ಕನ್ನಡ ಕಲಿಯೋದಿಲ್ವಾ ಮಿ. ಅಮಿತ್ ಶಾ ಅಂದ ಸಿಎಂಗೆ ಟ್ವಿಟ್ಟಿಗರ ಕಿವಿಮಾತು!
Recommended Video

ಚುನಾವಣಾ ಹೊಸ್ತಿಲಲ್ಲಿ @siddaramaiah ಅನ್ನುವ ಟ್ವಿಟ್ಟರ್ ಅಕೌಂಟ್ ಮೂಲಕ ಸಿಕ್ಕಾಪಟ್ಟೆ ಚುರುಕಾಗಿರುವ ಮುಖ್ಯಮಂತ್ರಿಗಳು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಾಲೆಳೆಯುವ ಟ್ವೀಟ್ ಮಾಡಿದ್ದಾರೆ.
23.3ಸಾವಿರ ಫಾಲೋವರ್ಸ್ ಹೊಂದಿರುವ ಸಿದ್ದರಾಮಯ್ಯ, ಪದ್ಮಾವತಿ ಚಿತ್ರ ಬಿಡುಗಡೆಯ ವಿಚಾರದಲ್ಲಿ ಬಿಜೆಪಿ ನಿಲುವನ್ನು ಟೀಕಿಸಿದ್ದರು. ಮಂಗಳವಾರ (ನ 21) ರಾತ್ರಿ, ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ' ಕನ್ನಡ ಕಲಿಯೋದಿಲ್ವಾ @AmitShah ರವರೆ? Won't you learn Kannada?" ಎಂದು ಟ್ವೀಟ್ ಮಾಡಿದ್ದರು.
ಪಕ್ಷದ ಬೇರು ಅಷ್ಟೇನೂ ಗಟ್ಟಿಯಿಲ್ಲದ ಪಶ್ಚಿಮಬಂಗಾಳ ಮತ್ತು ತಮಿಳುನಾಡಿನಲ್ಲಿ ಪಕ್ಷಬಲವರ್ಧನೆಗಾಗಿ ಬಂಗಾಳಿ ಮತ್ತು ತಮಿಳು ಭಾಷೆಗಳನ್ನು ಅಮಿತ್ ಶಾ ಕಲಿಯಲಾರಂಭಿಸಿದ್ದಾರೆಂದು ವರದಿಯಾಗಿತ್ತು. ಕೇಂದ್ರ ಸರಕಾರದ ಕ್ರಮವನ್ನು ಜನರಿಗೆ ಮನದಟ್ಟು ಮಾಡಲು ಶಾ, ಈ ಎರಡು ಪ್ರಾದೇಶಿಕ ಭಾಷೆಗಳನ್ನು ಕಲಿಯುತ್ತಿದ್ದಾರೆ.
ಸಿದ್ದರಾಮಯ್ಯ ಮಾಡಿರುವ ಟ್ವೀಟಿಗೆ 1200ಕ್ಕೂ ಹೆಚ್ಚು ಲೈಕ್ ಬಂದಿದ್ದು, 540ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಸಿದ್ದರಾಮಯ್ಯನವರ ಟ್ವೀಟನ್ನು ಸಮರ್ಥಿಸಿಕೊಳ್ಳುವ ಮತ್ತು ಲೇವಡಿ ಮಾಡುವ ಪ್ರತಿಕ್ರಿಯೆಗಳು ಬೇಕಾದಷ್ಟು ಬಂದು ಬೀಳುತ್ತಿವೆ.
ಯೋಗ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿರುವ ಅಮಿತ್ ಶಾ, ಬೆಂಗಾಳಿ ಮತ್ತು ತಮಿಳು ಭಾಷೆಯನ್ನು ಕಲಿಯಲು ಟ್ಯೂಷನ್ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯನವರ ಟ್ವೀಟಿಗೆ ಬಂದ ಕೆಲವೊಂದು ಆಯ್ದ ಸ್ವಾರಸ್ಯಕರ ರಿಪ್ಲೈ, ಮುಂದೆ ಓದಿ..

ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದಂತಹ ಲೇಖನ
ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದಂತಹ ಲೇಖನವನ್ನು ಉಲ್ಲೇಖಿಸಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವೈಯಕ್ತಿಕ ಟ್ವಿಟ್ಟರ್ ಹ್ಯಾಂಡಲ್ ಮೂಲಕ, "ಕನ್ನಡ ಕಲಿಯೋದಿಲ್ವಾ @AmitShah ರವರೆ? Won't you learn Kannada? " ಎಂದು ಟ್ವೀಟ್ ಮಾಡಿದ್ದರು.

