ಮೋದಿ 2+1 ಹೇಳಿಕೆಗೆ ಸಿದ್ದರಾಮಯ್ಯ ಟ್ವಿಟ್ಟರ್‌ ಪ್ರತಿಕ್ರಿಯೆ

Recommended Video

      ನರೇಂದ್ರ ಮೋದಿಯವರ 2+1 ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಸಿದ್ದು ಪ್ರತಿಕ್ರಿಯೆ | Oneindia Kannada

      ನರೇಂದ್ರ ಮೋದಿ ಅವರು ಇಂದು ಚಾಮರಾಜನಗರದಲ್ಲಿ, ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಹಾಗೂ ಅವರ ಮಗ ಯತೀಂದ್ರ ಅವರಿಗೆ ವರುಣಾದಿಂದ ಟಿಕೆಟ್ ಕೊಡಿಸಿರುವ ಕುರಿತು 2+1 ಸಂಸ್ಕೃತಿ ಎಂದು ಟೀಕಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಟ್ವಿಟ್ಟರ್‌ ಮೂಲಕ ಪ್ರತಿಕ್ರಿಯೆಯನ್ನೂ ನಿಡಿದ್ದಾರೆ.

      ಮೋದಿ ಅವರ ಹೇಳಿಕೆಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, 'ನೀವು ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದನ್ನು ಮರೆತುಬಿಟ್ಟಿರಾ' (ವಾರಣಾಸಿ ಮತ್ತು ವಡೋದರಾ) ಎಂದು ಪ್ರಶ್ನಿಸಿದ್ದಾರೆ.

      ಮುಂದುವರೆದು, 'ನೀವು 56 ಇಂಚಿನ ಎದೆಯವರಲ್ಲವೆ, ನಿಮ್ಮ ಬಳಿ ಯಾವುದಾದರೂ ಬಿದ್ಧಿವಂತ ವಿವರಣೆ ಇರುತ್ತದೆ ಬಿಡಿ' ಎಂದು ಕಾಲೆಳೆದಿರುವ ಸಿದ್ದರಾಮಯ್ಯ, ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ವಿಷಯ ಬಿಡಿ ನಿಮ್ಮ ಪಕ್ಷ 60-70 ಸೀಟುಗಳಿಗಿಂತಲೂ ಹೆಚ್ಚು ಗೆಲ್ಲಲಾರದು ಎಂಬ ಸತ್ಯವನ್ನು ಒಪ್ಪಿಕೊಳ್ಳಿ' ಎಂದು ಛಾಟಿ ಬೀಸಿದ್ದಾರೆ.

      ಚಾಮರಾಜನಗರ ಸಮೀಪದ ಸಂತೆಮರನಹಳ್ಳಿಯಲ್ಲಿ ಮಾತನಾಡಿದ್ದ ಮೋದಿ ಅವರು, ಸಿದ್ದರಾಮಯ್ಯ ಅವರದ್ದು 2+1 ಮತ್ತು ಇತರ ಮಂತ್ರಿಗಳದ್ದು 1+1 ಸಂಸ್ಕೃತಿ ಎಂದು ಕುಟುಂಬ ರಾಜಕಾರಣವನ್ನು ಟೀಕಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+