SSLC Results 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಯಾವಾಗ ಹಾಗೂ ವೀಕ್ಷಿಸುವುದು ಹೇಗೆ?:ವೆಬ್‌ಸೈಟ್‌ಗಳ ವಿವರ ಇಲ್ಲಿದೆ

SSLC Result 2025: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಆರಭಂ ಆಗಿದ್ದವು. ಇಂದು ಅಂದರೆ ಏಪ್ರಿಲ್ 4ರಂದು ಮುಕ್ತಾಯವಾಗಿದೆ. ಇದೀಗ ವಿದ್ಯಾರ್ಥಿಗಳ ಗಮನ ಫಲಿತಾಂಶದ ಕಡೆ ನೆಟ್ಟಿದೆ. ಹಾಗಾದ್ರೆ ಫಲಿತಾಂಶ ಯಾವಾಗ ಹಾಗೂ ವೀಕ್ಷಣೆ ಮಾಡುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ ಕರ್ನಾಟಕ SSLC ಪರೀಕ್ಷೆ 1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್ 15, 2025ರಿಂದ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ.

SSLC Results 2025 When Will Result Announced and How to check in Karnataka

2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ಕ್ಕೆ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕರ್ನಾಟಕ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಅನ್ನು ಮೇ 2025ರಲ್ಲಿ ತಾತ್ಕಾಲಿಕವಾಗಿ ನಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯಕ್ಕೂ ಸಿದ್ಧರಾಗಲಿದ್ದಾರೆ. ಬಹುತೇಕ ಏಪ್ರಿಲ್‌ ಕೊನೆಯ ವಾರದೊಳಗೆ ಮೌಲ್ಯಮಾಪನ ಮುಗಿಯಲಿದ್ದು, ಈ ಬಾರಿಯ ಪರೀಕ್ಷೆಯ ಫಲಿತಾಂಶ ಮೇ ಮೊದಲ ವಾರದಲ್ಲಿ ಪ್ರಕಟ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಬಾರಿ ಈಗಾಗಲೇ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಮುಗಿಯುವ ಹಂತಕ್ಕೆ ಬಂದಿದ್ದು, ಏಪ್ರಿಲ್‌ ತಿಂಗಳಲ್ಲೇ ಫಲಿತಾಂಶ ಬರುವ ನಿರೀಕ್ಷೆಯಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗುವ ದಿನಾಂಕ ತಿಳಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲೂ ಮೌಲ್ಯಮಾಪನ ನಡೆಯಲಿದೆ. ಏಪ್ರಿಲ್‌ ಕೊನೆಯ ವಾರದವರೆಗೂ ಮೌಲ್ಯಮಾಪನ ಮುಂದುವರೆಯಲಿವೆ ಎಂದು ತಿಳಿದುಬಂದಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು 2024 ರಲ್ಲಿ ಮೇ 9ರಂದು ಬೆಳಗ್ಗೆ 10:40ಕ್ಕೆ ಪ್ರಕಟ ಮಾಡಲಾಗಿತ್ತು. ಈ ಬಾರಿ ಮೌಲ್ಯಮಾಪನ ಬೇಗನೇ ಶುರು ಆಗುವುದರಿಂದ ಫಲಿತಾಂಶವೂ ಶೀಘ್ರವೇ ಪ್ರಕಟ ಆಗಲಿದೆ. ಜೂನ್‌ನಲ್ಲಿಯೇ ಪಿಯುಸಿ ಪ್ರಥಮ ತರಗತಿಗಳನ್ನು ಆರಂಭಿಸುವ ಉದ್ದೇಶದಿಂದ ಮಂಡಳಿಯು ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?: ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ kseab.karnataka.gov.in ಮತ್ತು karresults.nic.inನಲ್ಲಿ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು. ಕರ್ನಾಟಕ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶ ವೀಕ್ಷಣೆ ಮಾಡಬಹುದು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ವೇಳಾಪಟ್ಟಿ: ಮಾರ್ಚ್ 21 ಪ್ರಥಮ ಭಾಷೆ ಕನ್ನಡ, ಮಾರ್ಚ್ 24 ಗಣಿತ, ಮಾರ್ಚ್ 26 ದ್ವಿತೀಯ ಭಾಷೆ, ಮಾರ್ಚ್ 29 ಸಮಾಜ ವಿಜ್ಞಾನ, ಏಪ್ರಿಲ್ 2 ವಿಜ್ಞಾನ, ಏಪ್ರಿಲ್ 4 ತೃತೀಯ ಭಾಷೆ.

ದ್ವೀತಿಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ: ಮಾರ್ಚ್ 1 ಕನ್ನಡ, ಅರೇಬಿಕ್, ಮಾರ್ಚ್ 3 ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾರ್ಚ್ 4 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾರ್ಚ್ 5 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾರ್ಚ್ 7 ಇತಿಹಾಸ, ಭೌತಶಾಸ್ತ್ರ, ಮಾರ್ಚ್ 10 ಐಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ, ಮಾರ್ಚ್ 12 ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ, ಮಾರ್ಚ್ 13 ಅರ್ಥಶಾಸ್ತ್ರ, ಮಾರ್ಚ್ 15 ಇಂಗ್ಲಿಷ್, ಮಾರ್ಚ್ 17 ಭೂಗೋಳಶಾಸ್ತ್ರ, ಮಾರ್ಚ್ 18 ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ, ಮಾರ್ಚ್ 19 ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್, ಮಾರ್ಚ್ 20 ಹಿಂದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+