SSLC Results 2025 Update: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಮುಂದೂಡಿಕೆ: ಫಲಿತಾಂಶ ಯಾವಾಗ?
SSLC Results 2025 Update: ರಾಜ್ಯದಲ್ಲಿ ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಇನ್ನೂ ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಗಿದಿದ್ದು, ಏಪ್ರಿಲ್ 11ರಿಂದಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭ ಆಗಬೇಕಿತ್ತು. ಆದರೆ ಇದೀಗ ಈ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಹಾಗಾದ್ರೆ ಯಾವಾಗಿನಿಂದ ಹಾಗೂ ಕಾರಣ ಏನೆಂದು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಿಗದಿಪಡಿಸಿದಂತೆ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್ 11ರಿಂದಲೇ ಆರಂಭ ಆಗಬೇಕಿತ್ತು. ಆದರೆ, ಇದೀಗ ಮಂಡಳಿಯು ಮೌಲ್ಯಮಾಪನವನ್ನು ಮುಂದೂಡಿಕೆ ಮಾಡಿದೆ.

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನವು ಏಪ್ರಿಲ್ 15ರಿಂದ ಆರಂಭ ಆಗಲಿದೆ. ಒಂದು ವಾರದಲ್ಲಿಯೇ ಮೌಲ್ಯಮಾಪನ ಮುಕ್ತಾಯ ಆಗಲಿದ್ದು, ಏಪ್ರಿಲ್ ಅಂತ್ಯದಲ್ಲೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಲಾಗುತ್ತಿದೆ. ಹಾಗಾದ್ರೆ ಮೌಲ್ಯಮಾಪನ ದಿನಾಂಕ ಮುಂದೂಡಿಕೆ ಹಾಗೂ ಫಲಿತಾಂಶ ವೀಕ್ಷಣೆ ಮಾಡುವುದುದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೊದಲು ನಿಗದಿ ಮಾಡಿದಂತೆ ಎಸ್ಎಸ್ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್ 11ರಂದೇ ಆರಂಭ ಆಗಬೇಕಿತ್ತು. ಈಗಾಗಲೇ ಮೌಲ್ಯಮಾಪನದಲ್ಲಿ ಭಾಗಿ ಆಗಬೇಕಿದ್ದ ಶಿಕ್ಷಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಿಳಿಸಲಾಗಿತ್ತು. ಆದ್ದರಿಂದ ಅವರು ಕೂಡ ತಯಾರಿ ನಡಸಿಕೊಂಡಿದ್ದರು. ಆದರೆ ಇದೀಗ ಎಲ್ಲರಿಗೂ ಮೌಲ್ಯಮಾಪನ ಮುಂದೆ ಹೋಗಿರುವ ಸಂದೇಶ ಬಂದಿದೆ.
ಏಪ್ರಿಲ್ 12ರಿಂದ ಎರಡು ದಿನ ವಾರಾಂತ್ಯ ರಜೆ ಇರಲಿದೆ. ಅಲ್ಲದೆ, ಸೋಮವಾರ ಡಾ.ಅಂಬೇಡ್ಕರ್ ಅವರ ಜಯಂತಿಯೂ ಇರುವುದರಿಂದ 3 ದಿನದ ಬಳಿಕವೇ ಮೌಲ್ಯಮಾಪನ ಆರಂಭಿಸಿ ಎಂದು ತಿಳಿಸಲಾಗಿದೆ. ಆದ್ದರಿಂದ ಏಪ್ರಿಲ್ 15ರಿಂದಲೇ ಮೌಲ್ಯಮಾಪನ ಆರಂಭವಾಗಲಿದೆ. ಶಿಕ್ಷಕರೂ ಸಹ ಮಂಗಳವಾರದಿಂದಲೇ ಮೌಲ್ಯಮಾಪನ ಪ್ರಕ್ರಿಯೆ ನಡೆಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಶಾಲಾ ಶಿಕ್ಷಣ ಹಾಗೂ ಮೌಲ್ಯ ನಿರ್ಣಯ ಮಂಡಳಿಯಲ್ಲಿನ ಅಧಿಕಾರಿಗಳ ಮಾಹಿತಿ ಪ್ರಕಾರ, ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏಪ್ರಿಲ್ 15ರಿಂದ ಆರಂಭಗೊಂಡರೂ ಬಹುತೇಕ ಒಂದು ವಾರದಲ್ಲಿ ಮುಕ್ತಾಯ ಆಗಲಿದೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆಯಲ್ಲೂ ಮೌಲ್ಯಮಾಪನ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ವಿಷಯವಾರು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಬೆಂಗಳೂರಿನಲ್ಲಿಯೇ ಹೆಚ್ಚಿನ ಕೇಂದ್ರಗಳು ಇರಲಿವೆ.
25,000ಕ್ಕೂ ಅಧಿಕ ಶಿಕ್ಷಕರು, 8.50 ಲಕ್ಷಕ್ಕೂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಿದ್ದಾರೆ. ಇದೀಗ ತಂತ್ರಜ್ಞಾನ ಆಧಾರದಲ್ಲಿ ಅಂಕಗಳ ಅಂತಿಮಗೊಳಿಸುವ ಪ್ರಕ್ರಿಯೆ ಆಗಲಿದೆ. ಆದ್ದರಿಂದ ಮೌಲ್ಯಮಾಪನ ಪ್ರಕ್ರಿಯೆ ಬೇಗ ಮುಗಿಯಲಿದ್ದು, ಈ ತಿಂಗಳ ಅಂತ್ಯದಲ್ಲೇ ಪ್ರಕಟವಾಗಲಿದೆ ಎನ್ನುವ ಮಾಹಿತಿ ಇದೆ.
ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಆರಭಂ ಆಗಿದ್ದು, ಏಪ್ರಿಲ್ 4ಕ್ಕೆ ಮುಕ್ತಾಯವಾಗಿದೆ. ಇದೀಗ ವಿದ್ಯಾರ್ಥಿಗಳ ಗಮನ ಫಲಿತಾಂಶದ ಕಡೆ ನೆಟ್ಟಿದೆ. ಏಪ್ರಿಲ್ ಕೊನೇ ವಾರದಲ್ಲೇ ಫಲೊತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ kseab.karnataka.gov.in ಮತ್ತು karresults.nic.inನಲ್ಲಿ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು. ಕರ್ನಾಟಕ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶ ವೀಕ್ಷಣೆ ಮಾಡಬಹುದು.
ಫಲಿತಾಂಶ ವೀಕ್ಷಣೆ ಹೇಗೆ?
* ಮೊದಲು ಅಧಿಕೃತ ವೆಬ್‌ಸೈಟ್ kseab.karnataka.gov.inಗೆ ಭೇಟಿ ನೀಡಿ.
* ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ.
* ಈ ಎಲ್ಲಾ ಪ್ರಕ್ರಿಯೆಗಳು ಆದ ಬಳು ಫಲಿತಾಂಶ ವೀಕ್ಷಣೆ ಮಾಡಬಹುದು ಹಾಗೂ ಅಂಕಪಟ್ಟಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಫಲಿತಾಂಶ ವೀಕ್ಷಣೆಗಿರುವ ವೆಬ್‌ಸೈಟ್‌ಗಳು
* kseab.karnataka.gov.in
* karresults.nic.in












Click it and Unblock the Notifications