• search

ದಕ್ಷ ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ವ್ಯಕ್ತಿಚಿತ್ರ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು ಎನ್ನುವ ಹಾಗೆ, ದಕ್ಷ ಐಎಎಸ್ ಅಧಿಕಾರಿ, ಕೋಲಾರದ ಮಾಜಿ ಜಿಲ್ಲಾಧಿಕಾರಿ ಡಿ ಕೆ ರವಿ (ದೊಡ್ಡಕೊಪ್ಪಲು ಕರಿಯಣ್ಣ ರವಿ) ದುರ್ಮರಣಕ್ಕೀಡಾಗಿದ್ದಾರೆ. ಆತ್ಮಹತ್ಯೆಯೋ ಅಥವಾ ಇನ್ನೊಂದೋ ಒಟ್ಟಿನಲ್ಲಿ ಆಗಬಾರದ್ದು ಆಗಿ ಹೋಗಿದೆ, ನೋವಿಗೆ ಕೊನೆ ಇಲ್ಲದಂತಾಗಿದೆ. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ.

  ಇದು ಆತ್ಮಹತ್ಯೆಯೋ ಅಥವಾ ಪೂರ್ವನಿರ್ಧಾರಿತ ಕೊಲೆಯೋ ಎನ್ನುವುದು ಪಾರದರ್ಶಕವಾಗಿ ತನಿಖೆ ನಡೆದರೆ ಮಾತ್ರ ಇದರ ಚಿದಂಬರ ರಹಸ್ಯ ಹೊರಬರಲು ಸಾಧ್ಯ. ಒಟ್ಟಿನಲ್ಲಿ ರಾಜ್ಯ ಒಬ್ಬ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿದೆ ಎನ್ನುವುದು ನೋವಿನಿಂದ ನಾವು ಒಪ್ಪಿಕೊಳ್ಳಬೇಕಾದ ವಾಸ್ತವತೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]

  ಸತ್ತವನು ಮತ್ತೆ ಬದುಕಿಬರಲಾರ ಎನ್ನುವುದು ಒಪ್ಪಿಕೊಳ್ಳುವ ಮಾತಾದರೂ ರವಿ ಅಸಹಜ ಸಾವಿನ ಸುತ್ತಮುತ್ತ ಇರಬಹುದಾದ 'ಕಾಣದ ಕೈ'ಗಳ ತನಿಖೆಗೆ ರಾಜಕಾರಣಿಗಳು ಆತ್ಮಸಾಕ್ಷಿಯಾಗಿ ಸಹಕರಿಸಬೇಕು. ಇದರಿಂದ ಮುಂದೆ ಇಂತಹ ಘಟನೆಗಳು ಮರುಕಳಿಸದರಿಲು ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬಹುದು. (ರವಿ ನಿಗೂಢ ಸಾವು: ಯಾರು ಏನು ಹೇಳಿದರು)

  ಐಎಎಸ್ ವಲಯದಲ್ಲಿ ಫೈರ್ ಬ್ರಾಂಡ್ ಎಂದೇ ಹೆಸರಾಗಿದ್ದ ಡಿ ಕೆ ರವಿ, ಹೋದಲೆಲ್ಲಾ ಜನಾನುರಾಗಿಯಾಗಿ ಕಾರ್ಯ ನಿರ್ವಹಿಸಿದವರು. ಭೂ ಮತ್ತು ಮರಳು ಮಾಫಿಯಾಗಳಿಗೆ ಸಿಂಹಸ್ವಪ್ನರಾಗಿದ್ದ ರವಿ, ಪ್ರಸಕ್ತ ವಾಣಿಜ್ಯ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದರು.

  ಅಗಲಿದ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಡಿ ಕೆ ರವಿ ಅವರ ಪ್ರೊಫೈಲ್ ಮತ್ತು ಕೆಲವೊಂದು ಅವರು ತೆಗೆದುಕೊಂಡಿದ್ದ ನಿರ್ದಾಕ್ಷಿಣ್ಯ ಕ್ರಮಗಳು. ಮುಂದೆ ಓದಿ..

  36ವರ್ಷದ ರವಿ, ಹುಟ್ಟಿದ್ದು ಕುಣಿಗಲ್ ತಾಲೂಕಿನಲ್ಲಿ

  36ವರ್ಷದ ರವಿ, ಹುಟ್ಟಿದ್ದು ಕುಣಿಗಲ್ ತಾಲೂಕಿನಲ್ಲಿ

  36ವರ್ಷದ ರವಿ 10.06.1979ರಲ್ಲಿ ಕುಣಿಗಲ್ ತಾಲೂಕು ಹುಲಿಯೂರುದುರ್ಗ, ದೊಡ್ಡೆಕೊಪ್ಪಲು ಗ್ರಾಮದಲ್ಲಿ ಕರಿಯಣ್ಣ ಮತ್ತು ಗೌರಮ್ಮ ದಂಪತಿಗಳಿಗೆ ಜನಿಸಿದ್ದರು. ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ, ಬೆಂಗಳೂರು ವಿವಿಯಲ್ಲಿ ಪ್ರಾಣಿಶಾಸ್ತ್ರದ ಪದವೀಧರರಾಗಿದ್ದರು. ಅಬಕಾರಿ ಇಲಾಖೆಯ ಸಬ್ ಇನ್ ಸ್ಪೆಕ್ಟರ್ ಆಗಿ ಕೆಲಸ ಮಾಡಿದ ರವಿ ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆಯಲು ಈ ಹುದ್ದೆಗೆ ರಾಜೀನಾಮೆ ನೀಡಿದ್ದರು.

