Copra Price: ಬೇಡಿಕೆ ಜೋರಿದ್ದರೂ ತಿಪಟೂರು ಕೊಬ್ಬರಿ ದರ ಕುಸಿತ; ವಿವಿಧ ಎಪಿಎಂಸಿಗಳಲ್ಲಿ ಇಂದಿನ ಬೆಲೆ ಎಷ್ಟಿದೆ?
Copra Price Updates: ರಾಜ್ಯದಲ್ಲಿ ಉಂಡೆ ಕೊಬ್ಬರಿ ದರದಲ್ಲಿ ಏರಿಳಿತ ಮುಂದುವರಿದಿದೆ. ಒಂದು ಕ್ವಿಂಟಾಲ್‌ಗೆ ದಾಖಲೆ ದರ ತಲುಪಿದ್ದ ತಿಪಟೂರು ಕೊಬ್ಬರಿ ಬೆಲೆಯು ಇಳಿಕೆ ಕಂಡಿದೆ. ತೆಂಗು ಕೃಷಿಗೆ ಹೆಸರುವಾಸಿಯಾದ ತುಮಕೂರು, ತಿಪಟೂರು ಭಾಗಗಳಲ್ಲಿ ಇದೀಗ ಕೊಬ್ಬರಿ ಪೂರೈಕೆ ಕಡಿಮೆ ಆಗಿದೆ. ಬೇಡಿಕೆ ಹೆಚ್ಚಿದ್ದರು ಸಹಿತ ಕೊಬ್ಬರಿ ಬೆಲೆಯಲ್ಲಿ ಇಳಿಕೆ ಆಗಿದೆ. ಇಂದು ಜೂನ್ 13ರಂದು ಶನಿವಾರ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಎಷ್ಟಿದೆ ಕೊಬ್ಬರಿ ಬೆಲೆ? ಇಲ್ಲಿದೆ ಮಾಹಿತಿ.
ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಉಂಡೆ ಕೊಬ್ಬರಿ ಬೆಲೆ ಶನಿವಾರ ಗರಿಷ್ಠ 33,507 ರೂಪಾಯಿ ಹಾಗೂ ಕನಿಷ್ಟ ದರ 30,000 ರೂಪಾಯಿಗೆ ಮಾರಾಟವಾಗಿದೆ. ಕಳೆದ ಎರಡು ದಿನಗಳಿಂದ ಇದೇ ಬೆಲೆ ಮುಂದುವರಿದಿದೆ ಎಂದು ವರ್ತಕರು ತಿಳಿಸಿದ್ದಾರೆ. ಈ ಭಾಗದ ಕೃಷಿಕರಲ್ಲಿ ಹೆಚ್ಚಿನ ಸಂಖ್ಯೆಯ ಜನರು ತೆಂಗೆ ಬೆಳೆದಿದ್ದಾರೆ. ಗುಣಮಟ್ಟದ, ದಪ್ಪ ಕೊಬ್ಬರಿ ಉತ್ಪಾದನೆ ತಿಪಟೂರು ಭಾಗದಲ್ಲಿ ಹೆಚ್ಚಾಗುವ ಕಾರಣಕ್ಕೆ ಆಹಾರಕ್ಕೆ ಹೆಚ್ಚಾಗಿ ಬಳಸಲಾಗುತ್ತದೆ.

ಕೆ.ಆರ್.ಪೇಟೆ ಮಾರುಕಟ್ಟೆಯಲ್ಲೂ ಕೊಬ್ಬರಿ ಕಮಾಲ್
ಈ ವರ್ಷ ಕೊಬ್ಬರಿಗೆ ಅತ್ಯಧಿಕ ಬೇಡಿಕೆ ಸೃಷ್ಟಿಯಾಗಿತ್ತು. ಏಪ್ರಿಲ್ ಮೊದಲ ವಾರದಿಂದ ಮೇ ಅಂತ್ಯದವರೆಗೆ ತಿಪಟೂರಿನಲ್ಲಿ ಗರಿಷ್ಠ 38,000 ರೂ.ವರೆಗೆ ದರ ಹೆಚ್ಚಳ ಕಂಡಿತ್ತು. ನಂತರ ಇಳಿಕೆ ಆಗುತ್ತಾ ಬಂತು. ಇಂದು ಕೆ.ಆರ್.ಪೇಟೆ ಮಾರುಕಟ್ಟೆಯಲ್ಲೂ ಬರೋಬ್ಬರಿ 33,500 ರೂಪಾಯಿಗೆ ಕೊಬ್ಬರಿ ಮಾರಾಟವಾಗಿದೆ. ಈ ಮೂಲಕ ತಿಪಟೂರು ನಂತರ ಕೆ.ಆರ್.ಪೇಟೆಯಲ್ಲಿ ಹೆಚ್ಚು ಬೆಲೆಗೆ ಕೊಬ್ಬರಿ ಬಿಕರಿಯಾಗಿದೆ.
