ಅಬ್ಬಬ್ಬಾ.. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಹನ್ನೊಂದು ದಿನ ರಜೆ
Recommended Video

ಅಕ್ಟೋಬರ್ ತಿಂಗಳಲ್ಲಿ ಸಿಗಲಿದೆ 11 ದಿನಗಳ ಸರಣಿ ರಜೆ | ರಜೆ ಪಟ್ಟಿಗಾಗಿ ಈ ವಿಡಿಯೋ ನೋಡಿ | Oneindia Kannada
ಪಿತೃಪಕ್ಷ ಆರಂಭವಾಗಿದೆ, ಇನ್ನು ಹದಿನೈದು ದಿನ ಶುಭ ಕಾರ್ಯಗಳು ನಡೆಯುವುದು ಕಮ್ಮಿ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ - 2018ರಲ್ಲಿ ಸಾಲುಸಾಲು ರಜೆಗಳ ಸವಿಯನ್ನು ಪ್ರಮುಖವಾಗಿ ಬ್ಯಾಂಕ್ ಮತ್ತು ಸರಕಾರೀ ಸಿಬ್ಬಂದಿಗಳು ಸವಿಯಬಹುದಾಗಿದೆ.
ಮಹಾಲಯ ಅಮವಾಸ್ಯೆಯ ನಂತರದ ದಿನದಿಂದ (ಅ 9 ಅಥವಾ 10, ಗೊಂದಲವಿದೆ) ದಸರಾ/ನವರಾತ್ರಿ ಆರಂಭವಾಗಲಿದೆ. ದಸರಾಗೆ ಎಷ್ಟು ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕು ಎನ್ನುವ ವಿಚಾರದಲ್ಲಿ ಸರಕಾರ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ತಿಂಗಳಲ್ಲಿ ಒಟ್ಟು ಹನ್ನೊಂದು ರಜೆಗಳಿರಲಿವೆ.

ಅಕ್ಟೋಬರ್ 2 - ಮಂಗಳವಾರ - ಗಾಂಧಿ ಜಯಂತಿ
ಅಕ್ಟೋಬರ್ 7 - ಭಾನುವಾರ
ಅಕ್ಟೋಬರ್ 8 - ಸೋಮವಾರ - ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 13 - ಎರಡನೇ ಶನಿವಾರ
ಅಕ್ಟೋಬರ್ 14 - ಭಾನುವಾರ
ಅಕ್ಟೋಬರ್ 18 - ಗುರುವಾರ - ಆಯುಧಪೂಜೆ
ಅಕ್ಟೋಬರ್ 19 - ಶುಕ್ರವಾರ - ವಿಜಯದಶಮಿ
ಅಕ್ಟೋಬರ್ 21 - ಭಾನುವಾರ
ಅಕ್ಟೋಬರ್ 24 - ಬುಧವಾರ - ವಾಲ್ಮೀಕಿ ಜಯಂತಿ
ಅಕ್ಟೋಬರ್ 27 - ನಾಲ್ಕನೇ ಶನಿವಾರ
ಅಕ್ಟೋಬರ್ 28 - ಭಾನುವಾರ












Click it and Unblock the Notifications