ಮಣಿದ ಸರ್ಕಾರ: ಅತಿಥಿ ಉಪನ್ಯಾಸಕರ ವಜಾ ಆದೇಶ ಹಿಂದಕ್ಕೆ

Subscribe to Oneindia Kannada

ಬೆಂಗಳೂರು, ಫೆಬ್ರವರಿ, 15 : ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸರ್ಕಾರ ಮಣಿದಿದೆ. ಫೆಬ್ರವರಿ 12 ರಂದು ನೀಡಿದ್ದ ವಜಾ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.

ಉನ್ನತ ಶಿಕ್ಷಣ ಸಚಿವ ಟಿ ಬಿ ಜಯಚಂದ್ರ ಈ ಬಗ್ಗೆ ಅದಿಕೃತ ಆದೇಶ ಹೊರಡಿಸಿದ್ದು ಕರ್ತವ್ಯಕ್ಕೆ ಹಾಜಾರಾಗಲು ಅಡ್ಡಿಇಲ್ಲ ಎಂದು ತಿಳಿಸಿದ್ದಾರೆ. ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದರು.[14 ಸಾವಿರ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರದ ಶಾಕ್]

karnataka

ಇದೀಗ ಸರ್ಕಾರ ಅತಿಥಿ ಉಪನ್ಯಾಸಕರನ್ನು ಮಾತುಕತೆಗೆ ಸರ್ಕಾರ ಕರೆದಿದೆ. ಅತಿಥಿ ಉಪನ್ಯಾಸಕರು ಫೆ.17ರಂದು ರಾಜ್ಯಾದ್ಯಂತ ಶಾಲಾ-ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳ ಬಂದ್‌ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಸರ್ಕಾರ ವಜಾ ಆದೇಶವನ್ನು ನೀಡಿತ್ತು.[ಅತಿಥಿ ಉಪನ್ಯಾಸಕರು ಶೂ ಪಾಲಿಶ್ ಮಾಡಿದ್ದೇಕೆ?]

ರಾಜ್ಯದಲ್ಲಿ 14000 ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು ಪ್ರತಿಭಟನೆ ನಡೆಸುತ್ತಿದ್ದರು. ವಜಾ ಆದೇಶ ನೀಡಿದ ಸರ್ಕಾರ ಅತಿಥಿ ಉಪನ್ಯಾಸಕರ ಮೇಲೆ ಒತ್ತಡಬ ತಂದಿತ್ತು. ಇದನ್ನು ಪ್ರತಿಭಟಿಸಿದ ಉಪನ್ಯಾಸಕರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the rally of government first grade college guest lecturers the Karnataka State Government withdraw the order of terminating their services for participating in agitation. Thousands of government first grade college guest lecturers took out a rally from City Railway Station to the Freedom Park on Monday.
Please Wait while comments are loading...