Ration Card: ಪಡಿತರ ಚೀಟಿದಾರರಿಗೆ ಇನ್ಮುಂದೆ ಈ ಸೌಲಭ್ಯ ಇಲ್ಲ: ಇಲ್ಲಿದೆ ಸಂಪೂರ್ಣ ಮಾಹಿತಿ

Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ನೀಡಲಾಗುತ್ತದೆ. ಇದು ಬರೀ ಪರಿತರ ಪಡೆಯಲು ಅಷ್ಟೇ ಅಲ್ಲದೆ, ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಸರ್ಜಿ ಸಲ್ಲಿಕೆಗೂ ಅತ್ಯಗತ್ತವಾಗಿದೆ. ಇದರಲ್ಲೂ ಹಲವು ವಿಧದ ರೇಷನ್‌ ಕಾರ್ಡ್‌ ಇದ್ದು, ಒಂದೊಂದಕ್ಕೆ ಒಂದು ರೀತಿಯಲ್ಲಿ ಪಡಿತರ ನೀಡಲಾಗುತ್ತದೆ. ಆದರೆ, ಗೋಣಿ ಚೀಲ ನಿಯಮ ಮಾತ್ರ ಎಲ್ಲಾರಿಗೂ ಒಂದೇ. ಹಾಗಾದ್ರೆ, ಇದು ಏನು? ಮುನ್ನೆಲೆಗೆ ಬಂದಿದ್ದು ಯಾಕೆ ಎನ್ನುವುದನ್ನು ಗ್ರಾಹಕರು ಗಮನಿಸಲೇಬೇಕಾದ ವಿಚಾರವೊಂದು ಇಲ್ಲಿದೆ.

ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳ ರದ್ದತಿಗೆ ಸರ್ಕಾರ ಮುಂದಾಗಿದ್ದು, ಅಂತಹವನ್ನು ಎಪಿಎಲ್‌ಗೆ ವರ್ಗಾಹಿಸುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ ಅನರ್ಹರು ಬಳಿಯಿರುವ ಎಲ್ಲಾ ರೀತಿಯ ಪಡಿತರ ಚೀಟಿಗಳನ್ನು ಕೂಡ ರದ್ದುಪಡಿಸುವ ಮಹತ್ವದ ಕಾರ್ಯವನ್ನು ಸಹ ಮುಂದುವರೆಸಿದೆ. ಈ ನಡುವೆಯೇ ಗೋಣಿ ಚೀಲ ನಿಯಮ ಮುನ್ನಲ್ಲೆಗೆ ಬಂದಿದೆ. ಇದೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಕಣ್ಣಾಡಿಸಿ.

Ration Card Rules No Free Gunny Bags for Rice Distribution in Karnataka

ಹೌದು.. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್ ಹೊಂದಿರುವಂತಹವರಿಗೆ ಅಕ್ಕಿ ತೆಗೆದುಕೊಂಡು ಹೋಗಲು ಗೋಣಿ ಚೀಲವನ್ನು ಉಚಿತವಾಗಿ ನೀಡುವುದಿಲ್ಲ. ಪಡಿತರಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಅಕ್ಕಿ ಪಡೆಯಲು ಗೋಣಿಚೀಲವನ್ನು ತರಲೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೇಶವ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಪತ್ರೀಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಂಗಳೂರಿನ ಕಟೀಲು ನ್ಯಾಯಬೆಲೆ ಅಂಗಡಿಯೊಂದರಲ್ಲಿ ಗ್ರಾಹಕರೊಬ್ಬರು ಮಾಡಿದ ವಿಡಿಯೋದಲ್ಲಿ ಗೋಣಿಚೀಲ ಉಚಿತವಾಗಿ ನೀಡುವಂತೆ ನ್ಯಾಯಬೆಲೆ ಅಂಗಡಿದಾರರನ್ನು ಬೆದರಿಸುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿದೆ. ಎಲ್ಲಾ ನ್ಯಾಯಬೆಲೆ ಅಂಗಡಿದಾರರನ್ನು ಸಾರ್ವಜನಿಕರು ಕೆಟ್ಟ ದೃಷ್ಟಿಯಲ್ಲಿ ನೋಡುವಂತೆ ಆಗಿದೆ ಎಂದು ಹೇಳಿದರು.

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕ್ವಿಂಟಾಲ್‌ನಲ್ಲಿ ಲಾಭಾಂಶವನ್ನು 56 ರೂಪಾಯಿ ಎಂದು ಸರ್ಕಾರ ನಿಗದಿಪಡಿಸಿದೆ. ಇದರಲ್ಲಿ 36 ರೂಪಾಯಿ ನಗದು ರೂಪದಲ್ಲಿ ಬರಲಿದೆ. ಉಳಿದ 20 ರೂಪಾಯಿಗಳನ್ನು ನಗದು ನೀಡದೆ, ಎರಡು ಗೋಣಿಚೀಲಗಳನ್ನು ನೀಡಲಾಗುತ್ತದೆ. ಇಂತಹ ಘಟನೆಗಳು ರಾಜ್ಯದ ಹಲವೆಡೆ ನಡೆಯುತ್ತಿವೆ. ಪಡಿತರ ವಿತರಕರು ಇಂತಹ ಘಟನೆಗಳಿಂದಾಗಿ ಮತ್ತಷ್ಟು ಸಮಸ್ಯೆ ಎದುರಿಸುವಂತೆ ಆಗಿದೆ ಎಂದು ಹೇಳಿದರು.