  ಐಎಎಸ್ ಅಧಿಕಾರಿಯಾಗಿ ಆಯ್ಕೆ

  ಐಎಎಸ್ ಅಧಿಕಾರಿಯಾಗಿ ಆಯ್ಕೆ

  UPSC ಪರೀಕ್ಷೆ ಪಾಸಾದ ನಂತರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿ (2009ರ ಬ್ಯಾಚ್) ಆಯ್ಕೆಯಾದರು. ಕಲ್ಬುರ್ಗಿಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಆರಂಭಿಸಿದ ಡಿ ಕೆ ರವಿ, ನಂತರ ಕೊಪ್ಪಳ ಜಿಲ್ಲಾಪಂಚಾಯತ್ ಸಿಇಓ ಆಗಿ ಕೆಲಸ ನಿರ್ವಹಿಸಿದರು. ಇದಾದ ನಂತರ ಕೋಲಾರದ ಜಿಲ್ಲಾಧಿಕಾರಿಯಾಗಿ ಜನಮನ್ನಣೆಗಳಿಸಲಾರಂಭಿಸಿದರು.

  ದಲಿತ ಮಹಿಳೆಯ ಮನೆಯಲ್ಲಿ ಸಹಪಂಕ್ತಿ ಭೋಜನ

  ದಲಿತ ಮಹಿಳೆಯ ಮನೆಯಲ್ಲಿ ಸಹಪಂಕ್ತಿ ಭೋಜನ

  14 ತಿಂಗಳ ಕಾಲ ಕೋಲಾರ ಡಿಸಿಯಾಗಿ ಕಾರ್ಯನಿರ್ವಹಿಸಿದ ರವಿ, ಜಮೀನು ಒತ್ತುವಾರಿಗಳ ವಿರುದ್ದ, ಮರಳು ಸಾಗಾಣೆಕೆಗಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದರು. ಜಿಲ್ಲೆಯಲ್ಲಿ ಕೆಎಎಸ್ ಮತ್ತು ಅಭ್ಯರ್ಥಿಗಳಿಗೆ ಪಾಠ ಮಾಡುತ್ತಿದ್ದ ರವಿ, ದಲಿತ ಮಹಿಳೆಯ ಮನೆಯಲ್ಲಿ ಸಹಪಂಕ್ತಿ ಭೋಜನ ಸೇವಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು.

  ಮಾಫಿಯಾಗಳ ವಿರೋಧ ಕಟ್ಟಿಕೊಂಡಿದ್ದ ರವಿ

  ಮಾಫಿಯಾಗಳ ವಿರೋಧ ಕಟ್ಟಿಕೊಂಡಿದ್ದ ರವಿ

  ಡಿಸಿಯಾಗಿ ಮಾಫಿಯಾಗಳ ವಿರೋಧ ಕಟ್ಟಿಕೊಂಡಿದ್ದ ರವಿ ಅವರನ್ನು ಸರಕಾರ ಕೋಲಾರದಿಂದ ಎತ್ತಂಗಡಿ ಮಾಡಿತ್ತು. ಕೋಲಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ಸಾರ್ವಜನಿಕರಿಂದ ಇದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.
  ಅಲ್ಲಿಂದ ಅವರು ವಾಣಿಜ್ಯ ಇಲಾಖೆಗೆ ವರ್ಗಾವಣೆಗೊಂಡರು.

  ವಾಣಿಜ್ಯ ಇಲಾಖೆಯಲ್ಲಿ ಸಂಚಲನ ಮೂಡಿಸಿದ ರವಿ

  ವಾಣಿಜ್ಯ ಇಲಾಖೆಯಲ್ಲಿ ಸಂಚಲನ ಮೂಡಿಸಿದ ರವಿ

  ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಾಲ್ಕು ತಿಂಗಳಲ್ಲಿ 130 ಕೋಟಿ ರೂಪಾಯಿ ತೆರಿಗೆ ಬಾಕಿ ವಸೂಲಿ ಮಾಡಿದ್ದರು. ಬ್ರಿಗೇಡ್ ಗ್ರೂಪ್, ಮಂತ್ರಿ ಗ್ರೂಪ್, ಎಂಬೆಸಿ, ಗೋಲ್ಡನ್ ಗೇಟ್ ಪ್ರಾಪರ್ಟೀಸ್, RMZ, ಶುಭ್ ಜ್ಯೂವೆಲ್ಲರ್ಸ್ ಮತ್ತು ರಾಜ್ಯದ ಕ್ಯಾಬಿನೆಟ್ ಸಚಿವರ ಒಡೆತನದ ಎನ್ನಲಾದ ರಿಯಲ್ ಎಸ್ಟೇಟ್ ಕಚೇರಿ ಸೇರಿದಂತೆ ಹಲವು ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು.

  ದುರಂತ ಸಾವು

  ದುರಂತ ಸಾವು

  ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಬದುಕಿದ್ದಾಗ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಬದುಕಿದ್ದರೆ ಹುಲಿಯಂತೆ ಬದುಕಬೇಕು. ನಮಗೆ ಸಿಕ್ಕ ಅಧಿಕಾರವನ್ನು ಜನರ ಹಿತರಕ್ಷಣೆಗೆ ಬಳಸಿಕೊಳ್ಳೋಣ ಎಂದು ಕೆಲವು ದಿನಗಳ ಹಿಂದೆಯಷ್ಟೇ ಕಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದ್ದ ಡಿಕೆ ರವಿ, ಈಗ ನಮ್ಮ ಜೊತೆಯಿಲ್ಲ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Profile of IAS officer Late DK Ravi, who took on sand and land mafia. Additional commissioner of Commercial tax Department DK Ravi was found dead in his apartment on Monday, March 16, 2015 evening. 

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more