Ration Card: ನಿಮ್ಮ ಪಡಿತರ ಚೀಟಿ ಕಳೆದುಹೋಗಿದೆಯೇ? ಇಲ್ಲಿವೆ ಹಿಂಪಡೆಯುವ ಸರಳ ವಿಧಾನಗಳು
Ration Card: ಪಡಿತರ ಚೀಟಿಯು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕಂದ್ರೆ ಇದು ಬೇಕೇ ಬೇಕಾಗುತ್ತದೆ. ಹಾಗಾದ್ರೆ ರೇಷನ್ ಕಾರ್ಡ್ ಕಳೆದುಹೋದ್ರೆ ಮತ್ತೆ ಹಿಂಪಡೆಯುವುದೆ ಹೇಗೆ ಎನ್ನುವ ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪಡಿತರ ಚೀಟಿ ಎಂಬುದು ಪ್ರತಿಯೊಂದು ಕುಟುಂಬಕ್ಕೂ ಸರ್ಕಾರದಿಂದ ಸಿಗುವ ಅತ್ಯಂತ ಪ್ರಮುಖ ಅಧಿಕೃತ ದಾಖಲೆಗಳಲ್ಲಿ ಒಂದಾಗಿದೆ. ಇದು ಕೇವಲ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಮಾತ್ರವಲ್ಲದೆ, ದೈನಂದಿನ ಜೀವನದ ಹಲವಾರು ಅಗತ್ಯ ಸೇವೆಗಳಿಗೆ ಪ್ರಮುಖ ಗುರುತಿನ ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.

ಡಿಜಿಟಲ್ ರೂಪದಲ್ಲಿ ಹಿಂಪಡೆಯಲು ಸರಳ ವಿಧಾನ
ಹೊಸ ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪಡೆಯಲು ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿ ಅತ್ಯಗತ್ಯ. ಆದರೆ ಯಾವುದೋ ಕಾರಣಕ್ಕೆ ಮೂಲ ಪಡಿತರ ಚೀಟಿ ಕಳೆದುಹೋದರೆ ಜನರು ಗಾಬರಿಯಾಗುತ್ತಾರೆ. ಇಂತಹ ಸಮಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಪಡಿತರ ಚೀಟಿ ಸಂಖ್ಯೆ ತಿಳಿದಿದ್ದರೆ, ಡಿಜಿಟಲ್ ರೂಪದಲ್ಲಿ ಅದನ್ನು ಮರುಪಡೆಯಲು ಅತ್ಯಂತ ಸರಳ ವಿಧಾನ ಇಲ್ಲಿದೆ ನೋಡಿ.
ನಿಮ್ಮ ಕಾರ್ಡ್ ಕಳೆದುಹೋಗಿದ್ದರೂ, ಸರ್ಕಾರದ ಡಿಜಿಟಲ್ ವ್ಯವಸ್ಥೆಯ ಮೂಲಕ ನಿಮ್ಮ ಮೊಬೈಲ್ ಫೋನ್ ಬಳಸಿ ಕೆಲವೇ ನಿಮಿಷಗಳಲ್ಲಿ ಕಾರ್ಡ್ ಸಂಖ್ಯೆಯನ್ನು ಹಿಂಪಡೆಯಬಹುದು. ಇದಕ್ಕೆ ನಿಮ್ಮ ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯ.
'ಮೇರಾ ರೇಷನ್' ಮೊಬೈಲ್ ಆ್ಯಪ್..
* ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ತೆರೆದು 'Mera Ration' ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
* ಆ್ಯಪ್ ಓಪನ್ ಮಾಡಿದ ನಂತರ ಮುಖಪುಟದಲ್ಲಿ ಕಾಣಿಸುವ 'Aadhaar Seeding' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ 'Submit' ಬಟನ್ ಮೇಲೆ ಕ್ಲಿಕ್ ಮಾಡಿ.
