Get Updates
Get notified of breaking news, exclusive insights, and must-see stories!

SWR: ಹೊಸ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಸರ್ವೆ, ಯಾವ ಮಾರ್ಗಗಳು, ಯೋಜನೆ ವಿವರ

ಬೆಂಗಳೂರು, ಡಿಸೆಂಬರ್ 25: ದೇಶಾದ್ಯಂತ ರೈಲ್ವೆ ಮಾರ್ಗಗಳು ವಿದ್ಯುತ್ ಲೈನ್‌ಗಳಾಗಿ ಅಪ್‌ಗ್ರೇಡ್ ಆಗುತ್ತಿವೆ. ಅಲ್ಲದೇ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತದೆ. ಅದರಂತೆ ಇದೀಗ ನೈಋತ್ಯ ರೈಲ್ವೆ (SWR) ತನ್ನ ವ್ಯಾಪ್ತಿಯಲ್ಲಿನ ಹೊಸ ಮಾರ್ಗಗಳಲ್ಲಿ ಸರ್ವೆ ಮಾಡಲು ನಿರ್ಧರಿಸಿದೆ.

ಹೌದು, ರೈಲ್ವೇ ಮೂಲಸೌಕರ್ಯವನ್ನು ಆಧುನೀಕರಿಸುವ ನಿರ್ಧಾರದ ಭಾಗವಾಗಿ ಹೆಜ್ಜೆಯಲ್ಲಿ, ನೈಋತ್ಯ ರೈಲ್ವೆ (SWR) ನಿರ್ಮಾಣ ಹಂತದಲ್ಲಿರುವ ವಿವಿಧ ಹೊಸ ಮಾರ್ಗಗಳ ವಿದ್ಯುದ್ದೀಕರಣಕ್ಕಾಗಿ ಸಮೀಕ್ಷೆಗಳನ್ನು ನಡೆಸಲು ಸಜ್ಜಾಗಿದೆ.

South Western Railway Ready to Electrification Survey in New Line: Know Route, Project details

DY CEE/TRD/CN/BNC ಈ ವಿದ್ಯುದ್ದೀಕರಣ ಸಮೀಕ್ಷೆಗಳಿಗೆ ಸಂಬಂಧಿಸಿದ ಇ-ಟೆಂಡರ್‌ಗಳನ್ನು ಆರಂಭಿಸಿದೆ. ಯಾವ ಮಾರ್ಗಗಳಲ್ಲಿ ಸರ್ವೆ ನಡೆಯಲಿದೆ, ಯೋಜನೆಯ ವಿವರಗಳು ಇಲ್ಲಿವೆ.

ಯೋಜನೆಯ ಮಾಹಿತಿ

ಜಾಹೀರಾತಿನ ಒಟ್ಟು ಮೌಲ್ಯ: 11523673 ರೂಪಾಯಿ

ಯೋಜನೆ ಮುಕ್ತಾಯದ ಅವಧಿ: ಎರಡು ವರ್ಷ (24 ತಿಂಗಳು)

ನಿರ್ದಿಷ್ಟ ವಿಭಾಗಗಳ ವಿದ್ಯುದೀಕರಣ

ಗದಗ - ವಾಡಿ: ಸಂಪೂರ್ಣ ವಿಭಾಗ

ಗಿಣಿಗೇರಾ - ರಾಯಚೂರು: ಸಂಪೂರ್ಣ ವಿಭಾಗ

ಬಾಗಲಕೋಟೆ- ಕುಡಚಿ: ಸಂ ಮಧ್ಯದ ಮಾರ್ಗ

ತುಮಕೂರು-ದಾವಣಗೆರೆ ಮಾರ್ಗ

ತುಮಕೂರು- ಕೊರಟಗೆರೆ (29.50 ಕಿಮೀ ಮಾರ್ಗ)

ಊರುಕೆರೆ (11.00ಕಿಮೀ) ತಿಮ್ಮರಹನಹಳ್ಳಿ (24.500 ಕಿಮೀ)

ಚಿತ್ರದುರ್ಗ (141.650 ಕಿಮೀ) ತೊಲಹುಣ್ಸೆ (193.240 ಕಿಮೀ)

ಪಾವಗಡ (107.800 ಕಿಮೀ) ದೊಡ್ಡಹಳ್ಳಿ (122.650 ಕಿಮೀ)

ದೊಡ್ಡಹಳ್ಳಿ (122.650 ಕಿಮೀ)ಯಿಂದ ರಾಯದುರ್ಗ (206.53 ಕಿಮೀ)

South Western Railway Ready to Electrification Survey in New Line: Know Route, Project details

ಹೆಚ್ಚುವರಿ ವಿದ್ಯುದ್ದೀಕರಣ ವಿಭಾಗಗಳ ಮಾಹಿತಿ

ಶಿಕಾರಿಪುರ- ರಾಣಿಬೆನ್ನೂರು: ಸಂಪೂರ್ಣ ವಿಭಾಗ

ಆಲೂರು - ಬೇಲೂರು: ಸಂಪೂರ್ಣ ವಿಭಾಗ

ಧಾರವಾಡ-ಬೆಳಗಾವಿ: ಸಂಪೂರ್ಣ ವಿಭಾಗ

ತುಮಕೂರು-ದಾವಣಗೆರೆ: ತಿಮ್ಮರಹನಹಳ್ಳಿ (24.500 ಕಿಮೀ) ಚಿತ್ರದುರ್ಗ (141.650 ಕಿಮೀ)

ತುಮಕೂರು-ರಾಯದುರ್ಗ: ಕೊರಟಗೆರೆ (29.50 ಕಿಮೀ) ಪಾವಗಡ (107.800 ಕಿಮೀ)

