ಕಲೆಕ್ಷನ್‌ ಮಂತ್ರಿ ಪ್ರಿಯಾಂಕ್‌ ಖರ್ಗೆ ಅವರು ಮಾಡುತ್ತಿರುವ ಘನಂದಾರಿ ಕೆಲಸಗಳು

ಬೆಂಗಳೂರು, ನವೆಂಬರ್‌ 08: ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಮತ್ತೆ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ. ತಂದೆಯ ಕೃಪಾಕಟಾಕ್ಷದಿಂದ ಸಿದ್ದರಾಮಯ್ಯರವರ ಹಿಡಿತಕ್ಕೂ ಸಿಗದೆ ಪ್ರಿಯಾಂಕ್‌ ಖರ್ಗೆ ಆಡಿದ್ದೇ ಆಟ ಎನ್ನುವಂತಾಗಿರುವುದು ಕರ್ನಾಟಕದ ದುರಂತ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ರಾಜ್ಯದಲ್ಲಿ #ATMSarkara ಅಧಿಕಾರಕ್ಕೆ ಬಂದ ದಿನದಿಂದಲೂ ಕಲೆಕ್ಷನ್‌ ಮಂತ್ರಿ ಪ್ರಿಯಾಂಕ್‌ ಖರ್ಗೆ ಅವರು ಮಾಡುತ್ತಿರುವ ಘನಂದಾರಿ ಕೆಲಸಗಳು ಎಂದು ರಾಜ್ಯ ಬಿಜೆಪಿ ಪಟ್ಟಿ ಮಾಡಿದೆ.

State BJP lashed out at Minister Priyank Kharge

▪️ ಕಾಸಿಗಾಗಿ ಪೋಸ್ಟಿಂಗ್‌/ಟ್ರಾನ್ಸ್‌ಫರ್‌ ದಂಧೆ
▪️ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ದಂಧೆ
▪️ ಕಿಯೋನಿಕ್ಸ್‌ ಸಂಸ್ಥೆಯಲ್ಲಿ ಪರ್ಸಂಟೇಜ್‌ ದಂಧೆ
▪️ ಕಲಬುರಗಿ ಜಿಲ್ಲೆಯಲ್ಲಿ ಆಪ್ತರ ಗೂಂಡಾಗಿರಿ
▪️ ಕಲಬುರಗಿ ತುಂಬಾ ಹೆಚ್ಚಿದ ಮರಳು ಮಾಫಿಯಾ
▪️ ಫೇಕ್ ನ್ಯೂಸ್‌ ಹೆಸರಲ್ಲಿ ಅಮಾಯಕರಿಗೆ ಬೆದರಿಕೆ
▪️ ಆಪ್ತರಿಂದ ನಗರಸಭೆ ಅಧಿಕಾರಿಗಳ ಮೇಲೆ ಹಲ್ಲೆ

ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ನೀತಿಗಳು ಅವರ ಆಸ್ಥಾನ ಕಲಾವಿದರಿಗೆ, ವಂಧಿಮಾಗದರಿಗೆ ಮಾತ್ರ ಸಹ್ಯ. ಸಿದ್ದರಾಮಯ್ಯರವರ ಹಾಗೂ ಕಾಂಗ್ರೆಸ್‌ ನ ಆರ್ಥಿಕ ನೀತಿಗಳು, ಒಂದು ರಾಜ್ಯದ ಆರ್ಥಿಕ ಸ್ಥಿತಿಯನ್ನು ಹೇಗೆ ದಿವಾಳಿ ಮಾಡುತ್ತದೆ ಎಂಬುದಕ್ಕೆ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ! ಕಾಂಗ್ರೆಸ್ ಸರ್ಕಾರದ ತುಘಲಕ್ ಆರ್ಥಿಕ ನೀತಿಗಳ ಪರಿಣಾಮ ಕರ್ನಾಟಕದ ಜನತೆ ಬರದಿಂದ ಬಸವಳಿಯುವ ಜೊತೆ, ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾದ ಸಂದರ್ಭ ಬಂದೆರಗಿದೆ.

ರಾಜ್ಯದಲ್ಲಿ ದುರಾಡಳಿತ ನೀಡುತ್ತಿರುವ ಕಾಂಗ್ರೆಸ್‌ ಚುನಾವಣೆಗೂ ಮುನ್ನ ಉಚಿತ, ಖಚಿತ, ನಿಶ್ಚಿತ ಎಂದೆಲ್ಲಾ ಕರ್ನಾಟಕದ ಜನತೆಯ ಕಿವಿ ಮೇಲೆ ಇಟ್ಟಿದ್ದ ಹೂವುಗಳೆಲ್ಲವೂ ಬೋಗಸ್!!‌ ಅಧಿಕಾರಕ್ಕೇರಿ ಆರು ತಿಂಗಳು ಮುಗಿಯುತ್ತಾ ಬಂದರೂ ಘೋಷಿಸಿದ ಗ್ಯಾರಂಟಿಗಳಲ್ಲಿ ನುಡಿದಂತೆ ನಡೆಯದಿರುವುದೇ ಕಾಂಗ್ರೆಸ್‌ ಮತ್ತು ಸಿಎಂ ಸಿದ್ದರಾಮಯ್ಯ ಅವರ ಸಾಧನೆ.

State BJP lashed out at Minister Priyank Kharge

ಚುನಾವಣೆಗೂ ಮುನ್ನ ಮನೆ ಮನೆಗೂ ಹಂಚಿದ್ದ ಬೇಷರತ್‌ ಗ್ಯಾರಂಟಿ ಕಾರ್ಡ್‌ಗಳಿಗೆ ನಂತರ ಬೇಕಾಬಿಟ್ಟಿ ಷರತ್ತು ವಿಧಿಸಿದ್ದು, ಕಾಂಗ್ರೆಸ್‌ಗೆ ಮತ ನೀಡಿದರೆ ಮಾತ್ರ ಆ‍್ಯಕ್ಟೀವ್‌ ಆಗುತ್ತವೆ ಎಂದು ಹಂಚಿದ್ದ ಗಿಫ್ಟ್‌ ಕಾರ್ಡ್‌ಗಳಿಗೆ ಒಂದೇ ಒಂದು ಪೈಸೆ ಹಾಕದಿದ್ದದ್ದು, ಇವು ಕಾಂಗ್ರೆಸ್‌ ನಯವಂಚಕತನ ಹಾಗೂ ನಿರ್ಲಜ್ಜ ಲಂಪಟತನಕ್ಕೆ ಕೆಲವು ಸಾಕ್ಷಿಗಳು ಎಂದು ರಾಜ್ಯ ಬಿಜೆಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+