ಅಮವಾಸ್ಯೆ ದಿನ ಹಂಪಿಯಲ್ಲಿ ಶ್ರೀರಾಮುಲು- ಜನಾರ್ದನ ರೆಡ್ಡಿ ರಹಸ್ಯ ಪೂಜೆ?

ಬಳ್ಳಾರಿ, ಫೆ.1: ಆಪ್ತ ಸ್ನೇಹಿತರಾದ ಸಾರಿಗೆ ಸಚಿವ ಶ್ರೀರಾಮುಲು ಮತ್ತು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆಯಲ್ಲಿ ಅಮವಾಸ್ಯೆಯ ದಿನ ಮಂಗಳವಾರ ರಹಸ್ಯ ಪೂಜೆಯೊಂದನ್ನು ನೆರವೇರಿಸಿದ್ದಾರೆ.

ಶ್ರೀರಾಮುಲು ಅವರಿಗೆ 16 ವರ್ಷಗಳ ಬಳಿಕ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಸಿಕ್ಕಿದೆ. ಇದೇ ಸಂದರ್ಭದಲ್ಲಿ ಗಣಿ ಹಗರಣದಲ್ಲಿ ಸಿಲುಕಿ ಹಲವು ವರ್ಷಗಳ ಕಾಲ ಬಳ್ಳಾರಿಯಿಂದ ಹೊರಗೆ ಇದ್ದ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಜಿಲ್ಲೆಯಲ್ಲಿ ವಾಸಿಸಲು ಅವಕಾಶ ನೀಡಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರಿಂದ ಸಂತಸಗೊಂಡಿರುವ ಇಬ್ಬರು ಗೆಳೆಯರು ಜಿಲ್ಲೆಯಲ್ಲಿ ಸುತ್ತಾಡುತ್ತಿದ್ದಾರೆ. ರಾಜಕೀಯವಾಗಿ ಭದ್ರನೆಲೆ ಆಗಿರುವ ಬಳ್ಳಾರಿಯಲ್ಲಿ ಮತ್ತೊಮ್ಮೆ ರಾಜಕೀಯವಾಗಿ ಪ್ರಾಬಲ್ಯ ಹೊಂದಲು ಪ್ರಯತ್ನ ಆರಂಭಿಸಿದ್ದಾರೆ.

ಮಂಗಳವಾರ ಅಮವಾಸ್ಯೆ ಇದೆ. ಹಂಪಿಯಲ್ಲಿರುವ ತೋಟದ ಆಶ್ರಮದಲ್ಲಿ ಇಬ್ಬರು ಗೆಳೆಯರು ವಿಶೇಷ ಪೂಜೆ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಗಣಿ ನಾಡಿನಲ್ಲಿ ಮತ್ತೆ ರಾಜಕೀಯ ಅಲೆ ಎಬ್ಬಿಸುವ ಆಲೋಚನೆಯಲ್ಲಿರುವ ನಾಯಕರು ಒಳಿತಿಗಾಗಿ ಈ ಪೂಜೆ ನಡೆಸಿದ್ದಾರೆ ಎಂದು ಅವರ ಆಪ್ತ ವಲಯ ಹೇಳುತ್ತಿದೆ.

Sriramulu Janardhan Reddy Special Pooja During Amavasya in Hampi

ಹಂಪಿಯ ತೋಟದ ಆಶ್ರಮದಲ್ಲಿ ವಿಶೇಷ ಕುಂಡಲಿ ರಚಿಸಿ, ಕಳಶಗಳನ್ನು ಇಟ್ಟು ಪೂಜೆ ನೆರವೇರಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಹಲವು ಹೋಮ ಹವನಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಇಬ್ಬರು ಗೆಳೆಯರು ಪಂಚೆಯುಟ್ಟು ಪೂಜೆಯಲ್ಲಿ ಪಾಲ್ಗೊಂಡಿರುವ ಫೋಟೋಗಳು ಲಭ್ಯವಾಗಿವೆ.

Sriramulu Janardhan Reddy Special Pooja During Amavasya in Hampi

ತೆಪ್ಪದಲ್ಲಿ ವಿಹಾರ:

ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ತುಂಗಭದ್ರಾ ನದಿಯಲ್ಲಿ ತೆಪ್ಪದಲ್ಲಿ ವಿಹಾರ ಮಾಡಿ ಸೋಮವಾರ ಆನೆಗೊಂದಿಯ ಪೌರಾಣಿಕ ಸ್ಥಳಗಳನ್ನು ವೀಕ್ಷಣೆ ಮಾಡಿದ್ದಾರೆ.

Sriramulu Janardhan Reddy Special Pooja During Amavasya in Hampi

ಇದಕ್ಕೂ ಮುನ್ನ ಹಂಪಿಯ ಸ್ಮಾರಕಗಳಿಗೂ ಭೇಟಿ ನೀಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಸಂದರ್ಭದಲ್ಲಿ ಹಂಪಿ ವಿರೂಪಾಕ್ಷನ ದರ್ಶನ ಪಡೆದಿದ್ದಾರೆ. ಜೊತೆಗೆ ಹಂಪಿಯ ಸುತ್ತಮುತ್ತ ಓಡಾಡಿ ಹಲವು ಸ್ಥಳಗಳ ವೀಕ್ಷಣೆ ಮಾಡಿದ್ದಾರೆ.

Sriramulu Janardhan Reddy Special Pooja During Amavasya in Hampi

ಹಲವು ವರ್ಷಗಳ ಕಾಲ ಬಳ್ಳಾರಿ ಜಿಲ್ಲೆಯಿಂದ ಹೊರಗೆ ಉಳಿದಿದ್ದ ಜನಾರ್ದನ ರೆಡ್ಡಿ ಅವರಿಗೆ ಈಗ ಜಿಲ್ಲೆಯ ಪ್ರವೇಶ ದೊರೆತಿರುವುದು ಸಂತಸ ಮೂಡಿಸಿದ್ದು, ಈ ಕಾರಣದಿಂದ ಜಿಲ್ಲೆಯ ದೇವಸ್ಥಾನಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಆಪ್ತ ಸ್ನೇಹಿತನೊಂದಿಗೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+