ಮಹಿಳಾ ಉದ್ಯೋಗಿಯ ಪಿರಿಯಡ್ಸ್ ಲೀವ್-ಮ್ಯಾನೇಜರ್ ವಾಟ್ಸಾಪ್ ಚಾಟ್ ವೈರಲ್; ನೆಟ್ಟಿಗರು ಹೇಳಿದ್ದೇನು?

ಬೆಂಗಳೂರು: ಕಾರ್ಪೋರೇಟ್, ಐಟಿ ಕಂಪನಿಗಳಲ್ಲಿ ಉದ್ಯೋಗ ನಿಯಮ ತುಂಬ ಸ್ಟ್ರಿಕ್ಟ್ ಆಗಿರುತ್ತದೆ. ನೌಕರರನ್ನು ದುಡಿಸಿಕೊಳ್ಳುತ್ತಾರೆ, ಸಂಬಳ ಕಡಿಮೆ, ಮಾನವೀಯತೆ ಇರಲ್ಲ ಎಂಬೆಲ್ಲ ದೂರುಗಳು ಸಾಮಾನ್ಯ. ಇದೀಗ ಈ ಮಾತಿಗೆ ವಿರುದ್ಧ ಎಂಬಂತೆ ಕಂಪನಿಯೊಬ್ಬರ ಮ್ಯಾನೇಜರ್ ತಮ್ಮ ಅಡಿ ಕೆಲಸ ಮಾಡುವ ಮಹಿಳಾ ನೌಕರಳೊಂದಿಗೆ ನಡೆದುಕೊಂಡ ಮಾನವೀಯ ರೀತಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಆರೋಗ್ಯ (ಪಿರಿಯಡ್) ಸಮಸ್ಯೆಗಳಿಂದಾಗಿ ತಡವಾಗಿ ಲಾಗಿನ್ ಆಗಲು ಮಹಿಳಾ ಉದ್ಯೋಗಿಯೊಬ್ಬರಿಗೆ ಕೇಳಿದ್ದಕ್ಕಾಗಿ ಸೀನಿಯರ್ ಮ್ಯಾನೇಜರ್ ನೀಡಿದ ರಿಪ್ಲೈನಲ್ಲಿ ಅವರ ಸಹಾನುಭೂತಿ ಮತ್ತು ವೃತ್ತಿಪರತೆ ಎಷ್ಟಿದೇ ಎಂಬುದು ತಿಳಿಯುತ್ತದೆ. ಈ ವ್ಯಾಪಕ ಚರ್ಚೆಯು ಸೃಷ್ಟಿಯಾಗಿದೆ. ಈ ಕುರಿತ ವಾಟ್ಸಾಪ್ ಚಾಟ್‌ ಸ್ಕ್ರೀನ್ ಶಾಟ್ ಅನ್ನು ಎಕ್ಸ್ ನಲ್ಲಿ ಬಳಕೆದಾರರಾದ ನಳಿನಿ ಉನಾಗರ್ (Nalini Unagar) ಅವರು ಹಂಚಿಕೊಂಡಿದ್ದಾರೆ. ಆ ಪೊಸ್ಟ್ ಹಾಗೂ ಟೆಕ್ಸ್ಟ್‌ ವೈರಲ್ ಆಗುತ್ತಿದೆ.

