Summer: ಬಿರು ಬೇಸಿಗೆಯಲ್ಲಿ ನಿಮ್ಮ ಲ್ಯಾಪ್‌ಟಾಪ್, ಫೋನ್ ಬಿಸಿಯಾಗದಂತೆ ತಡೆಯಲು ಇಲ್ಲಿದೆ 10 ಸುಲಭ ಮಾರ್ಗ
Summer Heatwave: ಬೇಸಿಗೆಯಲ್ಲಿ ಹೊರಗಿನ ತಾಪಮಾನದಲ್ಲಿ ವಿಪರೀತ ಏರಿಕೆ ಕಂಡು ಬರುತ್ತದೆ. ಈ ಬಾರಿಯಂತೂ ತಾಪಮಾನವು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಮನುಷ್ಯರು ಪ್ರಾಣಿ ಪಕ್ಷಿಗಳು ಈ ಬಾರಿಯ ಸೂರ್ಯನ ಪ್ರಖರತೆಗೆ ಹೈರಾಣಾಗಿದ್ದಾರೆ. ಬೇಸಿಗೆಯ ಬಿಸಿಲು ಸಜೀವ ವಸ್ತುಗಳು ಮಾತ್ರವಲ್ಲ ನಿರ್ಜೀವ ವಸ್ತುಗಳ ಮೇಲೂ ಪರಿಣಾಮ ಬೀರುತ್ತದೆ. ಹೌದು, ನಾವು ನಿತ್ಯ ಬಳಸುವ ಫೋನ್, ಲ್ಯಾಪ್‌ಟಾಪ್ ಗಳು ಕೆಲಸ ಮಾಡುತ್ತಿದ್ದ ಹಾಗೆಯೇ ಬಿಸಿ ಏರಲು ಶುರುವಾಗುತ್ತದೆ. ನಿಮ್ಮ ನಿತ್ಯದ ಬಳಕೆಯ ಗ್ಯಾಜೆಟ್‌ಗಳು ಬೇಸಿಗೆಯಲ್ಲಿ ತಂಪಾಗಿರುವಂತೆ ಮಾಡಲು ಕೆಲವು ಮಾರ್ಗಗಳನ್ನು ಅನುಸರಿಸಬಹುದಾಗಿದೆ.
ಬೇಸಿಗೆಯ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು, ಫೋನ್‌ಗಳು ಮತ್ತು ಗೇಮಿಂಗ್ ಕನ್ಸೋಲ್‌ಗಳು ಅತಿಯಾಗಿ ಬಿಸಿಯಾಗಿ ತಕ್ಷಣ ಹ್ಯಾಂಗ್ ಆಗಿ ಬಿಡುವುದನ್ನು ನೀವು ಅನೇಕ ಬಾರಿ ಗಮನಿಸಿರಬಹುದು. ಇದು ನಮ್ಮ ಕೆಲಸಕ್ಕೆ ಅಡಚಣೆ ಉಂಟು ಮಾಡುತ್ತದೆ.

ಬೇಸಿಗೆಯಲ್ಲಿ ಲ್ಯಾಪ್‌ಟಾಪ್‌ಗಳು ಬಿಸಿಯಾಗದಂತೆ ಏನು ಮಾಡಬೇಕು: ಈಗ ಲ್ಯಾಪ್‌ಟಾಪ್ ಇಲ್ಲದೆ ಬಹುತೇಕರ ಕೆಲಸ ನಡೆಯುವುದೇ ಇಲ್ಲ.ಹಾಗಾಗಿ ಲ್ಯಾಪ್‌ಟಾಪ್ ಬಿಸಿಯಾಗುತ್ತದೆ ಎನ್ನುವ ಕಾರಣಕ್ಕೆ ಬಂದ್ ಮಾಡಿ ಕೂರುವುದು ಸಾಧ್ಯವಿಲ್ಲದ ಮಾತು. ಬದಲಿಗೆ ಲ್ಯಾಪ್‌ಟಾಪ್ ಆನ್ ಇದ್ದುಕೊಂಡೇ ಅದರ ತಾಪಮಾನವನ್ನು ಇಳಿಸುವುದು ಹೇಗೆ ಎನ್ನುವುದನ್ನು ಕಂಡುಕೊಳ್ಳಬೇಕು.
ಬಿಸಿ ಗಾಳಿ ಹೊರ ಹೋಗಲು ಅವಕಾಶ: ಹಿಂಜ್ ಹಿಂಭಾಗದಲ್ಲಿರಲಿ, ಬದಿಗಳಲ್ಲಿರಲಿ ಅಥವಾ ಕೆಳಗೆ ಇರಲಿ, ಬಿಸಿ ಗಾಳಿಯನ್ನು ಹೊರಹಾಕಲು ಅವುಗಳಿಗೆ ಸಾಕಷ್ಟು ಜಾಗವನ್ನು ಒದಗಿಸುವುದು ಬಹಳ ಮುಖ್ಯ.
