SSLC Results 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ; ಸಮಯ, ವೆಬ್‌ಸೈಟ್‌ಗಳು ಡೌನ್‌ಲೋಡ್‌ ಮಾಡುವ ವಿಧಾನಗಳು ಇಲ್ಲಿವೆ

SSLC Results 2025: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ-1 ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4, 2025ರವರೆಗೆ ನಡೆದಿದ್ದವು. ಇನ್ನು ಇಂದು ಅಂದರೆ ಮೇ 2ರಂದು ಅಂದುಕೊಂಡಂತೆ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಲಿದೆ. ಹಾಗಾದ್ರೆ ಎಷ್ಟು ಗಂಟೆಗೆ, ವೀಕ್ಷಣೆ ಮಾಡುವ ವೆಬ್‌ಸೈಟ್, ಅಂಕಪಟ್ಟಿ ಡೌನ್‌ಲೋಡ್‌ ವಿಧಾನಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇಂದು (ಮೇ 2) ಬೆಳಗ್ಗೆ11:30ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಪ್ರಟಕ ಮಾಡಲಿದೆ. ಸುದ್ದಿಗೋಷ್ಟಿ ನಡೆಸುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಡುಗಡೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ಮಧ್ಯಾಹ್ನ 12 ರಿಂದ ವೆಬ್‌ಸೈಟ್‌ನಲ್ಲಿ ವೀಕ್ಷಣೆ ಮಾಡಬಹುದು.

SSLC Results 2025 Timing website and way to Marks card download

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ಮು ಮಂಡಳಿಯ ಅಧಿಕೃತ ವೆಬ್‌ಸೈಟ್‌ karresults.nic.inನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು. ಅಥವಾ ಕರ್ನಾಟಕ ಡಿಜಿಲಾಕರ್ ಮತ್ತು SMS ಮೂಲಕವೂ ವೀಕ್ಷಣೆ ಮಾಡಬಹುದು.

ಫಲಿತಾಂಶ ವೀಕ್ಷಣೆ ಮಾಡುವ ವೆಬ್‌ಸೈಟ್‌ಗಳು

* kseab.karnataka.gov.in/
* karresults.nic.in

ಎಸ್‌ಎಂಎಸ್‌ ಮೂಲಕ ವೀಕ್ಷಣೆ: ಒಂದು ವೇಳೆ karresults.nic.in ವೆಬ್‌ಸೈಟ್‌ನಲ್ಲಿ ನೋಡಲು ಸರ್ವರ್ ಡೌನ್‌ ಇದ್ದರೆ, ವಿದ್ಯಾರ್ಥಿಗಳು ಎಸ್‌ಎಂಎಸ್‌ ಅಥವಾ ಡಿಜಿಲಾಕರ್ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು KSEEB10 ಎಂದು ಟೈಪ್ ಮಾಡಿ. ಬಳಿಕ ತಮ್ಮ ನೋಂದಣಿ ಸಂಖ್ಯೆಯನ್ನು 56263ಗೆ SMS ಕಳುಹಿಸುವ ಮೂಲಕ ಪರಿಶೀಲಿಸಬಹುದು. ಫಲಿತಾಂಶವನ್ನು ಅದೇ ಮೊಬೈಲ್ ಸಂಖ್ಯೆಗೆ ಲಭ್ಯವಾಗಲಿದೆ.

ಈ ಬಾರಿ ರಾಜ್ಯದ 2,818 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿತ್ತು. ಈ ಪೈಕಿ 4,61,563 ಹುಡುಗರು ಹಾಗೂ 4,34,884 ಹುಡುಗಿಯರು ಸೇರಿದಂತೆ ಸುಮಾರು 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 240 ಕೇಂದ್ರಗಳಲ್ಲಿ 65,000 ಶಿಕ್ಷಕರು ಮೌಲ್ಯಮಾಪನ ನಡೆದಿದೆ ಎಂದು ತಿಳಿದುಬಂದಿದೆ.

ಫಲಿತಾಂಶ ವೀಕ್ಷಣೆ ಮಾಡುವ ವಿಧಾನಗಳು

* karresults.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
* SSLC Result 2025 ಲಿಂಕ್ ಮೇಲೆ ಕ್ಲಿಕ್ ಮಾಡಿ
* ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ 2025 ಲಾಗ್ ಇನ್ ಪೇಜ್ ಓಪನ್‌ ಆಗುತ್ತದೆ.
* ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ
* ನಂತರ ಸಬ್ಮಿಟ್‌ ಬಟನ್ ಮೇಲೆ ಕ್ಲಿಕ್ ಮಾಡಿ
* ಫಲಿತಾಂಶ ವೀಕ್ಷಣೆ ಬಳಿಕ ಅಂಕಪಟ್ಟಿಯ ಪ್ರತಿಯನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದು.

ಕಳೆದ ವರ್ಷ ಅಂದರೆ 2024ರ ಮೇ 9ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಘೋಷಣೆ ಮಾಡಲಾಗಿತ್ತು. ಈ ವೇಳೆ ರಾಜ್ಯದಲ್ಲಿ ಒಟ್ಟಾರೆ ಶೇಕಡ 73.40ರಷ್ಟು ಫಲಿತಾಂಶ ಬಂದಿತ್ತು. ಉಡುಪಿ- ಪ್ರಥಮ ಸ್ಥಾನ (94%), ದಕ್ಷಿಣ ಕನ್ನಡ - ದ್ವೀತಿಯ ಸ್ಥಾನ (92.12%), ಶಿವಮೊಗ್ಗ- ತೃತೀಯ ಸ್ಥಾನ (88.67%) ಪಡೆದಿತ್ತು. ಯಾದಗಿರಿ - ಕೊನೇ ಸ್ಥಾನ- (ಶೇ.50.59) ಪಡೆದುಕೊಂಡಿತ್ತು. ಈ ಬಾರಿ ಅಂದರೆ 2025ರಲ್ಲಿ ಏನಾಗಲಿದ ಎಂದು ಇನ್ನೂ ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ.

2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು. ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಎಸ್ಎಸ್​ಎಲ್​ಸಿ ಫಲಿತಾಂಶದ ಕುರಿತು ಮಾಹಿತಿ ನೀಡಿದರು.

ಈ ಬಾರಿಯ ಎಸ್​ಎಸ್​ಎಲ್​ಸಿ ಒಟ್ಟು ಫಲಿತಾಂಶ 66.14ರಷ್ಟಿದ್ದು, ಕಳೆದ ಭಾರಿಗಿಂತ ಈ ಬಾರಿ ಶೇಕಡಾ 8ರಷ್ಟು ಫಲಿತಾಂಶ ಹೆಚ್ಚಳ ಆಗಿದೆ. ಪರೀಕ್ಷೆ ಬರೆದಿದ್ದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಅವರು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+