Menstrual Leave Chat

ಮಹಿಳಾ ನೌಕರಳು-ಮ್ಯಾನೇಜ್ ಮಧ್ಯದ ಚಾಟ್ ವೈರಲ್

"ನಿಜವಾದ ಪುರುಷರು ಮಹಿಳೆಯರಿಗೆ ತಪ್ಪಿತಸ್ಥರೆನಿಸುವಂತೆ ಮಾಡದೆ ಆರಾಮದಾಯಕವಾಗಿರುವಂತೆ ನೋಡಿಕೊಳ್ಳುತ್ತಾರೆ" ಎಂದು ನಳಿನಿ ಅವರು ಪೋಸ್ಟ್‌ಗೆ ಶಿರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಆರೋಗ್ಯ ಸಮಸ್ಯೆ ಉಲ್ಲೇಖಿಸಿದ್ದ ಮಹಿಳೆ ಮಧ್ಯಾಹ್ನ 12 ಗಂಟೆಯ ನಂತರ ಕೆಲಸ ಆರಂಭಿಸಲು ಅವರು ಅನುಮತಿಕೋರಿ ಮ್ಯಾನೇಜರ್‍‌ಗೆ ಸಂದೇಶ ಕಳಿಸಿದ್ದಾರೆ. ಇದಕ್ಕೆ ಮ್ಯಾನೇಜರ್ "ಓಕೆ ಚಿಂತಿಸಬೇಡಿ" ಎಂದಿದ್ದಾರೆ. "ಗಂಭೀರ ಆರೋಗ್ಯ ಸಮಸ್ಯೆಯೇ?" ಎಂದು ಮ್ಯಾನೇಜರ್ ಕೇಳಿದಾಗ, ಮಹಿಳಾ ಉದ್ಯೋಗಿ "ಇಲ್ಲ, ಸಾಮಾನ್ಯ ದೈಹಿಕ ಅನಾರೋಗ್ಯ ಎಂದಷ್ಟೇ" ಉತ್ತರಿಸಿದ್ದಾರೆ. ಅದಕ್ಕೆ ಮ್ಯಾನೇಜರ್ "ಓಹ್, ಇದು ಮುಟ್ಟಿನ ದಿನಗಳೇ?" ಎಂದು ಕೇಳಿದ್ದಾರೆ. ಅದನ್ನು ಮಹಿಳಾ ಉದ್ಯೋಗಿ ದೃಢಪಡಿಸಿದ್ದಾರೆ.

SSLC: ಮಗನಿಗೆ 55% ಅಂಕ, ವಿಶೇಷ ಕೇಕ್ ಕತ್ತರಿಸಿದ ಸಂಭ್ರಮಿಸಿದ ಕುಟುಂಬ; ನೆಟ್ಟಿಗರಿಂದ ಭಾರೀ ಮೆಚ್ಚುಗೆ
SSLC: ಮಗನಿಗೆ 55% ಅಂಕ, ವಿಶೇಷ ಕೇಕ್ ಕತ್ತರಿಸಿದ ಸಂಭ್ರಮಿಸಿದ ಕುಟುಂಬ; ನೆಟ್ಟಿಗರಿಂದ ಭಾರೀ ಮೆಚ್ಚುಗೆ

ವಿಶ್ರಾಂತಿ ಮಾಡಿ, ಸಂಬಳ ಕಟ್ ಆಗಲ್ಲ

"ಉದ್ಯೋಗಿಗಳು ಸುಸಂತೋಷದಿಂದ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ, ಅನಾರೋಗ್ಯ ಎನಿಸಿದರೆ 2-3 ದಿನಗಳ ಮುಟ್ಟಿನ ರಜೆ ಪಡೆಯಲು ಕಂಪನಿಯು ಅವಕಾಶ ನೀಡುತ್ತದೆ" ಎಂದು ಮ್ಯಾನೇಜರ್ ವಿವರಿಸಿದ್ದಾರೆ. ಯಾವುದೇ ಸಂಬಳ ಕಡಿತದ ಬಗ್ಗೆ ಚಿಂತಿಸದೆ ವಿಶ್ರಾಂತಿ ಪಡೆಯಬಹುದೆಂದು ತಿಳಿಸಿದ್ದಾರೆ. "ಬಿಂಧಾಸ್ ಆರಾಮ್ ಕರೋ, ಸ್ಯಾಲರಿ ಕಟ್ ನಹೀ ಹೋಗಿ" (ಬಿಂಧಾಸ್ ಆಗಿ ವಿಶ್ರಾಂತಿ ಮಾಡಿ, ಸಂಬಳ ಕಡಿತವಾಗುವುದಿಲ್ಲ) ಎಂದು ಮ್ಯಾನೇಜರ್ ಉದ್ಯೋಗಿಗೆ ಚಾಟ್‌ನಲ್ಲಿ ಹೇಳಿದ್ದಾರೆ.

