Reservoirs water level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಜುಲೈ 25ರ ಅಂಕಿಅಂಶ ತಿಳಿಯಿರಿ
ಕರ್ನಾಟಕ, ಜುಲೈ, 25: ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಲೇ ಇದೆ. ಇದರಿಂದ ಅನ್ನದಾತರ ಮುಖದಲ್ಲೂ ಕಳೆ ಬಂದಂತಾಗಿದೆ. ಹಾಗಾದರೆ ಇಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಅನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಸಿದೆ.
ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು, ಕಾರವಾರ, ಉತ್ತರ ಕರ್ನಾಟಕ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಲೆಗಳಿಗೆ ಇಂದು ಕೂಡ ರಜೆ ವಿಸ್ತರಣೆ ಮಾಡಲಾಗಿದೆ.

ಮತ್ತೊಂದೆಡೆ ಮೈಸೂರು, ಮಂಡ್ಯ, ಬೆಂಗಳೂರಿನ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಈ ಜಲಾಶಯದ ನೀರನ್ನು ಕ್ರಸ್ಟ್ ಗೇಟ್‌ಗಳ ಮೂಲಕ ನಾಲೆ, ನದಿಗಳಿಗೆ ಹರಿಸಲಾಗಿದೆ. ಅಲ್ಲದೆ ಇದೀಗ ಈ ಜಲಾಶಯರ ಜಲಾಶಯ ಮಟ್ಟ ಇದೀಗ 100 ಅಡಿಯತ್ತ ಸಮೀಪಿಸುತ್ತಿದೆ. ಹಾಗಾದರೆ ಕೆಆರ್‌ಎಸ್ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರವನ್ನು ಇಲ್ಲಿ ತಿಳಿಯಿರಿ.
| ಪ್ರಮುಖ ಜಲಾಶಯ | ಗರಿಷ್ಠ ನೀರಿನ ಮಟ್ಟ(ಮೀಟರ್) | ಒಟ್ಟು ಸಾಮರ್ಥ್ಯ | ಇಂದಿನ ನೀರಿನ ಮಟ್ಟ(ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ(ಟಿಎಂಸಿ) | ಒಳಹರಿವು | ಹೊರಹರಿವು |
| ಕೆಆರ್‌ಎಸ್ ಜಲಾಶಯ | 124.80 | 49452 | 97.50 | 124.65 | 44,436 | 5283 |
| ಆಲಮಟ್ಟಿ ಜಲಾಶಯ | 519.6 | 123.08 | 62.53 | 97.55 | 1,14,445 | 6981 |
| ತುಂಗಭದ್ರಾ ಜಲಾಶಯ | 497.71 | 105.79 | 25.42 | 105.79 | 47,294 | 296 |
| ಮಲಪ್ರಭಾ ಜಲಾಶಯ | 633.8 | 37.73 | 12.70 | 24.21 | 21,247 | 194 |
| ಲಿಂಗನಮಕ್ಕಿ ಜಲಾಶಯ | 554.44 | 151.75 | 46.89 | 91.02 | 73,505 | 94 |
| ಕಬಿನಿ ಜಲಾಶಯ | 696.13 | 19.52 | 16.09 | 19.34 | 20,749 | 3333 |
| ಭದ್ರಾ ಜಲಾಶಯ | 657.73 | 71.54 | 33.83 | 69.76 | 39,348 | 170 |
| ಘಟಪ್ರಭಾ ಜಲಾಶಯ | 662.91 | 51 | 20.63 | 35.16 | 31,815 | 99 |
| ಹೇಮಾವತಿ ಜಲಾಶಯ | 890.58 | 37.1 | 21.73 | 36.81 | 23,142 | 200 |
| ವರಾಹಿ ಜಲಾಶಯ | 594.36 | 31.1 | 6.76 | 7.50 | 17,972 | 23,937 |
| ಸೂಫಾ ಜಲಾಶಯ | 564.33 | 145.33 | 57.15 | 66.11 | 52,650 | 0 |
| ಹಾರಂಗಿ ಜಲಾಶಯ | 871.38 | 8.5 | 6.76 | 7.50 | 17,972 | 23,937 |












Click it and Unblock the Notifications