ಸರ್ವೆ, ವಿದ್ಯುದೀಕರಣ ಕೆಲಸದ ವ್ಯಾಪ್ತಿ

ಈ ಮೇಲಿನ ಮಾರ್ಗಗಳ ನಿಖರ ಸಮೀಕ್ಷೆ ನಡೆಸಲಿರುವ ಯೋಜನೆಯಲ್ಲಿ ಪೆಗ್ಗಿಂಗ್ ಯೋಜನೆಗಳು, ವೈರಿಂಗ್ ರೇಖಾಚಿತ್ರಗಳು ಮತ್ತು ವಿಭಾಗೀಕರಣ ರೇಖಾಚಿತ್ರಗಳನ್ನು ಒಳಗೊಂಡಂತೆ ಒಎಚ್ಇ ರೇಖಾಚಿತ್ರಗಳ ತಯಾರಿಕೆ ಸಹ ಒಳಗೊಂಡಿದೆ. ಸಾಮಾನ್ಯ ವಿದ್ಯುತ್ ಸರಬರಾಜು ವ್ಯವಸ್ಥೆಗಳು, ಉಪ-ಕೇಂದ್ರಗಳಿಗೆ ಸ್ಥಳ ಯೋಜನೆ, ಸ್ವಿಚಿಂಗ್ ಸ್ಟೇಷನ್‌ಗಳು, ಒಎಚ್‌ಇ (ಓವರ್‌ಹೆಡ್ ಸಲಕರಣೆ) ಡಿಪೋ ಮತ್ತು ಟವರ್ ಕಾರ್ ಸೈಡಿಂಗ್‌ಗಳು ಸರ್ವೆ ಯೋಜನೆಯ ಪ್ರಮುಖ ನಿರ್ಣಾಯಕ ಅಂಶವಾಗಿವೆ.

ಕೆಪಿಟಿಸಿಎಲ್ ಜತೆ ಸಮನ್ವಯ

ಇದರೊಂದಿಗೆ ಹೆಚ್ಚುವರಿಯಾಗಿ ಟ್ರ್ಯಾಕ್ ಲೇಔಟ್/ಸಿಗ್ನಲ್ ಸ್ಥಳಗಳನ್ನು ಪರಿಗಣಿಸುವುದು, ಅವಶ್ಯಕತೆಗೆ ಅನುಗುಣವಾಗಿ ಸರ್ವೆ ನಡೆಸಲಾಗುವುದು. ಹತ್ತಿರದ ಜಿಎಸ್‌ಎಸ್‌ ನಿಂದ ಪೂರೈಕೆಯ ಕಾರ್ಯಸಾಧ್ಯತೆಯನ್ನು ಪಡೆಯುವುದು. ತಡೆ ರಹಿತ ವಿದ್ಯುತ್ ಪೂರೈಕೆಗಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಂಪನಿ (ಪಿಟಿಸಿಎಲ್) ಅಧಿಕಾರಿಗಳ ಜತೆ ಸಮನ್ವಯ ಸಾಧಿಸುವುದು ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.

ಟ್ರಾನ್ಸ್ಮಿಷನ್ ಲೈನ್‌ನ ಮಾರ್ಗ

ಟ್ರಾನ್ಸ್ಮಿಷನ್ ಲೈನ್‌ನ ಮಾರ್ಗದ ಉದ್ದವನ್ನು ಸಮೀಕ್ಷೆ ಮಾಡುವುದು. ಶಾಸನಬದ್ಧ ನಿಬಂಧನೆಗಳ ಪ್ರಕಾರ ಗುರುತಿಸಲಾದ ಮಾರ್ಗದಲ್ಲಿ ಪರಿಹಾರವನ್ನು ಮೌಲ್ಯಮಾಪನ ಮಾಡುವುದು ಎಲ್ಲ ಅಂಶಗಳು ಈ ಯೋಜನೆಯಲ್ಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಯೋಜನೆಯ ಅಂತಿಮ ಹಂತದ ಒಎಚ್‌ಇ ರೇಖಾಚಿತ್ರಗಳನ್ನು ರಚಿಸುವುದು, ಇದರಲ್ಲಿ ವೈರಿಂಗ್ ರೇಖಾಚಿತ್ರಗಳು, ವಿಭಾಗ ರೇಖಾಚಿತ್ರಗಳು ಮತ್ತು ಸಾಮಾನ್ಯ ವಿದ್ಯುತ್ ಸರಬರಾಜು ವ್ಯವಸ್ಥೆಗಳನ್ನು ಮಾಡಲಾಗುವುದು. .

ನೈಋತ್ಯ ರೈಲ್ವೆಯು 25kV AT ಫೀಡಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ನಿರ್ದಿಷ್ಟ ವಿಭಾಗಗಳನ್ನು ವಿದ್ಯುದೀಕರಿಸುವುದು ಮುಖ್ಯ ಗುರಿ ಹೊಂದಿದೆ. 2x25kV ಒಎಚ್‌ಇ (ಓವರ್‌ಹೆಡ್ ಸಲಕರಣೆ) ಅನ್ನು ಬಳಸಿಕೊಳ್ಳಲಾಗುತ್ತದೆ.

ನೈಋತ್ಯ ರೈಲ್ವೆಯ (SWR) ಈ ಅಭಿವೃದ್ಧಿ ಕಾರ್ಯಗಳು ಈ ಪ್ರದೇಶದಲ್ಲಿನ ರೈಲ್ವೆ ಜಾಲದ ದಕ್ಷತೆಗೆ ಗಣನೀಯವಾಗಿ ಕೊಡುಗೆ ನೀಡಲಿದೆ ಎಂದು ಇಲಾಖೆಯು ವಿಶ್ವಾಸ ವ್ಯಕ್ತಪಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+