• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಕೆ ರವಿ ಊರು ದೊಡ್ಡಕೊಪ್ಪಲು ಗ್ರಾಮಕ್ಕೆ ದಾರಿ

By Mahesh
|

ಬೆಂಗಳೂರು, ಮಾ.17: ದಕ್ಷ, ಪ್ರಮಾಣಿಕ ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ದುಃಖದಲ್ಲಿ ಕರ್ನಾಟಕ ಮುಳುಗಿದೆ. ಅದರಲ್ಲೂ ರವಿ ಅವರ ಸ್ವಂತ ಊರು ದೊಡ್ಡಕೊಪ್ಪಲು ಗ್ರಾಮ ವಿಶ್ವ ಭೂಪಟದಲ್ಲಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ರವಿ ಅವರಂಥ ಸರಳ, ಸಜ್ಜನ ವ್ಯಕ್ತಿಯನ್ನು ಬೆಳೆಸಿದ ಈ ಊರು ಇರುವುದಾದರೂ ಎಲ್ಲಿ? ಎಂಬ ಪ್ರಶ್ನೆಯೊಂದಿಗೆ ರವಿ ಅವರ ಗ್ರಾಮದತ್ತ ಈ ಪುಟ ಕರೆದೊಯ್ಯಲಿದೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]

ಡಿಕೆ ರವಿ ಅವರು ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕು ಹುಲಿಯೂರು ದುರ್ಗ ಹೋಬಳಿ ದೊಡ್ಡಕೊಪ್ಪಲು ಗ್ರಾಮದಲ್ಲಿ. 1979ರ ಜೂನ್‌ 10ರಂದು ಜನಿಸಿದರು. ಕರಿಯಪ್ಪ -ಗೌರಮ್ಮ ಎಂಬುವರ ಪುತ್ರರಾದ ಡಿ.ಕೆ.ರವಿ ಅವರು ಪ್ರಾಥಮಿಕ ಶಿಕ್ಷಣ ಹೊನ್ನ ಮಾಚನಹಳ್ಳಿಯಲ್ಲಿ ಮುಗಿಸಿ ಬಳಿಕ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಕುಣಿಗಲ್‌ನಲ್ಲಿ ಪಡೆದಿದ್ದರು. ಕೃಷಿ ವಿಷಯದಲ್ಲಿ ಬಿಎಸ್ ಇ ಹಾಗೂ ಪ್ರಾಣಿಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಪ್ರಥಮ ದರ್ಜೆಯಲ್ಲಿ ಮುಗಿಸಿದ ರವಿ ಅವರು ಹಳ್ಳಿಗನಾಗಿ ಕೊನೆ ತನಕ ಉಳಿದರು.[ಭ್ರಷ್ಟರ ಶಿಕ್ಷೆಗೆ ಆಗ್ರಹಿಸಿದ ಫ್ಯಾನ್ ಪೇಜ್ ]

ವಿದ್ಯೆ ವಿನಯವನ್ನು ತರುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದ್ದ ಡಿಕೆ ರವಿ ಅವರು ಬಡವರ ಪಾಲಿನ ಆಶಾಕಿರಣವಾಗಿದ್ದರು. ಡಿಕೆ ರವಿ ಅವರು ಸರ್ಕಾರಿ ಅಧಿಕಾರಿಯಾಗಿದ್ದಾಗ ದೊಡ್ಡಕೊಪ್ಪಲು ಗ್ರಾಮ ಸಂಭ್ರಮದಿಂದ ಹಬ್ಬ ಆಚರಿಸಿತ್ತು. [ಡಿಕೆ ರವಿ ಸಾವು : ಪ್ರಮುಖ ಬೆಳವಣಿಗೆಗಳು]

ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಅವರ ಮಗಳು ಕುಸುಮಾರನ್ನು ವಿವಾಹವಾಗಿದ್ದ ರವಿ ಅವರು ಎಂದಿಗೂ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿರಲಿಲ್ಲ. ಕೋಲಾರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದ ರವಿ ಅವರು ಅಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಕೋಲಾರದ ದತ್ತು ಪುತ್ರನಾಗಿ ಬೆಳೆದರು. ಭ್ರಷ್ಟ ವ್ಯವಸ್ಥೆಗೆ ಬಲಿಯಾಗಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾಗಿ ವರ್ಗಗೊಂಡು ಬೆಂಗಳೂರಿಗೆ ಆಗಮಿಸಿದ ರವಿ ಅವರು ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸಿದರು. ಅದರೆ, ದುರಂತ ಸಾವಿಗೀಡಾದರು.[ದಿವಂಗತ ಡಿಕೆ ರವಿ ವ್ಯಕ್ತಿಚಿತ್ರ]

ದೊಡ್ಡಕೊಪ್ಪಲು ಗ್ರಾಮಕ್ಕೆ ದಾರಿ: ಸುಮಾರು 21 ಡಿಗ್ರಿ ಸೆಲ್ಸಿಯಸ್ ನಿಂದ 36 ಡಿ.ಸೆ ತನಕ ಬಿರು ಬಿಸಿಲಿನ ಬಯಲು ಸೀಮೆ ತಾಣವಾಗಿದೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕು ಹುಲಿಯೂರು ದುರ್ಗ ಹೋಬಳಿಯಲ್ಲಿದೆ. ಹತ್ತಿರದ ದೊಡ್ಡ ಗ್ರಾಮ ಬಂಡಿಹಳ್ಳಿ. ಪೂರ್ವದಲ್ಲಿ ಮಾಗಡಿ ತಾಲೂಕು, ಉತ್ತರದಲ್ಲಿ ಗುಬ್ಬಿ ತಾಲೂಕು, ಪಶ್ಚಿಮದಲ್ಲಿ ನಾಗಮಂಗಲ ತಾಲೂಕಿನ ಊರುಗಳನ್ನು ಕಾಣಬಹುದು.[ಮಾಫಿಯಾಗಳ ದಾಹಕ್ಕೆ ದಕ್ಷ ಅಧಿಕಾರಿ ಬಲಿ]

ಹತ್ತಿರದ ಅಂಚೆ ಕಚೇರಿ: ಹುಲಿಯೂರು ದುರ್ಗ 572123
ಹತ್ತಿರದ ಊರುಗಳು: ಮಾಗಡಿ, ಕುಣಿಗಲ್, ರಾಮನಗರ, ಮದ್ದೂರು
ಭಾಷೆ: ಕನ್ನಡ
ವೃತ್ತಿ: ಹೈನುಗಾರಿಕೆ, ಕೃಷಿ

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How to reach Doddakoppalu- IAS officer DK Ravi's native place.It is a small Village/hamlet in Kunigal Taluk in Tumkuru district of Karnataka, India. It comes under Bandihalli Panchayath. It is located around 100 KM from state capital Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more