ಕನಕಪುರದ ವಾಸು ಹೋಟೆಲ್ ಮಸಾಲೆ ದೋಸೆ ವರ್ಲ್ಡ್ ಫೇಮಸ್!

Posted By:
Subscribe to Oneindia Kannada
   ಕನಕಪುರದ ವಾಸು ಹೋಟೆಲ್ ಮಸಾಲೆ ದೋಸೆಗೆ ಫುಲ್ ಫೇಮಸ್ | Oneindia Kannada

   "ನೀವು ಕನಕಪುರಕ್ಕೆ (ರಾಮನಗರ ಜಿಲ್ಲೆ) ಹೋಗಿದ್ರಾ? ಹಾಗಿದ್ದರೆ ವಾಸು ಹೋಟೆಲ್ ಗೆ ಹೋಗಿದ್ರಾ?" ಎಂಬುದು ಆ ಹೋಟೆಲ್ ಬಗ್ಗೆ ಗೊತ್ತಿರುವವರ ಪ್ರಶ್ನೆಯಾಗಿತ್ತು. ಅಲ್ಲಿ ಏನು ವಿಶೇಷ ಅಂತ ಕೇಳಿದರೆ, ಮಸಾಲೆ ದೋಸೆ ಎಂಬ ಉತ್ತರ ಬರುತ್ತಿತ್ತು. ಬೆಂಗಳೂರಿನಲ್ಲಿ ಸಿಗದ ಮಸಾಲೆ ದೋಸೆ ಅಲ್ಲೇನು ಮಾಡ್ತಾರೆ ಅನ್ನೋ ಧೋರಣೆಯಿಂದಲೇ ಪುಟ್ಟದಾಗಿರುವ ಜಾಗದಿಂದ ಒಳಗೆ ಹೋದರೆ ಎಲ್ಲೆಲ್ಲೂ ಮಸಾಲೆ ದೋಸೆ.

   ರಾಜ್ಯೋತ್ಸವಕ್ಕೆ ಕನ್ನಡದ ಘಮಲಿನ ತಿಂಡಿಗಳ ಗಮ್ಮತ್ತು!

   ರಸ್ತೆ ವಿಸ್ತರಣೆ ಕಾರಣಕ್ಕೆ ವಾಸು ಹೋಟೆಲ್ ಸ್ವಲ್ಪ ಚಿಕ್ಕದಾಗಿದೆ. ಊರಿನಲ್ಲಿ ಯಾರನ್ನೇ ಕೇಳಿದರೂ 'ಹೊಸದಾ ಅಥವಾ ಹಳೆಯದಾ' ಅಂತ ಪ್ರಶ್ನೆ ಮಾಡ್ತಾರೆ. ಹಳೆಯದು ಅಂದರೆ, ಮೇನ್ ರೋಡ್ ನಲ್ಲೇ ಇದೆ. ಯಾರನ್ನಾದರೂ ಕೇಳಿದರೆ ಹೇಳ್ತಾರೆ ನೋಡಿ ಎನ್ನುತ್ತಾರೆ. ಹಾಗೆ ಹುಡುಕಿಕೊಂಡು ಒಳಗೆ ಹೋಗಿದ್ದಾಯಿತು.

   Kanakapura Vasu hotel mouth watering Masala dosa

   ಮೂವತ್ತೈದು ರುಪಾಯಿಗೆ ಮಸಾಲೆ ದೋಸೆ, ಹೆಚ್ಚು ಕಡಿಮೆ ಅದೇ ಬೆಲೆಗೆ ಖಾಲಿ ದೋಸೆ, ಸೆಟ್ ದೋಸೆ ಕೂಡ ಸಿಗುತ್ತದೆ. ಟೋಕನ್ ತೆಗೆದುಕೊಂಡು ನಿಮಿಷಗಳಲ್ಲಿ, ಹೆಚ್ಚೆಂದರೆ ಹತ್ತು ನಿಮಿಷದೊಳಗೆ ದೋಸೆ- ಚಟ್ನಿ ಕೊಟ್ಟುಬಿಡ್ತಾರೆ. ಆ ನಂತರದ ಕೆಲ ನಿಮಿಷ ಖಂಡಿತವಾಗಿಯೂ ಮೌನಾಚರಣೆ ಇರುತ್ತದೆ. ಏಕೆಂದರೆ ಅದಕ್ಕೆ ಮಸಾಲೆ ದೋಸೆಯ ಸವಿ ಕಾರಣ.

   Kanakapura Vasu hotel mouth watering Masala dosa

   ಇದರ ಜತೆಗೆ ಬಿಸಿ ಬೇಳೆ ಬಾತ್, ಚೌಚೌ ಬಾತ್ ಸೇರಿದಂತೆ ಬೇರೆ ತಿಂಡಿಗಳೂ ಸಿಗುತ್ತವೆ. ಇನ್ನು ರವೆ ಉಂಡೆ, ಖಾರದಂಥದ್ದನ್ನು ಕೂಡ ಇಲ್ಲಿ ಮಾರಲಾಗುತ್ತದೆ. ಖಾರ ಇನ್ನೂರು ರುಪಾಯಿ ಕೇಜಿಗೆ. ರುಚಿಯ ಬಗ್ಗೆ ಎರಡು ಮಾತಿಲ್ಲ. ಆ ನಂತರ ಕಾಫಿ ಕುಡಿದು ಹೋಟೆಲ್ ನಿಂದ ಹೊರಗೆ ಬಂದು, ಹಿಂತಿರುಗಿ ನೋಡಿದರೆ, ಹಿಂಜರಿಕೆಯಿಂದ ಸ್ವಲ್ಪ ಹಿಂದಕ್ಕೆ ಸರಿದಂತೆ ಕಾಣುವ ವಾಸು ಹೋಟೆಲ್, 'ಮತ್ತೆ ಬನ್ನಿ ಮಸಾಲೆ ದೋಸೆ ತಿನ್ನೋಕೆ' ಎಂದು ಕರೆದಂತಾಗುತ್ತದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Vasu hotel is very famous in Kanakapura, Ramanagara district. Masala dosa is identity for this hotel. Other snacks also good. You can try once here.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