ಸರಕಾರದ ಈ ಆದೇಶವು ಈ ಹಿಂದಿನಿಂದಲೀ ಜಾರಿಯಲ್ಲಿತ್ತು. ಆದರೆ, ಈ ಬಗ್ಗೆ ಮಾಹಿತಿ ಇಲ್ಲದೆ, ಕೆಲ ಗ್ರಾಹಕರು ಮಾತ್ರ ಅಂಗಡಿ ಮಾಲಕರನ್ನು ಬೆದರಿಸುತ್ತಿದ್ದಾರೆ ಎಂದು ಹೇಳಿದರು. ಇನ್ನು ಒನ್ ನೇಶನ್ ಒನ್ ರೇಶನ್ ಕಾರ್ಡ್ ಎಂಬ ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ನಾವು ಯಾವುದೇ ಅರ್ಹ ವ್ಯಕ್ತಿ ಅಕ್ಕಿ ಕೇಳಿದರೂ ಕೊಡಬೇಕಾಗುತ್ತದೆ ಎಂದು ಹೇಳಿದರು.

ಕರ್ನಾಟಕದ ಮಾಜಿ ಆಹಾರ ಸಚಿವ ಮತ್ತು ಈಗಿನ ಸ್ಪೀಕರ್ ಯು.ಟಿ. ಖಾದರ್ ಅವರು ಇತ್ತೀಚೆಗೆ ವಿಧಾನ ಸಭೆಯ ಕಲಾಪದಲ್ಲಿ ಎಲ್ಲಾ ಪಡಿತರ ಅಂಗಡಿದಾರರಿಗೆ ಹೆಚ್ಚುವರಿಯಾಗಿ ಶೇಕಡ 10ರಷ್ಟು ಅಕ್ಕಿ ವಿತರಣೆ ಮಾಡಬೇಕು ಎಂದು ತಿಳಿಸಿದ್ದಾರೆ. ಅದನ್ನು ತಕ್ಷಣ ಜಾರಿ ಮಾಡಬೇಕು ಹಾಗೂ ಎಪಿಎಲ್ ಕಾರ್ಡ್‌ದಾರರಿಗೂ ಅಕ್ಕಿಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಇನ್ನು ಈ ಬಗ್ಗೆ ಕಟೀಲ್‌ ನ್ಯಾಯಬೆಲೆ ಅಂಗಡಿ ಮಾಲೀಕ ಮಾತನಾಡಿ ತಮ್ಮ ಅಂಗಡಿಗೆ ಪರಿಸರದ ಗ್ರಾಹಕರಾದ ಇಬ್ಬರು ಸಹೋದರರು ಪ್ರತಿ ತಿಂಗಳು ಅಕ್ಕಿ ತೆಗೆದುಕೊಂಡು ಹೋಗಲು ಗೋಣಿಚೀಲ ನೀಡುವಂತೆ ಸುಮ್ಮನೆ ತಗಾದೆ ತೆಗೆಯುತ್ತಿದ್ದಾರೆ. ಇದನ್ನು ತಾನು ಆಕ್ಷೇಪಿಸಿದಕ್ಕೆ ತನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಅಳಲು ತೀಡಿಕೊಂಡರು.

ಅಲ್ಲದೆ, ಕೆಲ ಗ್ರಾಹಕರು ನೀಡುವ ಹಿಂಸೆಯಿಂದ ನನಗೆ ತುಂಬಾ ಸಮಸ್ಯೆ ಆಗುತ್ತುದೆ. ಈ ಬಗ್ಗೆ ಆಹಾರ ಸಚಿವರು, ಆಹಾರ ಇಲಾಖೆಯ ಉಪನಿರ್ದೇಶಕರು ಪೊಲೀಸರಿಗೆ ದೂರು ನೀಡಿದ್ದಾಗಿದೆ. ಆದರೂ ನ್ಯಾಯ ಇದುವರೆಗೂ ಸಿಕ್ಕಿಲ್ಲ ಎಂದು ಹೇಳಿದರು. ಮತ್ತೊಂದೆಡೆ ಬಿಪಿಎಲ್ ಕಾರ್ಡ್ ಹೊಂದಲು ಆ ಸಹೋದರರ ಕುಟುಂಬಕ್ಕೆ ಅರ್ಹತೆ ಇಲ್ಲದಿದ್ದರೂ, ಬಿಪಿಎಲ್ ಕಾರ್ಡ್ ಹೊಂದಿದ್ದು, ಈ ಮೂಲಕ ಅಕ್ಕಿ ಪಡೆಯುತ್ತಿದ್ದಾರೆ ಅಂತಲೂ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಇದೊಂದೇ ಜಿಲ್ಲೆಯಲ್ಲಿ ಅಲ್ಲ, ಇಂತಹ ಸಮಸ್ಯೆಗಳು ಹಲವು ಜಿಲ್ಲೆಗಳಲ್ಲಿ ನಡೆಯುತ್ತಿವೆ. ಕೆಲ ಕಡೆ ಕೆಲವು ಗ್ರಾಹಕರು ಅಂಗಡಿ ಮಾಲೀಕರ ಮೇಲೆ ದಬ್ಬಾಳಿಕೆ ಮಾಡಿದರೆ, ಇನ್ನೂ ಕೆಲವೆಡೆ ಅಂಗಡಿ ಮಾಲೀಕರು ಗ್ರಾಹಕರ ಮೇಲೆ ದರ್ಪ ಮೆರೆಯುತ್ತಿರುವ ಆರೋಪ ಕೇಳಿಬರುತ್ತಿವೆ. ಸರ್ಕಾರವೇ ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+