Ration Card Good News: ರೇಷನ್ ಕಾರ್ಡ್‌ ತಿದ್ದುಪಡಿ & ಹೆಸರು ಸೇರಿಸಲು ಮಹತ್ವದ ಅಪ್ಡೇಟ್ಸ್‌, ಕೊನೆಯ ದಿನ ಯಾವಾಗ ?

ರೇ‌ಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಇದೀಗ ಗುಡ್‌ನ್ಯೂಸ್‌ವೊಂದು ಬಂದಿದೆ. ರೇಷನ್ ಕಾರ್ಡ್‌ ತಿದ್ದುಪಡಿ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಇತ್ತೀಚಿಗೆ ಕೆಲವು ಗೊಂದಲಗಳು ಸೃಷ್ಟಿಯಾಗಿತ್ತು. ಇದೀಗ ನಿಮ್ಮ ರೇಷನ್ ಕಾರ್ಡ್‌ನಲ್ಲಿ ನಿರ್ದಿಷ್ಟವಾಗಿ ಯಾವುದಾದರೂ ಮಾಹಿತಿ ಇಲ್ಲವೇ ವಿಳಾಸ ಹಾಗೂ ನಿಮ್ಮ ಕುಟುಂಬದವರ (ಸದಸ್ಯರ) ವಿವರ ತಪ್ಪಾಗಿದ್ದಾರೆ. ಆನ್‌ಲೈನ್‌ನ ಮೂಲಕ ಬದಲಾವಣೆ ಮಾಡಿಕೊಳ್ಳಲು ರೇಷನ್ ಕಾರ್ಡ್‌ದಾರರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ನಿಮ್ಮ ರೇಷನ್ ಕಾರ್ಡ್‌ಗಳಲ್ಲಿ ಯಾವುದಾದರೂ ತಿದ್ದುಪಡಿ ಅಥವಾ ಬದಲಾವಣೆ ಮಾಡಿಕೊಳ್ಳಬೇಕೆಂದರೆ ಈಗಲೇ ಮಾಡಿಸಿಕೊಳ್ಳಿ.

ರೇಷನ್ ಕಾರ್ಡ್‌ನಲ್ಲಿ ಬದಲಾವಣೆ ಯಾವುದಾದರೂ ಮಾಡಿಕೊಳ್ಳಬೇಕಾದರೆ, ಅದಕ್ಕೆ ಇದೀಗ ನಿಮಗೆ ಅವಕಾಶ ಇರಲಿದೆ. ಆಹಾರ ಇಲಾಖೆಯಿಂದ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ ಇರುವವರಿಗೆ ಪ್ರತಿ ತಿಂಗಳು ರೇಷನ್ ಕಾರ್ಡ್‌ನ ಮೂಲಕ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಹೀಗಾಗಿ, ರೇಷನ್‌ ಕಾರ್ಡ್‌ನಲ್ಲಿ ವಿಳಾಸ ಹಾಗೂ ಹೆಸರು ಸರಿಯಾಗಿ ಇರುವುದು ಅವಶ್ಯವಾಗಿದೆ. ಇನ್ನು ರೇಷನ್ ಕಾರ್ಡ್‌ನಲ್ಲಿ ಎಷ್ಟು ಜನ ಸದಸ್ಯರು ಇದ್ದಾರೋ ಆ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅಕ್ಕಿ ನೀಡಲಾಗುತ್ತದೆ. ಹೀಗಾಗಿ, ಹೊಸ ಸದಸ್ಯರ ಹೆಸರನ್ನು ರೇಷನ್ ಕಾರ್ಡ್‌ಗೆ ಸೇರಿಸುವುದು ಅವಶ್ಯವಾಗಿದೆ. ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಎಲ್ಲಿ ನೀವು ಅರ್ಜಿ ಸಲ್ಲಿಸಬೇಕು, ಅದಕ್ಕೆ ಬೇಕಾಗುವ ದಾಖಲೆಗಳು ಏನು ಹಾಗೂ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಲು ಎಷ್ಟು ದಿನ ಆಗಲಿದೆ ಹಾಗೂ ಹೊಸ ಸದಸ್ಯರನ್ನು ಸೇರಿಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ration card latest updates correction and name change when is last date

ಎಲ್ಲಿ ತಿದ್ದುಪಡಿ: ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿಯನ್ನು ಆಹಾರ ಇಲಾಖೆಯು ವಿವಿಧ ಭಾಗದಲ್ಲಿ ಮಾಡಲು ಅವಕಾಶ ನೀಡಲಾಗಿದೆ. ಮುಖ್ಯವಾಗಿ ರೇಷನ್ ಕಾರ್ಡ್‌ನಲ್ಲಿ ಯಾವುದಾದರೂ ತಿದ್ದುಪಡಿ ಮಾಡಿಕೊಳ್ಳಬೇಕು ಎಂದಾದರೆ, ನೀವು ಅಗತ್ಯ ದಾಖಲೆಗಳೊಂದಿಗೆ ಸಮೀಪದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ. ಈ ಕೆಲಸವು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಾಡಿಕೊಳ್ಳಬಹುದಾಗಿದ್ದು, ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ರೇಷನ್ ಕಾರ್ಡ್‌ನಲ್ಲಿ ಯಾವೆಲ್ಲ ಬದಲಾವಣೆ ಮಾಡಿಸಿಕೊಳ್ಳಬಹುದು

ರೇಷನ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ತಿದ್ದುಪಡಿಗಳನ್ನು ಹಾಗೂ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.

* ಹೆಸರು ಸೇರ್ಪಡೆ ಮಾಡುವುದು
* ಹೆಸರು ತೆಗೆಸುವುದು
* ಇ -ಕೆವೈಸಿ
* ವಿಳಾಸ ಬದಲಾವಣೆ
* ನ್ಯಾಯಬೆಲೆ ಅಂಗಡಿ (ರೇಷನ್‌ ಅಂಗಡಿ) ಬದಲಾವಣೆ

ಸೇರಿದಂತೆ ವಿವಿಧ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಈ ಬದಲಾವಣೆಗೆ ಡಿಸೆಂಬರ್‌ 31ರ ವರೆಗೆ ಅವಕಾಶ ಇರಲಿದೆ ಎಂದು ಹೇಳಲಾಗಿದೆ.

ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸುವುದಕ್ಕೆ ಕೆಲವು ನಿರ್ದಿಷ್ಟ ದಾಖಲೆಗಳು ಬೇಕಾಗುತ್ತವೆ ಅವುಗಳ ವಿವರ ಇಲ್ಲಿದೆ.
* ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್‌ ಪ್ರತಿ
* ರೇಷನ್‌ ಕಾರ್ಡ್‌ ಜೆರಾಕ್ಸ್‌ (ಪ್ರತಿ)
* ರೇಷನ್‌ ಕಾರ್ಡ್‌ ಇರುವವರು ಭೇಟಿ ನೀಡಬೇಕು
* ಮೊಬೈಲ್‌ ಸಂಖ್ಯೆ ನೀಡಬೇಕು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+