ಲ್ಯಾಪ್‌ಟಾಪ್ ಅನ್ನು ಮೃದುವಾದ ಮೇಲ್ಮೈಗಳಲ್ಲಿ ಇಡಬೇಡಿ: ಅಂದರೆ ದಿಂಬು, ಹಾಸಿಗೆ, ಕಾರ್ಪೆಟ್‌ಗಳ ಹಾಸಿಗೆಗಳ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವ ಅಭ್ಯಾಸ ಬಹಳ ಮಂದಿಗೆ ಇರುತ್ತದೆ. ಆದರೆ ಇದು ತಪ್ಪು. ಹೀಗೆ ಮಾಡುವಾಗ ಕುಷನಿಂಗ್ ನಿಂದಾಗಿ ಲ್ಯಾಪ್‌ಟಾಪ್ ಫ್ಯಾನ್ ಕೆಲಸ ಮಾಡುವುದಕ್ಕೆ ತೊಂದರೆಯಾಗುತ್ತದೆ. ಲ್ಯಾಪ್‌ಟಾಪ್ ಫ್ಯಾನ್ ಸರಿಯಾಗಿ ಕೆಲಸ ಮಾಡದೇ ಹೋದರೆ ಡಿವೈಸ್ ಬಹಳ ಬೇಗನೇ ಬಿಸಿಯಾಗುತ್ತದೆ. ಹಾಗಾಗಿ ಲ್ಯಾಪ್‌ಟಾಪ್ ಅನ್ನು ಟೇಬಲ್ ಮೇಲಿಟ್ಟುಕೊಂಡೇ ಕೆಲಸ ಮಾಡಿ.
ಲ್ಯಾಪ್‌ಟಾಪ್‌ಗೆ ಕವರ್ ಹಾಕಿದ್ದರೆ ತೆಗೆದುಬಿಡಿ: ಹಲವು ಸಂದರ್ಭಗಳಲ್ಲಿ, ಲ್ಯಾಪ್‌ಟಾಪ್‌ಗೆ ಹಾಕುವ ಕವರ್‌ಗಳು ಗಾಳಿ ಹೊರ ಹೋಗಲು ಇಟ್ಟಿರುವ ಜಾಗವನ್ನೇ ಮುಚ್ಚಿ ಬಿಡುತ್ತವೆ. ಹೀಗಾದಾಗ ಲ್ಯಾಪ್‌ಟಾಪ್ ತಾಪಮಾನ ಹೆಚ್ಚಾಗುತ್ತದೆ. ತಾಪಮಾನ ಹೆಚ್ಚಾಗುತ್ತಿದ್ದ ಹಾಗೆಯೇ ಲ್ಯಾಪ್‌ಟಾಪ್ ಹ್ಯಾಂಗ್ ಆಗುವ ಮೂಲಕ ಕೆಲಸಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಲ್ಯಾಪ್‌ಟಾಪ್‌ಗೆ ಕವರ್ ಹಾಕುವ ಯೋಚನೆ ಬೇಡ.ಒಂದು ವೇಳೆ ಕವರ್ ಇದ್ದರೂ ಈ ಋತುವಿನಲ್ಲಿ ಕವರ್ ತೆಗೆದಿಡುವುದು ಸೂಕ್ತ.
ಬ್ರೈಟ್‌ನೆಸ್ ಕಡಿಮೆ ಮಾಡಿ: ಪ್ರಕಾಶಮಾನವಾದ ಡಿಸ್ಪ್ಲೇ ಪಿಕ್ಸೆಲ್‌ಗಳು ಹೆಚ್ಚಿನ ಶಾಖವನ್ನು ಸೃಷ್ಟಿಸುತ್ತವೆ. ಆದ್ದರಿಂದ ಅದನ್ನು 50% ಕ್ಕೆ ಇಳಿಸುವುದರಿಂದ ಶಾಖದ ಅಲೆಯ ಸಮಯದಲ್ಲಿ ನಿಮ್ಮ ಲ್ಯಾಪ್‌ಟಾಪ್‌ನ ಕಾರ್ಯಕ್ಷಮತೆಯನ್ನು ದೀರ್ಘಾವಧಿಯವರೆಗೆ ಹೆಚ್ಚಿಸಬಹುದು.
