ಬಿಪಿಎಲ್‌ನಿಂದ ಎಪಿಎಲ್‌ಗೆ; ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು?-ಅಂಕಿಅಂಶಗಳ ವಿವರ ಇಲ್ಲಿದೆ
Ration Card: ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಪಡದಂತಹ ಬಿಪಿಎಲ್ ಕಾರ್ಡುದಾರರ ವಿರುದ್ಧ ಸಮರ ಸಾರುತ್ತಲೇ ಬರುತ್ತಿದೆ. ಅಲ್ಲದೆ, ಅನರ್ಹರ ಕಾರ್ಡ್ ರದ್ದು ಮಾಡದೆ, ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್‌ಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ. ಹಾಗಾದರೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಕಾರ್ಡ್‌ಗಳ ವರ್ಗಾವಣೆ?: ರಾಜ್ಯದಲ್ಲಿ ಅನರ್ಹರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ ಆಹಾರ ಇಲಾಖೆ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡುತ್ತಿಲ್ಲ. ಬದಲಾಗಿ ಜಿಲ್ಲಾವಾರು ಅನರ್ಹರನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾಹಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಇಂದು (ನವೆಂಬರ್ 18) ನೀಡಿದೆ.

ಯಾವಾಗಿನಿಂದ ಪಡಿತರ ಚೀಟಿ ನೀಡಲಾಗುತ್ತಿದೆ?: ಕರ್ನಾಟಕ ಸರ್ಕಾರದ ಆಹಾರ ಇಲಾಖೆಯು ಪಡಿತರ ಕಾರ್ಡ್ ನೀಡುವ ವ್ಯವಸ್ಥೆಯನ್ನು ಹಿಂದಿನಿಂದಲೂ ಕೂಡ ಮುಂದುವರೆಸಿಕೊಂಡು ಬಂದಿದೆ. ಈಗ ಬಡತನ ರೇಖೆಗಿಂತ ಕೆಳಗಿನವರು ಬಿಪಿಎಲ್ ಹಾಗೂ ಬಡತನ ರೇಖೆಗಿಂತ ಕೆಳಗಿನಗರಿಗೆ ಎಪಿಎಲ್ ಕಾರ್ಡ್ ಅನ್ನು ನೀಡಲಾಗುತ್ತಿದೆ. ಇದರಲ್ಲಿ ಬಿಪಿಎಲ್ ಕಾರ್ಡ್‌ಗೆ ಮಾಸಿಕ ಪಡಿತರ, ಆರೋಗ್ಯ ಇಲಾಖೆ ಸಹಿತ ಹಲವೆಡೆ ಸೌಲಭ್ಯಗಳು ಸಿಗಲಿವೆ. ಆದರೆ, ಎಪಿಎಲ್ ಕಾರ್ಡ್‌ಗೆ ಯಾವುದೇ ಸೌಲಭ್ಯ ಇಲ್ಲ.
ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾಯಿಸಿದ ಕಾರ್ಡ್‌ಗಳ ಸಂಖ್ಯೆ
* ಶಿವಮೊಗ್ಗ - 2,346
* ಚಿಕ್ಕಬಳ್ಳಾಪುರ - 2,201
* ಕಲಬುರಗಿ - 1,925
* ಮೈಸೂರು - 4,221
* ಹಾಸನ - 3,925
* ಮಂಡ್ಯ - 2,824
* ಬಾಗಲಕೋಟೆ - 6,299
* ಬೆಂಗಳೂರು ಗ್ರಾಮಾಂತರ - 5,973
* ವಿಜಯಪುರ - 4,359
* ಚಿಕ್ಕಮಗಳೂರು - 9,441
* ಕೋಲಾರ - 6,500
* ಉಡುಪಿ - 6,422
* ಗದಗ - 1,119
* ಚಾಮರಾಜನಗರ - 836
* ಉತ್ತರ ಕನ್ನಡ - 315
* ಬಳ್ಳಾರಿ - 1,848
* ಚಿತ್ರದುರ್ಗ - 1,670
* ದಾವಣಗೆರೆ - 1,599












Click it and Unblock the Notifications