

ಸಮುದಾಯಕ್ಕೆ ಅನ್ಯಾನವಾದರೆ ಪ್ರತಿಭಟನೆ

ಸಮುದಾಯಕ್ಕೆ ಅನ್ಯಾನವಾದರೆ ಪ್ರತಿಭಟನೆ

ಈ ಹಿಂದೆ ಅಮಿತ್ ಶಾ ಅವರನ್ನು ಭೇಟಿ ಆಗದೇ ಇದ್ದಾಗ ವಿವಾದ ಉಂಟಾದಾಗ ಕಾಗಿನೆಲೆ ಶ್ರೀಗಳು 'ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ, ಯಾವ ಪಕ್ಷದ ಜೊತೆಯೂ ಗುರುತಿಸಿಕೊಳ್ಳುವುದೂ ಇಲ್ಲ, ಆದರೆ ಯಾವುದೇ ಪಕ್ಷದಲ್ಲಿರುವ ನಮ್ಮ ಸಮುದಾಯದ (ಕುರುಬ) ಮುಖಂಡರಿಗೆ ಅನ್ಯಾಯವಾದರೆ ಧನಿ ಎತ್ತುವೆ' ಎಂದು ಹೇಳಿದ್ದರು.

ವರ್ತೂರಿಗೆ ಬೆಂಬಲ ನೀಡಲು ನಿರಾಕರಣೆ?

ವರ್ತೂರಿಗೆ ಬೆಂಬಲ ನೀಡಲು ನಿರಾಕರಣೆ?

ರಾಜಕೀಯದ ವಿಷಯದವಾಗಿಯೇ ವರ್ತೂರು ಪ್ರಕಾಶ್ ಮತ್ತು ಕಾಗಿನೆಲೆ ಶ್ರೀಗಳ ನಡುವೆ ಶೀಥಲ ಸಮರ ನಡೆಯುತ್ತಿದೆ ಎನ್ನಲಾಗಿದೆ. ಶ್ರೀಗಳು ವರ್ತೂರು ಪ್ರಕಾಶ್‌ಗೆ ಬೆಂಬಲ ನೀಡಲಿಲ್ಲ ಎಂದು ವರ್ತೂರು ಶ್ರೀಗಳ ವಿರುದ್ಧ ಬೇಸರಗೊಂಡಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Namma congress' party founder Varthur Prakash lambasted on Kaginele swamyji. He said Kaginele Swamy is supporting BJP from back door, but he is pretending like he supporting congress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