SSLC Results: ನಟ ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಪುತ್ರ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ
SSLC Results 2025: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4, 2025ರವರೆಗೆ ನಡೆದಿದ್ದವು. ಇನ್ನು ಮೇ 2ರಂದು ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಿದ್ದು, ಬಡಕುಟುಂಬದ ಹಲವಾರು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾದ್ದಾರೆ. ಹಾಗೆಯೇ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಛಲಪತಿ ಅವರ ಪುತ್ರ ಸಹ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟದ ವೇಳೆ ಬಳ್ಳಾರಿ ಜಿಲ್ಲೆಯ ಲಾರಿ ಡ್ರೈವರ್ ಪುತ್ರಿ ಸಂಜನಾ ಬಾಯಿ ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಹಾಗೆಯೇ ಇದೇ ವೇಳೆ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಪರ್ಸನಲ್ ಬಾಡಿಗಾರ್ಡ್ ಆಗಿದ್ದ ಛಲಪತಿ ಅವರ ಪುತ್ರಿ ಅಮೂಲ್ಯ ಕೂಡ 600ಕ್ಕೆ 566 ಅಂಕ ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದರು. ಇದೀಗ ಎಸ್‌ಎಸ್‌ಎಲ್‌ಸಿಯಲ್ಲಿ ಅವರ ಪುತ್ರ ಹರ್ಷವರ್ಧನ್ ಉತ್ತಮ ಸಾಧನೆ ಮಾಡಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಛಲಪತಿಯವರ ಪುತ್ರನ ಸಾಧನೆ: ಛಲಪತಿ ಹಾಗೂ ಲಕ್ಷ್ಮೀ ದಂಪತಿ ಪುತ್ರ ಹರ್ಷವರ್ಧನ್ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ 125 ಅಂಕಗಳಿಗೆ 121, ಇಂಗ್ಲೀಷ್ 100ಕ್ಕೆ 93, ಹಿಂದಿ 100ಕ್ಕೂ 100, ಗಣಿತ 97, ವಿಜ್ಞಾನ 86 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಸೇರಿ ಒಟ್ಟು 625ಕ್ಕೆ 595 ಅಂಕಗಳನ್ನು ಗಳಿಸಿದ್ದಾರೆ. ಇನ್ನು ಇವರ ಸಾಧನೆಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದ ಶುಭಹಾರೈಕೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಯಾವ ಭಾಷೆಯಲ್ಲಿ ಎಷ್ಟು ಅಂಕ?
* ಕನ್ನಡ - 121
* ಇಂಗ್ಲೀಷ್ - 93
* ಹಿಂದಿ - 100
* ಗಣಿತ - 97
* ವಿಜ್ಞಾನ - 86
* ಸಮಾಜ ವಿಜ್ಞಾನ - 98
ನಟ ಪುನೀತ್ ರಾಜ್ ಕುಮಾರ್ ಇದ್ದಾಗ ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದರೂ, ಅವರೊಂದಿಗೆ ಛಲಪತಿ ಇದ್ದೇ ಇರುತ್ತಿದ್ದರು. ಹೀಗೆ ಪುನೀತ್ ರಾಜ್‌ಕುಮಾರ್ ಅವರ ಭದ್ರತೆಯಲ್ಲಿ ಯಾವುದೇ ಕುಂದು ಆಗದಂತೆ ಅವರು ಕೆಲಸ ಮಾಡುತ್ತಿದ್ದರು. ನಿನ್ನಿಂದಲೇ ಸಿನಿಮಾ ಚಿತ್ರಿಕರಣ ನಡೆಯುತ್ತಿದ್ದ ವೇಳೆ, ನ್ಯೂಯಾರ್ಕ್ ಶೂಟಿಂಗ್ ಶೆಡ್ಯೂಲ್ ಮುಗಿಸಿದ ಬಳಿಕ ಪುನೀತ್ ರಾಜ್‌ಕುಮಾರ್‌ಗೆ ಬಾಡಿಗಾರ್ಡ್ ಆಗಿ ಛಲಪತಿ ಕೆಲಸಕ್ಕೆ ಸೇರಿಕೊಂಡಿದ್ದರು.
ಪುನೀತ್ ರಾಜ್ ಕುಮಾರ್ ಅವರಿಗೆ ತುಂಬಾ ವರ್ಷಗಳಿಂದ ಬಾಡಿಗಾರ್ಡ್ ಆಗಿದ್ದ ಛಲಪತಿ ಅವರು ಕೊನೆಗೆ ತಮ್ಮ ಕೆಲಸವನ್ನ ತೊರೆದಿದ್ದರು. ಅಪ್ಪು ನಿಧನರಾದ ಕೆಲ ತಿಂಗಳಲ್ಲೇ ಭಾರದ ಮನಸ್ಸಿನಿಂದಲೇ ತಮ್ಮ ಕೆಲಸವನ್ನು ತೊರೆದಿದ್ದರು ಎಂದು ತಿಳಿದುಬಂದಿದೆ.
ಛಲಪತಿ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಅಮೂಲ್ಯ ಎಂಬುವವರು ದ್ವಿತೀಯ ಪಿಯುಸಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾತೆ. ವಾಣಿಜ್ಯ ವಿಭಾಗದಲ್ಲಿ ಓದಿದ ಅಮೂಲ್ಯ ಒಟ್ಟಾರೆ 600ಕ್ಕೆ 566 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಶೇಕಡ 94.33 ಪರ್ಸಂಟೇಜ್ ಪಡೆದು ಗಮನ ಸೆಳೆದಿದ್ದಾರೆ. ಈ ಬಗ್ಗೆ ತಂದೆ ಛಲಪತಿ ಕೂಡ ಹೆಮ್ಮೆಪಟ್ಟಿದ್ದಾರೆ.
ಯಾವ ಭಾಷೆಯಲ್ಲಿ ಎಷ್ಟು ಅಂಕ?
* ಕನ್ನಡ - 98
* ಇಂಗ್ಲೀಷ್ - 90
* ಅರ್ಥಶಾಸ್ತ್ರ - 97
* ಬಿಸಿನೆಸ್ ಸ್ಟಡೀಸ್ - 90
* ಅಕೌಂಟೆನ್ಸಿ - 96
* ಸಂಖ್ಯಾಶಾಸ್ತ್ರ - 95












Click it and Unblock the Notifications