ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?
ಬೆಂಗಳೂರು, ಮಾ.17: ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿಗೆ ಕಾರಣವಾದರೂ ಏನು? ಡಿಕೆ ರವಿ ಸಾವು ಆತ್ಮಹತ್ಯೆಯೋ? ಕೊಲೆಯೋ? ರವಿ ಸಾವಿನ ಹಿಂದೆ ಯಾವ ಮಾಫಿಯಾ ಕೈವಾಡವಿದೆ? ಎಂಬ ಬಲವಾಗಿ ಕೇಳಿ ಬಂದಿದೆ. ಅದರೆ, ಜನರ ಆಕ್ರೋಶ, ದಕ್ಷ ಅಧಿಕಾರಿಯ ಸಾವಿನ ನಂತರವೂ ಮರಳು ಮಾಫಿಯಾ ದಂಧೆ ಹತ್ತಿಕ್ಕಲು ಸುಲಭಕ್ಕೆ ಸಾಧ್ಯವಿಲ್ಲ. ಇದಕ್ಕೆ ಸಂಘಟಿತ ಹೋರಾಟ ಅಗತ್ಯ ಎಂಬುದನ್ನು ಈ ಲೇಖನ ವಿವರಿಸಲಿದೆ.
ಕರ್ನಾಟಕದಲ್ಲಿ ಅವ್ಯಾಹತವಾಗಿ ಹಬ್ಬಿರುವ ಮರಳು ಮಾಫಿಯಾ ಜಾಲವನ್ನು ಹತ್ತಿಕ್ಕಲು ಡಿಕೆ ರವಿ ಕಠಿಣ ಕ್ರಮಗಳನ್ನು ಕೈಗೊಂಡು ಎಲ್ಲರ ಗಮನ ಸೆಳೆದರು. ಡಿಕೆ ರವಿ ಸಾವಿಗೆ ಮರಳು ಮಾಫಿಯಾ ಕಾರಣ ಎಂಬ ಅಂಶ ಎದ್ದು ಕಾಣುತ್ತದೆ. [ರವಿ ಅಗಲಿಕೆ, ಭ್ರಷ್ಟರ ಶಿಕ್ಷೆಗೆ ಆಗ್ರಹಿಸಿದ ಫ್ಯಾನ್ ಪೇಜ್]
ಅದರೆ, ಮರಳು ಗಣಿಗಾರಿಕೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ಕೂಡಾ ಭಾರತ ಅನೇಕ ಅಧಿಕಾರಿಗಳು ಮಾಫಿಯಾಕ್ಕೆ ಬಲಿಯಾದ ಉದಾಹರಣೆಗಳಿವೆ. ರಿಯಲ್ ಎಸ್ಟೇಟ್ ದಂಧೆ ನಡೆಸುವವರ ಒತ್ತಡ ಹೆಚ್ಚಾಗುತ್ತಿದ್ದಂತೆ ರಾಜಕಾರಣಿಗಳು ಅವರ ಮುಂದೆ ತಲೆ ತಗ್ಗಿಸುವ ಪರಿಪಾಠ ಬೆಳೇದು ಬಂದಿದೆ. [ಡಿಕೆ ರವಿ ಸಾವು : ಪ್ರಮುಖ ಬೆಳವಣಿಗೆಗಳು]
ಮರಳು ಮಾಫಿಯಾ ಎಂದರೇನು?
ದೇಶದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ಹೆಚ್ಚಾದಂತೆ ಮರಳು, ಕಲ್ಲು ಬೇಡಿಕೆ ಏರುತ್ತದೆ. ಮರಳು ಸಂಗ್ರಹಕ್ಕಾಗಿ ನಿರ್ದಿಷ್ಟ ಸ್ಥಳಗಳಿರುತ್ತವೆ. ಸುಮ್ಮನೆ ನದಿ, ಕೆರೆ ಭಾಗಗಳಿಂದ ಮರಳು ಎತ್ತುವಂತಿಲ್ಲ.ಅದರೆ, ನಿಯಮಗಳನ್ನು ಮೀರುವುದು ದುಷ್ಟರಿಗೆ ಚಿಟಿಕೆ ಹೊಡೆದಷ್ಟು ಸುಲಭ. ಸಮಯ ಹಾಗೂ ದುಡ್ಡು ಉಳಿಸಲು ಸುಲಭವಾಗಿ ಸಿಗುವ ತಾಣದಲ್ಲಿ ಕದಿಯುತ್ತಾರೆ.[ರವಿ ಊರು ದೊಡ್ಡಕೊಪ್ಪಲು ಗ್ರಾಮಕ್ಕೆ ದಾರಿ]
ಮರಳು ಬೇಡಿಕೆ ಹೆಚ್ಚಿದ್ದಂತೆಲ್ಲ ಕಲಬೆರಕೆ ಕೂಡಾ ಹೆಚ್ಚುತ್ತದೆ. ಸರ್ಕಾರಿ ನೀಡಿದ ನಿರ್ದಿಷ್ಟ ಜಾಗಕ್ಕೆ ಕಟ್ಟಡ ನಿರ್ಮಾಣದ ಲಾರಿ ಹೋಗುವುದೇ ಇಲ್ಲ. ಅಲ್ಲಿ ಇಲ್ಲಿ ಕದ್ದ ಮರಳು ಚೆಕ್ ಪೋಸ್ಟ್ ದಾಟಿಸುವುದು ಲಂಚದ ಮೂಲಕ ಎಂದು ಒತ್ತಿ ಹೇಳಬೇಕಾಗಿಲ್ಲ.

