CET ಬರೆದ ವಿದ್ಯಾರ್ಥಿಗಳ ಗಮನಕ್ಕೆ: ಕೆಸಿಇಟಿ 2026ರ ಕೀ ಉತ್ತರ ಪ್ರಕಟ, ಆಕ್ಷೇಪಣೆ ಸಲ್ಲಿಕೆಗೆ ಏ. 30 ಕೊನೆ ದಿನ

ಬೆಂಗಳೂರು: ಇಂಜಿನಿಯರಿಂಗ್, ಕೃಷಿ, ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (UGCET-2026) ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಇದೇ ಏಪ್ರಿಲ್ 23 ಮತ್ತು 24 ರಂದು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದ ಕೆಸಿಇಟಿ ಪರೀಕ್ಷೆಯ ಎಲ್ಲಾ ವಿಷಯಗಳ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ) ತಾತ್ಕಾಲಿಕ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಪ್ರಾಧಿಕಾರದ ಜಾಲತಾಣಕ್ಕೆ ಭೇಟಿ ನೀಡಿ ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆಕ್ಷೇಪಣೆ ಸಲ್ಲಿಕೆಗೆ ಆನ್‌ಲೈನ್ ಅವಕಾಶ

ಕೆಯಿಎ ಪ್ರಕಟಿಸಿರುವ ಈ ಕೀ ಉತ್ತರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಸಲ್ಲಿಸಲು ಪ್ರಾಧಿಕಾರವು ಮುಕ್ತ ಅವಕಾಶ ಕಲ್ಪಿಸಿದೆ. ಆಕ್ಷೇಪಣೆಗಳನ್ನು ಏಪ್ರಿಲ್ 30ರ ಒಳಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕೆಯಿಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ಆನ್‌ಲೈನ್ ಲಿಂಕ್ ಅನ್ನು ಸಹ ಬಿಡುಗಡೆ ಮಾಡಲಾಗಿದ್ದು, ನಿಗದಿತ ಸಮಯದೊಳಗೆ ಮಾತ್ರವೇ ಆಕ್ಷೇಪಣೆ ಸಲ್ಲಿಸಲು ಸಾಧ್ಯವಿರುತ್ತದೆ.

UGCET

ನಿಯಮಗಳು ಮತ್ತು ಷರತ್ತುಗಳು

ಆಕ್ಷೇಪಣೆಗಳನ್ನು ಸಲ್ಲಿಸುವಾಗ ವಿದ್ಯಾರ್ಥಿಗಳು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಆಕ್ಷೇಪಣೆಗಳ ಜೊತೆಗೆ ಪ್ರಶ್ನೆ ಸಂಖ್ಯೆ, ಪರೀಕ್ಷೆಯ ವರ್ಷನ್ ಕೋಡ್, ವಿಷಯ ಹಾಗೂ ಆಕ್ಷೇಪಣೆಗೆ ಪೂರಕವಾದ ನಿಖರ ಮಾಹಿತಿಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ದಾಖಲಿಸಬೇಕು. ಈ ಯಾವುದೇ ಮಾಹಿತಿ ಇಲ್ಲದ ಅಥವಾ ಅಪೂರ್ಣ ಮಾಹಿತಿ ಹೊಂದಿರುವ ಆಕ್ಷೇಪಣೆಗಳನ್ನು ಪ್ರಾಧಿಕಾರವು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ. ಆನ್‌ಲೈನ್ ಲಿಂಕ್ ಹೊರತುಪಡಿಸಿ, ಇ-ಮೇಲ್ ಅಥವಾ ಖುದ್ದಾಗಿ ಸಲ್ಲಿಸುವ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ.

NCERT Textbook: 9ನೇ ತರಗತಿಯ ಎನ್‌ಸಿಇಆರ್‌ಟಿ ಹೊಸ ಪಠ್ಯಪುಸ್ತಕಗಳು ಈಗ ಆನ್‌ಲೈನ್‌ನಲ್ಲಿ ಲಭ್ಯ
NCERT Textbook: 9ನೇ ತರಗತಿಯ ಎನ್‌ಸಿಇಆರ್‌ಟಿ ಹೊಸ ಪಠ್ಯಪುಸ್ತಕಗಳು ಈಗ ಆನ್‌ಲೈನ್‌ನಲ್ಲಿ ಲಭ್ಯ

ವಿಷಯ ತಜ್ಞರ ತೀರ್ಮಾನವೇ ಅಂತಿಮ

ವಿದ್ಯಾರ್ಥಿಗಳಿಂದ ಸ್ವೀಕೃತವಾದ ಎಲ್ಲಾ ಆಕ್ಷೇಪಣೆಗಳನ್ನು ಆಯಾ ವಿಷಯಗಳ ತಜ್ಞರ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಲಿದೆ. ಈ ಪರಿಶೀಲನೆಯ ಬಳಿಕ ಈ ವಿಚಾರದಲ್ಲಿ ವಿಷಯ ತಜ್ಞರ ಸಮಿತಿಯು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ. ತಜ್ಞರ ವರದಿಯ ಆಧಾರದ ಮೇಲೆ ಅಂತಿಮ ಕೀ ಉತ್ತರಗಳನ್ನು ಸಿದ್ಧಪಡಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+