ಸೂರ್ಯನ ಪ್ರಖರತೆ ಹೆಚ್ಚಿದ್ದರೂ ಸ್ಮಾರ್ಟ್‌ಫೋನ್ ಕೂಲ್ ಆಗಿರುವಂತೆ ಏನು ಮಾಡಬೇಕು
ಬ್ಯಾಟರಿ ಸೇವರ್ ಮೋಡ್ ಆನ್ ಮಾಡಿಕೊಳ್ಳಿ: ಪವರ್ ಎಫಿಶಿಯೆನ್ಸಿ ಮೋಡ್ ಫೋನ್‌ನ ಕಾರ್ಯಕ್ಷಮತೆಯ ಬೇಡಿಕೆಗಳನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಆಪರೇಟಿಂಗ್ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಫೋನ್ ಬಳಸುವ ಸಮಯ ಕಡಿಮೆಯಾಗಲಿ: ಇದೀಗ ಮೊಬೈಲ್ ಬಳಸದೇ ಇರುವುದು ಬಹಳ ಕಷ್ಟ. ಹಾಗಂತ ಇಡೀ ದಿನ ಮೊಬೈಲ್ ಬಳಸುತ್ತಾ ಇದ್ದರೆ ಬೇಸಿಗೆಯಲ್ಲಿ ಫೋನ್ ಬಹಳ ಬೇಗ ಬಿಸಿಯಾಗಿ ಬಿಡುತ್ತದೆ. ಅಗತ್ಯವಿದ್ದಾಗ ಮಾತ್ರ ಫೋನ್ ಬಳಸುವುದಕ್ಕೆ ಪ್ರಯತ್ನಿಸಿ. ಕೈಯ್ಯಲ್ಲಿ ಫೋನ್ ಇದೆ ಎಂದ ಮಾತ್ರಕ್ಕೆ 24 ಗಂಟೆಯೂ ಫೋನ್‌ನಲ್ಲಿ ಏನನ್ನಾದರೂ ನೋಡುತ್ತಲೇ ಇರಬೇಕು ಎಂದರೆ ಸಮಸ್ಯೆ ತಪ್ಪಿದ್ದಲ್ಲ. ಅದರಲ್ಲಿಯೂ ಮನೆಯ ಹೊರಗಿರುವಾಗ ಅಥವಾ ಬಿಸಿಲಿಗೆ ಇರುವಾಗ ಫೋನ್ ಅತಿಯಾಗಿ ಬಿಸಿಯಾಗುತ್ತದೆ. ಹಾಗಾಗಿ ಈ ಹೊತ್ತಿನಲ್ಲಿ ಫೋನ್ ಬಳಕೆ ಸಾಧ್ಯವಾದಷ್ಟು ಮಿತಿಯಾಗಿರಲಿ.
Summer Heatwave: ನಿಮ್ಮ ಗೇಮ್ಸ್ ಕನ್ಸೋಲ್‌ಗಳನ್ನು ತಂಪಾಗಿ ಇಡುವುದು ಹೇಗೆ ?
ಗಾಳಿ ಹೊರ ಹೋಗಲು ಅವಕಾಶ ನೀಡಿ: ನಿಮ್ಮ ಕನ್ಸೋಲ್ ಅನ್ನು ಟಿವಿ ಸ್ಟ್ಯಾಂಡ್ ಅಥವಾ ಹೋಮ್ ಎಂಟರ್ಟೈನ್ಮೆಂಟ್ ಕ್ಯಾಬಿನೆಟ್ ಒಳಗೆ ಇಟ್ಟಿದ್ದರೆ, ಬಿಸಿ ಗಾಳಿಯನ್ನು ಸರಿಯಾಗಿ ಹೊರಹಾಕಲು ಕನ್ಸೋಲ್‌ಗೆ ಸಾಧ್ಯವಾಗದೇ ಇರಬಹುದು. ಹಾಗಾಗಿ ಸಾಧ್ಯವಾದಷ್ಟು ಗೇಮಿಂಗ್ ಕನ್ಸೋಲ್ ಅನ್ನು ಹೆಚ್ಚು ಸ್ಥಳಾವಕಾಶ ಇರುವಲ್ಲಿ ಇಡಿ.
ಧೂಳು ತೆಗೆಯುತ್ತಿರಿ: ಕನ್ಸೋಲ್ ಅನ್ನು ಆಗಾಗ ಶುಚಿಗೊಳಿಸುತ್ತಾ ಇರಬೇಕು.ಇಲ್ಲವಾದರೆ ಗಾಳಿ ಹೊರ ಹೋಗಲು ಇರುವ ಸ್ಥಳದಲ್ಲಿ ಧೂಳು ಸೇರಿಕೊಂಡು ಬಿಸಿ ಗಾಳಿ ಹೊರ ಹಾಕುವ ಸಾಮರ್ಥ್ಯ ಕಡಿಮೆಯಾಗಬಹುದು.ಕೆಲವೊಮ್ಮೆ PS5 ಒಮ್ಮೆಲೇ ಆಫ್ ಆಗಿ ಬಿಡುತ್ತದೆ. ಇದಕ್ಕೆ ಇದೇ ಕಾರಣ. ಆದ್ದರಿಂದ ವ್ಯಾಕ್ಯೂಮ್ ಕ್ಲೀನರ್ ಮೂಲಕ ಆಗಾಗ ಕನ್ಸೋಲ್‌ನ ಧೂಳು ತೆಗೆಯುತ್ತಿರಬೇಕು. ಹೀಗೆ ಮಾಡುವ ಮೂಲಕ ಗೇಮಿಂಗ್ ಕನ್ಸೋಲ್ ಬಿಸಿಯಾಗದಂತೆ ನೋಡಿಕೊಳ್ಳಬಹುದು.
(ಬರಹ : ರಂಜಿತಾ ಆರ್. ಕೆ)













Click it and Unblock the Notifications