ಮಾಫಿಯ ಬೃಹತ್ ಆಗಿ ಬೆಳೆದಿದ್ದು ಹೇಗೆ?
ಮರಳು ಮಾಫಿಯಾದಲ್ಲಿ ಬಂಡವಾಳ ಕಡಿಮೆ ಆದಾಯ ಅಧಿಕ. ಒಂದು ಲಾರಿ ಲೋಡ್ ಮರಳು ಸುಮಾರು 10,000 ರು ನಷ್ಟಿದೆ. ಸೀಸನ್ ನಲ್ಲಿ ಇದು 50,000 ರು ರಿಂದ 80,000 ರು ಗೆ ಏರುತ್ತದೆ. ಕಟ್ಟಡ ನಿರ್ಮಾಣ ಸಂಸ್ಥೆಯಿಂದ ಪ್ರತಿ ದಿನಕ್ಕೆ 10 ರಿಂದ 15 ಲೋಡ್ ಬೇಡಿಕೆ ಇಡುತ್ತವೆ. ಒಟ್ಟಾರೆ ಪ್ರತಿ ದಿನದ ಆದಾಯ 1,00,000 ರಿಂದ 1,50,000 ರು ಪ್ರತಿದಿನಕ್ಕೆ ಟರ್ನ್ ಓವರ್ ಸಿಗುತ್ತದೆ. [ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ವ್ಯಕ್ತಿಚಿತ್ರ]
ಇನ್ನು ಸಾರಿಗೆ ಖರ್ಚು ವೆಚ್ಚ, ಅಧಿಕಾರಿಗಳಿಗೆ ಲಂಚ, ರಾಜಕಾರಣಿಗಳಿಗೆ ಒಂದಿಷ್ಟು ಎಲ್ಲಾ ಸೇರಿಸಿದರೆ 5 ಲಕ್ಷ ರು ಪ್ರತಿದಿನಕ್ಕೆ ಖರ್ಚಾದರೂ ಮಿಕ್ಕಿದ್ದೆಲ್ಲ ಲಾಭವೋ ಲಾಭ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಈ ದಂಧೆಯಲ್ಲಿ ಎಲ್ಲರೂ ಶಾಮೀಲು
ರಾಜಕಾರಣಿಗಳು, ಅಧಿಕಾರಿಗಳು ಅಲ್ಲದೆ ಲಾರಿ ಚಾಲಕನಿಂದ ಹಿಡಿದು ಎಲ್ಲರೂ ಈ ದಂಧೆಯಲ್ಲಿ ದಿನಕ್ಕೆ ಇಂತಿಷ್ಟು ಲಾಭದೊಂದಿಗೆ ಕಾರ್ಯ ನಿರ್ವಹಿಸುತ್ತಾರೆ. ಸರಪಳಿಯಂತೆ ಸಾಗುವ ಈ ಜಾಲದಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಲಾಗುತ್ತದೆ. ರಿಯಲ್ ಎಸ್ಟೇಟ್ ದಂಧಾಕೋರರು ತಮಗೆ ಬೇಕಾದ ರೀತಿಯಲ್ಲಿ ಸರ್ಕಾರವನ್ನು ಆಡಿಸುವ ಸಾಧ್ಯತೆಯಿದೆ.[ಮಾಫಿಯಾಗಳ ದಾಹಕ್ಕೆ ದಕ್ಷ ಅಧಿಕಾರಿ ಬಲಿ]
ಉತ್ತರಪ್ರದೇಶದಲ್ಲಿ ದುರ್ಗಾಶಕ್ತಿ ನಾಗ್ ಪಾಲ್ ಅವರು ಮರಳು ಮಾಫಿಯಾ ವಿರುದ್ಧ ಸೆಣಸಿದ ಧೀರ ಅಧಿಕಾರಿ. ಕರ್ನಾಟಕದ ಮಂಡ್ಯದಲ್ಲಿ ಡಿಸಿಪಿ ಕವಿತಾ ಹೂಗರ್ ಅವರನ್ನು ಕೊಲ್ಲಲು ಮರಳು ಮಾಫಿಯಾ ಯತ್ನಿಸಿ ವಿಫಲವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಮರಳು ಮಾಫಿಯಾ ವಿರುದ್ಧ ಅನೇಕ ಪ್ರಕರಣಗಳು ದಾಖಲಾದರೂ ಪ್ರಯೋಜನವಾಗಿಲ್ಲ. ಇದರಿಂದ ದಕ್ಷ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ವ್ಯವಸ್ಥೆ ಬದಲಾಗಬೇಕಾದರೆ, ಮರಳು ಮಾಫಿಯಾವನ್ನು ಬೇರುಮಟ್ಟದಿಂದ ಸರಿಪಡಿಸಬೇಕು. ಇದು ಸರಿ ಹೋಗಲು ಸಾರ್ವಜನಿಕರ ನೆರವು ಅತ್ಯಗತ್ಯ. ಅಕ್ರಮವಾಗಿ ಸಂಗ್ರಹಿಸಿದ ಮರಳು ಬಳಕೆ ಮಾಡುವುದನ್ನು ತಪ್ಪಿಸಿದರೆ ಆರಂಭದಲ್ಲೇ ದುಷ್ಟರ ಜಾಲಕ್ಕೆ ಹೊಡೆತ ಬೀಳುತ್ತದೆ.












Click it and Unblock the Notifications