SSLC Results 2025: ಎಸ್‌ಎಸ್‌ಎಲ್‌ಸಿ ಗ್ರೇಸ್ ಮಾರ್ಕ್ಸ್ ಗುಡ್‌ನ್ಯೂಸ್ ಇಲ್ಲಿದೆ!
SSLC Marks: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಬರುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ತುಸು ಕಠಿಣ ಅಂತಲೇ ಹೇಳಬಹುದು. ಕಳೆದ ಬಾರಿ ಶಿಕ್ಷಣ ಇಲಾಖೆಯು ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಬೇಕು ಇಲ್ಲವೇ ಉತ್ತಮ ಫಲಿತಾಂಶ ಮತ್ತು ಸುಧಾರಣೆ ತರಬೇಕು ಎನ್ನುವ ಉದ್ದೇಶದಿಂದ ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸಿತ್ತು. ಅಲ್ಲದೇ ಕಳೆದ ಬಾರಿ ಶಿಕ್ಷಣ ಇಲಾಖೆಯು ತೆಗೆದುಕೊಂಡಿದ್ದ ಕೆಲವೊಂದು ಕ್ರಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಆದರೆ, ಇದಕ್ಕೆ ಶಿಕ್ಷಣ ತಜ್ಞರು ಸೇರಿದಂತೆ ಹಲವರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಗರಂ ಆಗಿದ್ದರು. ಅದರ ಪರಿಣಾಮ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮೇಲೆ ಆಗುವ ಸಾಧ್ಯತೆ ಇದೆ.
ಹೌದು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ- 1ಕ್ಕೆ 8,96,447 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 15,881 ಶಾಲೆಗಳ ವಿದ್ಯಾರ್ಥಿಗಳು ಕರ್ನಾಟಕದ 2,818 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಈ ಬಾರಿ ಬರೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಬಹು ಮುಖ್ಯಘಟ್ಟ ಎಂದು ಹೇಳಲಾಗುತ್ತದೆ. ಕಳೆದ ಬಾರಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತುಸು ನಿರಾಳತೆ ಇತ್ತು. ಆದರೆ ಈ ಬಾರಿ ಅದು ಇಲ್ಲ. ಆದರೆ ಇದನ್ನು ಪರೀಕ್ಷೆಯ ಪೂರ್ವವೇ ತಿಳಿಸಲಾಗಿತ್ತು. ಹೀಗಾಗಿ, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೊದಲಿನಿಂದಲೇ ಇದಕ್ಕೆ ಪೂರ್ವ ಸಿದ್ಧತೆ ನಡೆಸಿದ್ದರು.

ಗರಂ ಆಗಿದ್ದ ಸಿಎಂ: ಕಳೆದ ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರದ ಗಮನಕ್ಕೂ ತರದಂತೆ ತಾವೇ ಗ್ರೇಸ್ ಮಾರ್ಕ್ಸ್ ನೀಡುವಂತಹ ಮಹತ್ವದ ಕ್ರಮಕ್ಕೆ ಮುಂದಾಗಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಡಲಾಗಿತ್ತು. ಆದರೆ, ಇದಕ್ಕೆ ಶಿಕ್ಷಣ ತಜ್ಞರಿಂದ ವಿರೋಧ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಗರಂ ಆಗಿದ್ದರು. ಕೂಡಲೇ ಗ್ರೇಸ್ ಮಾರ್ಕ್ಸ್ ರದ್ದು ಮಾಡುವುದಕ್ಕೆ ಸೂಚಿಸಲಾಗಿತ್ತು.
ಈ ಬಾರಿ ಇರಲ್ಲ ಗ್ರೇಸ್ ಮಾರ್ಕ್ಸ್: ಶಿಕ್ಷಣ ಇಲಾಖೆಯು ಕಳೆದ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಗ್ರೇಸ್ ಮಾರ್ಕ್ಸ್ ಕೊಟ್ಟಿತ್ತು. ಇದರಿಂದ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸಹ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಈ ಬಾರಿ ಕಳೆದ ಬಾರಿಯಂತೆ ಗ್ರೇಸ್ ಮಾರ್ಕ್ಸ್ ಇಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಸುಧಾರಣೆಗೆ ಪರಿಚಯಿಸಲಾಗಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿಯನ್ನು ಈ ವರ್ಷದಿಂದ ತೆಗೆಯಲಾಗಿದೆ. 2024ಕ್ಕೂ ಹಿಂದೆ ಇದ್ದಂತೆಯೇ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕವನ್ನು ಶೇ 35ಕ್ಕೆ ನಿಗದಿ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ ಇಲ್ಲೊಂದು ಗುಡ್‌ನ್ಯೂಸ್ ಇದೆ.

ಎಸ್‌ಎಲ್‌ಎಲ್‌ಸಿ ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಎಷ್ಟು: ವಿದ್ಯಾರ್ಥಿಗಳಿಗೆ ಶೇ 10ರಷ್ಟು ಎಲ್ಲಾ ವಿಷಯಗಳಿಗೂ ಗ್ರೇಸ್ ಮಾರ್ಕ್ಸ್ ಇರಲ್ಲ ಆದರೆ, ಕೆಲವೇ ಮಾರ್ಕ್ಸ್‌ಗಳಿಂದ ಫೇಲ್ ಆಗುವ ಸಾಧ್ಯತೆ ಇರುವ ಮಕ್ಕಳಿಗೆ ಈ ಬಾರಿಯೂ ಗುಡ್‌ನ್ಯೂಸ್ ಇರಲಿದೆ. ಎಂದಿನಂತೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಗರಿಷ್ಠ ಮೂರು ವಿಷಯಗಳಲ್ಲಿ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಮುಂದುವರಿಯಲಿದೆ. ಇದರಿಂದ ಕಳೆದ ಬಾರಿ ಒಟ್ಟಾರೆ ಶೇ.20ರಷ್ಟು ಗ್ರೇಸ್ ಅಂಕ ನೀಡುವ ಬದಲಿಗೆ, ಈ ಬಾರಿ ಶೇ.10ಕ್ಕೆ ಸೀಮಿತವಾಗಲಿದೆ ಎಂದು ಹೇಳಲಾಗಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ 35 ಅಂಕಗಳನ್ನು ಪಡೆಯಬೇಕು. ಇನ್ನುಳಿದ ವಿಷಯಗಳಲ್ಲಿ ವಿದ್ಯಾರ್ಥಿಯು ಲಿಖಿತ ಪರೀಕ್ಷೆಯಲ್ಲಿ 28 ಅಂಕಗಳನ್ನು ಗಳಿಸಬೇಕು. ಆಂತರಿಕ ಅಂಕಗಳೊಂದಿಗೆ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 35 ಅಂಕಗಳನ್ನು ಗಳಿಸಬೇಕು. ವಿದ್ಯಾರ್ಥಿಯು ಮೂರು ವಿಷಯಗಳಲ್ಲಿ ಅನುತ್ತೀರ್ಣರಾದರೆ 10 ಗ್ರೇಸ್ ಅಂಕಗಳನ್ನು ನೀಡುವ ಮೂಲಕ, ಅವನು/ಅವಳು ಉತ್ತೀರ್ಣನಾಗಲು ಕನಿಷ್ಠ ಅಂಕಗಳನ್ನು (219) ದಾಟಿದರೆ, ಗ್ರೇಸ್ ಅಂಕಗಳು ಸಿಗಲಿವೆ.












Click it and Unblock the Notifications