* ತಕ್ಷಣವೇ ನಿಮ್ಮ ಪಡಿತರ ಚೀಟಿ ಸಂಖ್ಯೆ, ಕಾರ್ಡ್ ಸ್ಥಿತಿ ಹಾಗೂ ನಿಮ್ಮ ಕುಟುಂಬದ ಸದಸ್ಯರ ಪೂರ್ಣ ವಿವರಗಳು ಕಾಣಿಸುತ್ತವೆ.
ಆಹಾರ ಇಲಾಖೆಯ ವೆಬ್‌ಸೈಟ್ ಮೂಲಕ..
* ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
* ಮುಖಪುಟದಲ್ಲಿರುವ 'ಇ-ಸೇವೆಗಳು' ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
* ಪಡಿತರ ಚೀಟಿಯ ಸ್ಥಿತಿ ಅಥವಾ ಪಡಿತರ ಚೀಟಿ ವಿವರ ವೀಕ್ಷಣೆ ಲಿಂಕ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಜಿಲ್ಲೆ ಮತ್ತು ಆಧಾರ್ ಸಂಖ್ಯೆಯ ವಿವರಗಳನ್ನು ನಮೂದಿಸಿದರೆ, ನಿಮ್ಮ ಪಡಿತರ ಚೀಟಿಯ ವಿವರಗಳು ಮತ್ತು ಕಾರ್ಡ್ ಸಂಖ್ಯೆ ಲಭ್ಯವಾಗುತ್ತದೆ.
ಡಿಜಿಲಾಕರ್ ಆ್ಯಪ್/ವೆಬ್‌ಸೈಟ್‌ನಲ್ಲಿ ಹಿಂಪಡೆಯುವುಯುದೇಗೆ
* ಕೇಂದ್ರ ಸರ್ಕಾರದ ಡಿಜಿಲಾಕರ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಆಗಿರುವ ವಿವರಗಳೊಂದಿಗೆ ಲಾಗಿನ್ ಆಗಿ.
* 'Issued Documents' ಅಥವಾ 'Search Documents' ವಿಭಾಗಕ್ಕೆ ತೆರಳಿ 'Ration Card' ಎಂದು ಟೈಪ್ ಮಾಡಿ.
* ನಿಮ್ಮ ರಾಜ್ಯವಾಗಿ 'Karnataka' ಆಯ್ಕೆ ಮಾಡಿ, ಅಗತ್ಯ ವಿವರಗಳನ್ನು ಸಲ್ಲಿಸಿ.
* ನಿಮ್ಮ ಅಧಿಕೃತ ಡಿಜಿಟಲ್ ಪಡಿತರ ಚೀಟಿಯನ್ನು ಸಂಖ್ಯೆಯೊಂದಿಗೆ ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಗಮನಿಸಬೇಕಾದ ಪ್ರಮುಖ ಅಂಶಗಳು
* ನಿಮ್ಮ ಪಡಿತರ ಚೀಟಿ ದುರುಪಯೋಗ ಆಗದಂತೆ ತಡೆಯಲು, ಕಾರ್ಡ್ ಕಳೆದುಹೋದ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವುದು ಒಳ್ಳೆಯದು.
* ಆನ್‌ಲೈನ್ ವ್ಯವಸ್ಥೆಯಲ್ಲಿ ನಿಮ್ಮ ಮಾಹಿತಿಯನ್ನು ಹಿಂಪಡೆಯಲು ಪಡಿತರ ಚೀಟಿಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಜೋಡಣೆಯಾಗಿರುವುದು ಕಡ್ಡಾಯವಾಗಿದೆ.
* ಈ ಸರಳ ಡಿಜಿಟಲ್ ಮಾರ್ಗಗಳನ್ನು ಬಳಸಿಕೊಂಡು ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಮನೆಯಲ್ಲೇ ಕುಳಿತು ಉಚಿತವಾಗಿ ಪಡೆದುಕೊಳ್ಳಬಹುದು.


Click it and Unblock the Notifications