ಎಳನೀರಿಗೆ ಬೇಡಿಕೆ ಅಧಿಕ, ಕೊಬ್ಬರಿ ಪೂರೈಕೆ ಇಳಿಮುಖ
ತುಮಕೂರು ವ್ಯಾಪ್ತಿಯಲ್ಲಿ ಮಾರುಕಟ್ಟೆಗೆ ಕೊಬ್ಬರಿ ಪೂರೈಕೆ ಕಡಿಮೆ ಆಗಿದೆ. ಬೇಸಿಗೆಯಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಿರುತ್ತದೆ. ಪ್ರತಿ ಬಾರಿ ಬೇಸಿಗೆಯಲ್ಲಿ ಎಳನೀರು ಮಾರುಕಟ್ಟೆಗೆ ಪೂರೈಕೆ ಆಗುತ್ತದೆ. ಜೂನ್‌ಗೆ ಅಂತ್ಯಗೊಂಡ ಬೇಸಿಗೆಯಲ್ಲೂ ಅದೇ ರೀತಿ ಆಗಿತ್ತು. ತೆಂಗಿನಕಾಯಿ ಮರದಲ್ಲಿದ್ದಾಗ ಬಲಿಯಲು ಬಿಡದ ಹಿನ್ನೆಲೆ ಅಂತಿಮವಾಗಿ ಕೊಬ್ಬರಿ ಲಭ್ಯತೆ ಕುಸಿದಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಿದ್ದರೂ ಕೂಡ ಬೆಲೆಯು ಇಳಿಕೆ ಆಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ತಿಪಟೂರು ಮಾತ್ರವಲ್ಲದೇ ಗುಬ್ಬಿ, ತುಮಕೂರು, ಅರಸೀಕೆರೆ, ಕಡೂರು ಭಾಗದಲ್ಲಿ ಹೆಚ್ಚಾಗಿ ತೆಂಗಿನ ಮರಗಳೇ ಕಾಣಿಸುತ್ತಿವೆ. ಇಲ್ಲಿ ರಾಗಿ, ಕಬ್ಬು, ಬಾಳೆ ಇನ್ನಿತರ ಬೆಳೆಗಳ ಜೊತೆಗೆ ವಾಣಿಜ್ಯ ಬೆಳೆಯಾದ ತೆಂಗಿನ ಕೃಷಿ ಹೆಚ್ಚಾಗಿ ಮಾಡುತ್ತಾರೆ. ಹಾಗಾದರೆ ಈ ಭಾಗಗಳ ಮಾರುಕಟ್ಟೆಗಳಲ್ಲಿ ಇಂದಿನ (ಜೂನ್13ರ) ಒಂದು ಕ್ವಿಂಟಾಲ್ ಕೊಬ್ಬರಿ ಬೆಲೆ ಎಷ್ಟಿದೆ?
ವಿವಿಧ ಮಾರುಕಟ್ಟೆಗಳ ಕೊಬ್ಬರಿ ಬೆಲೆ
* ತರಿಕೆರೆ ಮಾರುಕಟ್ಟೆ: ಕೊಬ್ಬರಿ ಗರಿಷ್ಠ ದರ 17,500 ರೂಪಾಯಿ
* ತುಮಕೂರು ಎಪಿಎಂಸಿ: ಗರಿಷ್ಠ ದರ 18,500 ರೂಪಾಯಿ
* ಗುಬ್ಬಿ ಮಾರುಕಟ್ಟೆಯ: 15000 ರೂಪಾಯಿ
* ಕಡೂರು ಮಾರುಕಟ್ಟೆ: 21,500 ರೂಪಾಯಿ
* ತಿಪಟೂರು ಎಪಿಎಂಸಿ: 33,500 ರೂಪಾಯಿ
* ಕೆ.ಆರ್.ಪೇಟೆ ಮಾರುಕಟ್ಟೆ: 33,500 ರೂಪಾಯಿ













Click it and Unblock the Notifications