Reservoirs water level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಜುಲೈ 24ರ ಅಂಕಿಅಂಶ
ಕರ್ನಾಟಕ, ಜುಲೈ, 24: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಲೇ ಇದೆ. ಇದರಿಂದ ಅನ್ನದಾತರ ಮುಖದಲ್ಲೂ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಅನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಸಿದೆ.
ಭಾರಿ ಮಳೆ ಹಿನ್ನೆಲೆ ಜಲಾಶಯ, ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆ ರಾಜ್ಯದ ಕರಾವಳಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಹಲವೆಡೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮತ್ತೊಂದೆಡೆ ಮೈಸೂರು, ಮಂಡ್ಯ, ಬೆಂಗಳೂರಿನ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಈ ಜಲಾಶಯದ ನೀರನ್ನು ಕ್ರಸ್ಟ್ ಗೇಟ್‌ಗಳ ಮೂಲಕ ನಾಲೆ, ನದಿಗಳಿಗೆ ಹರಿಸಲಾಗಿದೆ. ಹಾಗೆಯೇ ಹಾರಂಗಿ ಜಲಾಶಯದ ನೀರನ್ನು ಕೂಡ ನದಿಗಳಿಗೆ ಹರಿಸಿರುವ ಹಿನ್ನೆಲೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾದರೆ 12 ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರವನ್ನು ಇಲ್ಲಿ ತಿಳಿಯಿರಿ.
| ಪ್ರಮುಖ ಜಲಾಶಯ | ಗರಿಷ್ಠ ನೀರಿನ ಮಟ್ಟ(ಮೀಟರ್) | ಒಟ್ಟು ಸಾಮರ್ಥ್ಯ | ಇಂದಿನ ನೀರಿನ ಮಟ್ಟ(ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ(ಟಿಎಂಸಿ) | ಒಳಹರಿವು | ಹೊರಹರಿವು |
| ಕೆಆರ್ಎಸ್ ಜಲಾಶಯ | 124.80 | 49452 | 92.60 | 124.65 | 16,848 | 5283 |
| ಆಲಮಟ್ಟಿ ಜಲಾಶಯ | 519.6 | 123.08 | 53.25 | 96.58 | 107769 | 6671 |
| ತುಂಗಭದ್ರಾ ಜಲಾಶಯ | 497.71 | 105.79 | 21.36 | 104.50 | 54657 | 179 |
| ಮಲಪ್ರಭಾ ಜಲಾಶಯ | 633.8 | 37.73 | 10.88 | 24.11 | 13840 | 194 |
| ಲಿಂಗನಮಕ್ಕಿ ಜಲಾಶಯ | 554.44 | 151.75 | 40.57 | 90.31 | 52374 | 1285 |
| ಕಬಿನಿ ಜಲಾಶಯ | 696.13 | 19.52 | 14.60 | 19.52 | 13114 | 2146 |
| ಭದ್ರಾ ಜಲಾಶಯ | 657.73 | 71.54 | 30.45 | 69.24 | 12169 | 167 |
| ಘಟಪ್ರಭಾ ಜಲಾಶಯ | 662.91 | 51 | 17.88 | 34.68 | 29501 | 98 |
| ಹೇಮಾವತಿ ಜಲಾಶಯ | 890.58 | 37.1 | 19.75 | 36.62 | 12088 | 200 |
| ವರಾಹಿ ಜಲಾಶಯ | 594.36 | 31.1 | 7.33 | 14.05 | 7731 | 0 |
| ಸೂಫಾ ಜಲಾಶಯ | 564.33 | 145.33 | 52.61 | 66.03 | 51431 | 0 |
| ಹಾರಂಗಿ ಜಲಾಶಯ | 871.38 | 8.5 | 7.28 | 7.51 | 16646 | 8916 |












Click it and Unblock the Notifications