ನವೆಂಬರ್ 3ನೇ ವಾರದ ಒನ್ಇಂಡಿಯಾದ ಟ್ರೆಂಡಿಂಗ್ ಸುದ್ದಿಚಿತ್ರ
ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ನವೆಂಬರ್ 18 ರಿಂದ 25 ರ ತನಕದ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಗ್ರಹ ಇಲ್ಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ, ಬೆಳಗಾವಿಯ ಚಳಿಗಾಲದ ಅಧಿವೇಶನ, ಜಿಲ್ಲಾಸುದ್ದಿ, ಜ್ಯೋತಿಷ್ಯ, ಕ್ರೀಡೆ, ವಾಣಿಜ್ಯ ಸೇರಿದಂತೆ ದೇಶ -ವಿದೇಶದ ಸುದ್ದಿಗಳು ಇದರಲ್ಲಿ ಸೇರಿವೆ. ಎಂದಿನಂತೆ ನಮ್ಮನ್ನು ತಿದ್ದಿ ತೀಡುತ್ತಿರುವ ಓದುಗ ಮಹಾ ಪ್ರಭುಗಳಿಗೆ ನಮ್ಮ ತಂಡ ಆಭಾರಿಯಾಗಿದೆ.
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ).
ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ನೋಡಬಹುದು.

ಕೇದಾರನಾಥ್ ನಿಂದ ನಾಗಸಾಧು ನುಡಿದ ಭವಿಷ್ಯ

ಸಾರಾಯಿ ನಿಷೇಧ ಮಾಡಿದ್ದು ಎಚ್ಡಿಕೆ

ಆಪರೇಷನ್ ಕಮಲ, 7 ಜೆಡಿಎಸ್ ಶಾಸಕರು ಬಿಜೆಪಿಗೆ?

ಮಕಾಡೆ ಮಲಗಿದ ಬಿಗ್ ಬಾಸ್ ಕನ್ನಡ 5

ಅಮಿತ್ ಶಾ ಅಂದ ಸಿಎಂಗೆ ಟ್ವಿಟ್ಟಿಗರ ಕಿವಿಮಾತು!
ಸಿದ್ದರಾಮಯ್ಯ, ಪದ್ಮಾವತಿ ಚಿತ್ರ ಬಿಡುಗಡೆಯ ವಿಚಾರದಲ್ಲಿ ಬಿಜೆಪಿ ನಿಲುವನ್ನು ಟೀಕಿಸಿದ್ದರು. ಮಂಗಳವಾರ (ನ 21) ರಾತ್ರಿ, ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ' ಕನ್ನಡ ಕಲಿಯೋದಿಲ್ವಾ @AmitShah ರವರೆ? Won't you learn Kannada?" ಎಂದು ಟ್ವೀಟ್ ಮಾಡಿದ್ದರು. ಮುಂದೆ ಓದಿ...

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 125 ಹುದ್ದೆ
ಮಂಡ್ಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತರು ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ

ಅರ್ಧ ಆಸ್ತಿ ದಾನ ಮಾಡಲು ನಂದನ್

ಕುಮಾರಪರ್ವ ಜೆಡಿಎಸ್‌ಗೆ ಆಗುವ 6 ಲಾಭಗಳು!
ಕರ್ನಾಟಕ ಬಿಜೆಪಿ ಚುನಾವಣೆ ಪ್ರಚಾರಕ್ಕಾಗಿ 'ನವ ಕರ್ನಾಟಕ ಪರಿವವರ್ತನಾ ಯಾತ್ರೆ' ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ 'ಕುಮಾರಪರ್ವ ಯಾತ್ರೆ' ಆರಂಭಿಸಿದೆ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಯಾತ್ರೆ ಸಂಚಾರ ನಡೆಸಲಿದೆ. ಈ ಯಾತ್ರೆಯಿಂದ ಜೆಡಿಎಸ್ ಪಕ್ಷಕ್ಕೆ ಆಗುವ ಲಾಭವೇನು? ಇಲ್ಲಿವೆ ವಿವರ...

ದ್ರಾವಿಡ್ ಸರಳತೆಗೆ ಮಾರುಹೋದ ನೆಟ್ಟಿಗರು

10ನೇ ತರಗತಿ ಪಾಸಾದವರಿಗೆ ಉದ್ಯೋಗ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ನಿಂದ 526 ಕಚೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿ ಪ್ರಕಟಣೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 17, 2017 ರಿಂದ ಡಿಸೆಂಬರ್ 07 ಕೊನೆ ದಿನಾಂಕವಾಗಿದೆ.

ಕನಕಪುರದ ವಾಸು ಹೋಟೆಲ್ ಮಸಾಲೆ ದೋಸೆ
"ನೀವು ಕನಕಪುರಕ್ಕೆ (ರಾಮನಗರ ಜಿಲ್ಲೆ) ಹೋಗಿದ್ರಾ? ಹಾಗಿದ್ದರೆ ವಾಸು ಹೋಟೆಲ್ ಗೆ ಹೋಗಿದ್ರಾ?" ಎಂಬುದು ಆ ಹೋಟೆಲ್ ಬಗ್ಗೆ ಗೊತ್ತಿರುವವರ ಪ್ರಶ್ನೆಯಾಗಿತ್ತು. ಅಲ್ಲಿ ಏನು ವಿಶೇಷ ಅಂತ ಕೇಳಿದರೆ, ಮಸಾಲೆ ದೋಸೆ ಎಂಬ ಉತ್ತರ ಬರುತ್ತಿತ್ತು. ಬೆಂಗಳೂರಿನಲ್ಲಿ ಸಿಗದ ಮಸಾಲೆ ದೋಸೆ ಅಲ್ಲೇನು ಮಾಡ್ತಾರೆ ಅನ್ನೋ ಧೋರಣೆಯಿಂದಲೇ ಪುಟ್ಟದಾಗಿರುವ ಜಾಗದಿಂದ ಒಳಗೆ ಹೋದರೆ ಎಲ್ಲೆಲ್ಲೂ ಮಸಾಲೆ ದೋಸೆ.













Click it and Unblock the Notifications