Reservoirs water level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಜುಲೈ 18ರ ಅಂಕಿಅಂಶಗಳ ವಿವರ
ಕರ್ನಾಟಕ, ಜುಲೈ, 18: ರಾಜ್ಯದ ಹಲವೆಡೆ ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆ ಜಲಾಶಯಗಳ ನೀರಿನ ಮಟ್ಟವೂ ನಿಧಾನಗತಿಯಲ್ಲಿ ಹೆಚ್ಚಾಗುತ್ತಾ ಇದೆ. ಹಾಗಾದರೆ ರಾಜ್ಯದ ಪ್ರಮುಖ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಹಾಗೆಯೇ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಭಾರೀ ಮಳೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕರಾವಳಿ ಜಿಲ್ಲೆಗಳಿಗೆ 4 ದಿನಗಳ ಕಾಲ ಯೆಲ್ಲೋ ಅಲರ್ಟ್ ಅನ್ನು ಸಹ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸಹ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ರಾಮನಗರ, ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಹೀಗೆ ಮಳೆ ಮುಂದುವರೆದರೆ ಜಲಾಶಯಗಳ ಮಟ್ಟವೂ ಕೂಡ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 89.60 ಅಡಿ
* ಒಳಹರಿವು - 1845 ಕ್ಯೂಸೆಕ್
* ಹೊರಹರಿವು - 398 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 25.41 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ- 86.72 ಟಿಎಂಸಿ
* ಒಳಹರಿವು- 12181 ಕ್ಯೂಸೆಕ್
* ಹೊರಹರಿವು - 561 ಕ್ಯೂಸೆಕ್

3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71
* ಒಟ್ಟು ಸಾಮರ್ಥ್ಯ - 105.79
* ಇಂದಿನ ನೀರಿನ ಮಟ್ಟ- 9.99
* ಕಳೆದ ವರ್ಷದ ನೀರಿನ ಮಟ್ಟ - 96.08
* ಒಳಹರಿವು - 5814 ಕ್ಯೂಸೆಕ್
* ಹೊರಹರಿವು - 252 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.8
* ಒಟ್ಟು ಸಾಮರ್ಥ್ಯ - 37.73
* ಇಂದಿನ ನೀರಿನ ಮಟ್ಟ - 6.81
* ಕಳೆದ ವರ್ಷದ ನೀರಿನ ಮಟ್ಟ - 21.18
* ಒಳಹರಿವು - 877 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44
* ಒಟ್ಟು ಸಾಮರ್ಥ್ಯ - 151.75
* ಇಂದಿನ ನೀರಿನ ಮಟ್ಟ - 24.04
* ಕಳೆದ ವರ್ಷದ ನೀರಿನ ಮಟ್ಟ - 82.27
* ಒಳಹರಿವು - 7827 ಕ್ಯೂಸೆಕ್
* ಹೊರಹರಿವು - 2053
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13
* ಒಟ್ಟು ಸಾಮರ್ಥ್ಯ - 19.52
* ಇಂದಿನ ನೀರಿನ ಮಟ್ಟ - 11.66
* ಕಳೆದ ವರ್ಷದ ನೀರಿನ ಮಟ್ಟ - 18.59
* ಒಳಹರಿವು - 1921 ಕ್ಯೂಸೆಕ್
* ಹೊರಹರಿವು - 800 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73
* ಒಟ್ಟು ಸಾಮರ್ಥ್ಯ - 71.54
* ಇಂದಿನ ನೀರಿನ ಮಟ್ಟ - 27.81
* ಕಳೆದ ವರ್ಷದ ನೀರಿನ ಮಟ್ಟ - 66.79
* ಒಳಹರಿವು - 511 ಕ್ಯೂಸೆಕ್
* ಹೊರಹರಿವು - 164 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91
* ಒಟ್ಟು ಸಾಮರ್ಥ್ಯ - 51
* ಇಂದಿನ ನೀರಿನ ಮಟ್ಟ - 6.33
* ಕಳೆದ ವರ್ಷದ ನೀರಿನ ಮಟ್ಟ - 27.57
* ಒಳಹರಿವು - 5044 ಕ್ಯೂಸೆಕ್
* ಹೊರಹರಿವು - 92
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58
* ಒಟ್ಟು ಸಾಮರ್ಥ್ಯ - 37.1
* ಇಂದಿನ ನೀರಿನ ಮಟ್ಟ - 16.17
* ಕಳೆದ ವರ್ಷದ ನೀರಿನ ಮಟ್ಟ - 35.46
* ಒಳಹರಿವು - 1862 ಕ್ಯೂಸೆಕ್
* ಹೊರಹರಿವು - 50
10. ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಒಟ್ಟು ಸಾಮರ್ಥ್ಯ - 31.1
* ಇಂದಿನ ನೀರಿನ ಮಟ್ಟ - 4.78
* ಕಳೆದ ವರ್ಷದ ನೀರಿನ ಮಟ್ಟ - 12.68
* ಒಳಹರಿವು - 1231 ಕ್ಯೂಸೆಕ್
* ಹೊರಹರಿವು - 216
11. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38
* ಒಟ್ಟು ಸಾಮರ್ಥ್ಯ - 8.5
* ಇಂದಿನ ನೀರಿನ ಮಟ್ಟ - 4.73
* ಕಳೆದ ವರ್ಷದ ನೀರಿನ ಮಟ್ಟ - 7.05
* ಒಳಹರಿವು - 2239 ಕ್ಯೂಸೆಕ್
* ಹೊರಹರಿವು- 50 ಕ್ಯೂಸೆಕ್
ಇದೀಗ ಬಹುತೇಕ ಜಲಾಶಯಗಳ ನೀರಿನ ಪ್ರಮಾಣ ಮತ್ತೆ ಏರಿಕೆಯಾಗಿದೆ. ಹಾಗೆಯೇ ಮುಂದಿನ 4 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಏನಾದರೂ ಮುಂದರೆದರೆ ಜಲಾಶಯಗಳ ನೀರಿನ ಮಟ್ಟದಲ್ಲಿಯೂ ಕೊಂಚ ಏರಿಕೆಯಾಗುವ ಸಾಧ್ಯತೆಯಿದೆ.












Click it and Unblock the Notifications