ಬೆಂಗಳೂರು-ಮುಂಬೈಗೆ ಹೊಸ ನೇರ ರೈಲಿಗೆ ಗ್ರೀನ್ ಸಿಗ್ನಲ್; ಹುಬ್ಬಳ್ಳಿ ಮಾರ್ಗವಾಗಿ ಹೈಸ್ಪೀಡ್ ರೈಲ್ ಕಾರಿಡಾರಿಗೆ ಬೇಡಿಕೆ

ಬೆಂಗಳೂರು: ಕರ್ನಾಟಕ ಬೆಂಗಳೂರು ಹಾಗೂ ಮಹಾರಾಷ್ಟ್ರ ಮುಂಬೈ ಬೆಸೆಯುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇಂದು (ಮೇ 17) ಭಾನುವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಚಿವ ವಿ.ಸೋಮಣ್ಣ ಅವರು ರೈಲು ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದರು. ಇದೇ ಮೇ 24ರಿಂದ ಎಸ್‌ಎಂವಿಟಿ ಬೆಂಗಳೂರು-ಮುಂಬೈ ಲೋಕಮಾನ್ಯ ತಿಲಕ್ ರೈಲು ಸಂಚಾರ ಸೇವೆ ಆರಂಭಿಸಲಿದೆ.

ಬೆಂಗಳೂರಿನಿಂದ ತೆರಳುವ ಈ ರೈಲು ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮಾರ್ಗವಾಗಿ ಸಾಗಲಿದೆ. ಮುಂದಿನ ದಿನಗಳಲ್ಲಿ ಇದೇ ರೈಲಿನ ಸೇವೆಯನ್ಉ ವಂದೇ ಭಾರತ್ ಸ್ಲೀಪರ್ ರೈಲಿಗೆ ಪರಿವರ್ತಿಸಲು ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದರು.

SMVT Bengaluru Mumbai

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯಿಸಿದ್ದು, ಈ ಹಿಂದೆ ನೀಡಿದ ಭರವಸೆಯಂತೆ, ಬೆಂಗಳೂರಿನಿಂದ ಮುಂಬೈಗೆ ನೂತನ ನೇರ ರೈಲು ಸೇವೆಗೆ ಇಂದು ಚಾಲನೆ ನೀಡಲಾಗಿದೆ. 1983 ರಲ್ಲಿ ಆರಂಭವಾದ ಮೊದಲ ರೈಲು ಸೇವೆಯ 30 ವರ್ಷಗಳ ನಂತರ ಈ ರೈಲು ಆರಂಭವಾಗಿದೆ ಎಂದರು.

ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಹೈಸ್ಪೀಡ್ ರೈಲು ಕಾರಿಡಾರ್?

ಇದೇ ಸಂದರ್ಭದಲ್ಲಿ ಸಂಸದರು 'ದಾವಣಗೆರೆ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಹೈ-ಸ್ಪೀಡ್ ರೈಲು ಕಾರಿಡಾರ್ ನಿರ್ಮಿಸುವಂತೆ ವಿನಂತಿಸಿದ್ದಾರೆ. ಇದು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದರೊಂದಿಗೆ, ಈ ಭಾಗದ ಜನರಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಅವರು ಉಲ್ಲೇಖಿಸಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ಬಳಿ ಕೋರಿದ್ದಾರೆ.

ಇನ್ನು ಮುಂಬೈವರೆಗೆ ಸೇವೆಗೆ ಸಿದ್ಧವಾದ ಹೊಸ ರೈಲು ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಲಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಿದೆ. ನೂತನವಾಗಿ ವಂದೇ ಭಾರತ್ ಓವರ್‌ನೈಟ್ ಸ್ಲೀಪರ್' (ರಾತ್ರಿ ಪ್ರಯಾಣದ) ರೈಲು ಇನ್ನು ಕೆಲವೇ ತಿಂಗಳುಗಳಲ್ಲಿ ಆರಂಭವಾಗಲಿದೆ. ಇಂದು 'ಎಸ್‌ಎಂವಿಟಿ ಬೆಂಗಳೂರು - ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್' (ವಾರಕ್ಕೆ ಎರಡು ದಿನದ) ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಉದ್ಘಾಟಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ರೈಲು ವೇಳಾಪಟ್ಟಿ, ನಿಲುಗಡೆ ಮಾಹಿತಿ

ಒಟ್ಟು1200 ಕಿಲೋ ಮೀಟರ್ ಇರುವ ಮುಂಬೈ ಅನ್ನು 22 ಗಂಟೆಗಳಲ್ಲಿ ಕ್ರಮಿಸಲಿದೆ. ಸೂಪರ್ ಫಾಸ್ಟ್ ಹೆಸರಿಗೆ ತಕ್ಕಂತೆ ರೈಲಿನ ವೇಗ ಕಡಿಮೆ ಆಯಿತು ಎಂದು ಕೆಲವರು ಆಕ್ಷೇಪಿಸುತ್ತಿದ್ದಾರೆ. ಬೆಂಗಳೂರು ಎಸ್‌ಎಂವಿಟಿ-ಮುಂಬೈ ಲೋಕಮಾನ್ಯ ತಿಲಕ್ ಸೂಪರ್ ಫಾಸ್ಟ್ ರೈಲು (16556/16554) ಮೇ 24ರಿಂದ ವಾರದಲ್ಲಿ ಎರಡು ದಿನ ಸಂಚರಿಸುತ್ತದೆ.

ಪ್ರತಿ ಶನಿವಾರ ಹಾಗೂ ಮಂಗಳವಾರ ರಾತ್ರಿ 8.34ಕ್ಕೆ ಬೆಂಗಳೂರಿನಿಂದ ಹೊರಡುತ್ತದೆ. ಕ್ರಮವಾಗಿ ಭಾನುವಾರ ಹಾಗೂ ಬುಧವಾರ ರಾತ್ರಿ 8.40ಕ್ಕೆ ಮುಂಬೈ ತಲುಪುತ್ತದೆ. ಮರಳಿ ಮುಂಬೈನಿಂದ ಅದೇ ದಿಕ್ಕಿನಲ್ಲಿ ಭಾನುವಾರ ಮತ್ತು ಬುಧವಾರ ರಾತ್ರಿ 11.15ಕ್ಕೆ ಹೊರಡುತ್ತದೆ. ಕ್ರಮವಾಗು ಸೋಮವಾರ ಮತ್ತು ಗುರುವಾರ ರಾತ್ರಿ 10.30ಕ್ಕೆ ಬೆಂಗಳೂರಿಗೆ ಆಗಮಿಸುತ್ತದೆ.

ನಿಲುಗಡೆ ನಿಲ್ದಾಣಗಳು

ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ, ಲೋನಂದ್, ಪುಣೆ, ಲೋನಾವಾಲಾ, ಕರ್ಜತ್, ಕಲ್ಯಾಣ್ ಮತ್ತು ಥಾಣೆ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಬೆಂಗಳೂರು, ಉತ್ತರ ಕರ್ನಾಟಕದಿಂದ ತೆರಳುವ ಜನರಿಗೆ ಈ ರೈಲು ಹೆಚ್ಚು ಅನುಕೂಲ ಒದಗಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+