ಕೆಲವು ಮ್ಯಾನೇಜರ್‍‌ಗಳಿಗೆ ಕೆಟ್ಟ ಅನುಭವವಾಗಿದೆ: ನೆಟ್ಟಿಗರು ಹೇಳಿದ್ದೇನು?

ಆರೋಗ್ಯ ಸಮಸ್ಯೆ ವೇಳೆ ಮಹಿಳೆಯೊಂದಿಗೆ ಸರಿಯಾಗಿ ವರ್ತಿಸುವ ರೆಸ್ಟ್ ಮಾಡುವಂತೆ ಸೂಚನೆ ನೀಡಿದ್ದು ನೆಟ್ಟಿಗರಿಗೆ ಇಷ್ಟವಾಗಿದೆ. ಕೆಲವರು ಈ ಮ್ಯಾನೇಜರ್ ಸಹಾನುಭೂತಿ ಮತ್ತು ಬೆಂಬಲದ ಮನೋಭಾವ ಶ್ಲಾಘಿಸಿದ್ದಾರೆ. ಇನ್ನೊಬ್ಬರು 'ಮ್ಯಾನೇಜರ್ ಇದು ಮುಟ್ಟಿನ ದಿನಗಳೇ?' ಎಂದು ಕೇಳಿದ ರೀತಿ ಒಪ್ಪಬಹುದು. ಕೆಲವೆಡೆ ಅನೇಕ ಮ್ಯಾನೇಜರ್‌ಗಳಿಗೆ ಈ ರೀತಿಯ ಪ್ರಶ್ನೆಗಳೇ ಲೈಂಗಿಕ ಕಿರುಕುಳ ಆರೋಪ ಎದುರಿಸುಂತೆ ಮಾಡಿವೆ ಎಂದು ಕಹಿ ಘಟನೆಗಳನ್ನು ಎದುರಿಸಿದ್ದಾರೆ. ಮತ್ತೊಬ್ಬರು ಕೆಲವು ಕಾರ್ಪೋರೇಟ್ ಸಂಸ್ಥೆಗಳಲ್ಲಿ ಇಂತಹ ಸನ್ನಿವೇಶಗಳು ಭಿನ್ನವಾಗಿರುತ್ತವೆ ಎಂದಿದ್ದಾರೆ.

ನಾಲ್ಕನೇಯವರು, ಈ ಮ್ಯಾನೇಜ್ ವೃತ್ತಿಪರ ಗಡಿಯನ್ನು ಮೀರಿ ಮಾನವೀಯತೆಯಿಂದ ಪ್ರತಿಕ್ರಿಯಿಸಿರುವುದು ನಿಜಕ್ಕೂ ಒಳ್ಳೆಯ ವಿಷಯ ಎಂದಿದ್ದಾರೆ. ಇಂತಹ ವಿವರಗಳನ್ನು ಕೇಳಿದಾಗ ಸರಿಯಾಗಿ ನಡೆದುಕೊಳ್ಳಬಕು. ಉದ್ಯೋಗಿ ಅನಾರೋಗ್ಯ ರಜೆಗಾಗಿ ಅರ್ಜಿ ಸಲ್ಲಿಸಬಹುದು. ಆರೋಗ್ಯವು ಯಾವಾಗಲೂ ನಮ್ಮ ವೈಯಕ್ತಿಕ ವಿಷಯ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

'ಕಂಪನಿಯ ನೀತಿಮದಲ್ಲೂ ಮಾಹಿತಿ ಇರುತ್ತದೆ. ಮ್ಯಾನೇಜರ್ ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಇದನ್ನೇನು ಮಾಡಿಲ್ಲ.ಅದರಲ್ಲಿ ಮೇಲೆ ತಪ್ಪಿತಸ್ಥರೆನಿಸಲು ಏನಿದೆ. ಇವೆಲ್ಲ ಮೂಲಭೂತ ವಿಷಯಗಳು ಎಂದು ನೆಟ್ಟಿಗರು ಹೇಳುವ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+