Virat Kohli: ಯುದ್ಧ ನಿಲ್ಲಿಸಿದ ಶಾಂತಿ ಧೂತ, ವಿರಾಟ್‌ ಮನವೊಲಿಸಿದ್ರಾ? ಸಖತ್ ವೈರಲ್ ಪೋಸ್ಟ್‌.. Funny jokes!

Virat Kohli: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಮೇ12ಕ್ಕೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ವಿರಾಟ್ ಅಭಿಮಾನಿಗಳಿಗೆ ಹಾಗೂ ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಭಾವನಾತ್ಮಕ ಕ್ಷಣ. ವಿರಾಟ್‌ ಕೊಹ್ಲಿ ಸಹ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್‌ ಮಾಡಿದ್ದರು. ಇದೀಗ ವಿರಾಟ್‌ ಕೊಹ್ಲಿ ಅವರು ಮರಳಿ ಟೆಸ್ಟ್‌ ಕ್ರಿಕೆಟ್‌ಗೆ ಬರಲಿದ್ದಾರೆ ಎನ್ನುವ ಹಾಸ್ಯದ ಪೋಸ್ಟ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗುವುದಕ್ಕೆ ಮಧ್ಯಸ್ಥಿಕೆ ವಹಿಸಿದ್ದರು ಎನ್ನುವ ವಿಷಯವನ್ನು ಟ್ರಂಪ್ ಅವರೇ ಹೇಳಿರುವುದನ್ನು ಇದಕ್ಕೆ ಹೋಲಿಕೆ ಮಾಡಲಾಗಿದೆ.

ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದು. ಕ್ರಿಕೆಟ್‌ ಲೋಕದ ಹಲವು ಗಣ್ಯರು ಶುಭಕೋರಿದ್ದಾರೆ ಹಾಗೂ‌ ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ಅವರು ನೀಡಿರುವ ಅಮೋಘ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಸಹ ರೋಹಿತ್ ಅವರ ಹಾದಿ ತುಳಿದಿದ್ದರು. ವಿರಾಟ್‌ ಕೊಹ್ಲಿ ಅವರ ವಿದಾಯದ ನಡುವೆ ಸಣ್ಣದೊಂದು ಜೋಕ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಪರ - ವಿರೋಧ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ.

Trump s Post about Virat Kohli is Going Viral What Did he say Funny jokes

ಟೆಸ್ಟ್‌ ಕ್ರಿಕೆಟ್‌ಗೆ ಮರಳಲಿದ್ದಾರಂತೆ ಕಿಂಗ್‌ ಕೊಹ್ಲಿ!

ಹೌದು ಕಿಂಗ್‌ ವಿರಾಟ್‌ ಕೊಹ್ಲಿ ಅವರು ಮರಳಿ ಟೆಸ್ಟ್‌ ಕ್ರಿಕೆಟ್‌ ಆಡುವುದಕ್ಕೆ ಬರಲಿದ್ದಾರೆ ಎನ್ನುವ ಪೋಸ್ಟ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ನಾನು ರಾತ್ರಿ ಪೂರ್ತಿ ವಿರಾಟ್‌ ಕೊಹ್ಲಿ ಹಾಗೂ ಬಿಸಿಸಿಐನೊಂದಿಗೆ ನೇರ ಹಾಗೂ ಸುದೀರ್ಘ ಮಾತುಕತೆ ನಡೆಸಿದೆ. ಇದಾದ ನಂತರ ನಾನು ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಸಂತೋಷ ಪಡುತ್ತಿದ್ದೇನೆ. ಅದು ಏನೆಂದರೆ "ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ಮತ್ತೆ ಬರಲಿದ್ದಾರೆ" ಅಂತ ಟ್ರಂಪ್‌ ಟ್ವೀಟ್ ಮಾಡಿರುವಂತೆ ಜೋಕ್ ಪೋಸ್ಟ್‌ವೊಂದು ವೈರಲ್ ಆಗಿದೆ.

ಮುಂದುವರಿದು ನಾನು ವೈಯಕ್ತಿಕವಾಗಿ ಕೊಹ್ಲಿ ಅವರ ಮನವೊಲಿಸಿದ್ದೇನೆ. ಅವರು ಗ್ರೇಟ್‌ ಲೆಜೆಂಡ್ ಹೀಗಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು. ಭಾರತದಿಂದ ಮಹತ್ವದ ನಿರ್ಧಾರ, ಬಿಸಿಸಿಐ & ವಿಶ್ವದ ಕ್ರಿಕೆಟ್‌ ಫ್ಯಾನ್ಸ್‌ನಿಂದ ಮಹತ್ವದ ನಿರ್ಧಾರ. Winning move! ಎನ್ನುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ ನಂತರ, ಟ್ರಂಪ್ ಅವರು ಇದೀಗ ಈಗ ವಿರಾಟ್ ಕೊಹ್ಲಿ ಅವರ ಮನವೊಲಿಸಿದ್ದು, ಕೊಹ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ ಅಂತ ಸುಪ್ರೀಂಕೋರ್ಟ್ ವಕೀಲ ಹಾಗೂ ಕಾಂಗ್ರೆಸ್‌ ಮುಖಂಡ ಬ್ರಿಜೇಶ್ ಕಾಳಪ್ಪ ಅವರು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+