ಕನ್ನಡ ಕಲಿತು ಏನೂ ಪ್ರಯೋಜನವಿಲ್ಲ, ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
ಕನ್ನಡ ಕಲಿತು ಏನೂ ಪ್ರಯೋಜನವಿಲ್ಲ, ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಅಮಿತ್ ಶಾ ಅವರಿಗೆ ಗೊತ್ತು ಅನ್ನುವ ಟ್ವೀಟ್. ಸೋನಿಯಾ ಗಾಂಧಿ ಬಳ್ಳಾರಿಯಿಂದ ಗೆದ್ದಾಗ ಕನ್ನಡ ಕಲಿತಿದ್ರ ಸಾರ್ ಎನ್ನುವ ಮತ್ತೊಂದು ರಿಪ್ಲೈ.

ಕನ್ನಡ ಗೊತ್ತಿಲ್ಲದವರು ರಾಜ್ಯೋತ್ಸವ ಪ್ರಶಸ್ತಿ ತಗೊಂಡ್ರು
ಕನ್ನಡ ಗೊತ್ತಿಲ್ಲದವರು ಯಾರೋ #ಕನ್ನಡರಾಜ್ಯೋತ್ಸವ ಪ್ರಶಸ್ತಿ ತಗೊಂಡ್ರು ಅಂತ ಕೇಳ್ಪಟ್ಟೆ!, ಈ ಕಳ್ಳರೆಲ್ಲಾ ಕನ್ನಡ ಕಲಿಯೋದಿಲ್ಲ ಸರ್...ಯಾಕೆಂದ್ರೆ ಇವರ ಚಮಚಗಳು ಕರ್ನಾಟಕ ಬಿಜೆಪಿಯಲ್ಲಿದ್ದಾರಲ್ವ...ಅವರೇ ಎಲ್ಲಾ ಕಮ್ಯೂನಿಕೇಶನ್ಸ್ ಮಾಡ್ತಾರೆ! ಪುಣ್ಯಾತ್ಮ @OfficeOfRG ಅಥವಾ ಸೋನಿಯಾ ಗಾಂಧಿ ರಾಷ್ಟ್ರೀಯ ಪತ್ರಿಕೆಯಲ್ಲಿ ಬೇರೆ ಭಾಷೆ ಕಲಿತಿರೋ ಬಗ್ಗೆ ಪ್ರಚಾರ ಮಾಡುತ್ತಿಲ್ಲ. @AmitShah ಗೆ ಅಥವಾ @BJP4Karnataka ಗೆ ಕನ್ನಡಕ್ಕಿಂತ ತಮಿಳು ಹಾಗು ಬೆಂಗಾಳಿ ಮಖ್ಯಾನಾ??? ಸಿಎಂ ಟ್ವೀಟಿಗೆ ಬಂದ ರಿಪ್ಲೈಗಳು

ಕಾಂಗ್ರೆಸ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಕಲಿಯೋದಕ್ಕೆ ಹೇಳಿ
ರಾಮಚಂದ್ರ ಗುಹಾಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೊಟ್ರಿ ಅವರಿಗೆ ಕನ್ನಡ ಬರುತ್ತಿತ್ತಾ??. ಕಾಂಗ್ರೆಸ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಕಲಿಯೋದಕ್ಕೆ ಹೇಳಿ. ಜೊತೆಗೆ ಆಲೂಗಡ್ಡಯಿಂದ ಚಿನ್ನ ಮಾಡೋ ಮಶೀನನ್ನೂ ಕೊಡಿಸಿ.. - ಟ್ವೀಟ್ ಪ್ರತಿಕ್ರಿಯೆ.
|
ಕನ್ನಡದವರಾಗಿ ಬೆಳಗಾವಿಯಲ್ಲಿ ಮರಾಠಿಯಲ್ಲಿ ಪ್ರಚಾರ
ಸರ್ ಸರಿಯಾಗಿ ಪಂಚ್ ಕೊಟ್ಟಿದಿರ ಶಾ ಗೆ. ಹಾಗೆ ಇವರನ್ನ ಸ್ವಲ್ಪ ನೋಡಿ ಸರ್.. ಕನ್ನಡದವರಾಗಿ ಬೆಳಗಾವಿಯಲ್ಲಿ ಮರಾಠಿಯಲ್ಲಿ ಪ್ರಚಾರ ಮಾಡಿದ್ದಾರೆ ಏನಾದರೂ ಬುದ್ದಿ ಹೇಳ್ತೀರಾ ಸರ್ ಇವ್ರಿಗೆ ಒಂದು ಸಲಾ ಕನ್ನಡ ಕ್ಲಾಸ್ ತಗೊಳಿ ಸರ್ ಆಗ ಬುದ್ದಿ ಬರತ್ತೆ ಇವ್ರಿಗೆ..
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications