Ration Card Good News: ರೇಷನ್ ಕಾರ್ಡ್ ತಿದ್ದುಪಡಿ ಅವಧಿ ವಿಸ್ತರಣೆ, ಹೊಸ ಗಡುವು ವಿವರ ಇಲ್ಲಿದೆ
ರೇಷನ್ ಕಾರ್ಡ್‌ದಾರರಿಗೆ ಹೊಸ ವರ್ಷದ ಮೊದಲ ದಿನವೇ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಇದೀಗ ಕೊನೆಗೂ ರೇಷನ್ ಕಾರ್ಡ್‌ಗಳಲ್ಲಿನ ಗೊಂದಲಗಳಿಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪರಿಹಾರ ಕಂಡುಕೊಂಡಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಮಂಗಳವಾರ (ಡಿ.31)ದ ಗಡುವು ನೀಡಲಾಗಿತ್ತು. ಇದೀಗ ಈ ಅವಧಿಯನ್ನು ವಿಸ್ತರಿಸಲಾಗಿದೆ. ರೇಷನ್ ಕಾರ್ಡ್ ತಿದ್ದುಪಡಿಯ ಅವಧಿಯನ್ನು ಎಲ್ಲಿಯ ವರೆಗೆ ವಿಸ್ತರಿಸಲಾಗಿದೆ. ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಎಲ್ಲಿ ನಡೆಯಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ರೇಷನ್ ಕಾರ್ಡ್‌ಗಳ ರದ್ದು ಹಾಗೂ ಎಪಿಎಲ್ ಕಾರ್ಡ್‌ಗಳನ್ನು ಬಿಪಿಎಲ್ ಕಾರ್ಡ್‌ಗೆ ಬದಲಾವಣೆ ಮಾಡುವುದು ಸೇರಿದಂತೆ ಪಡಿತರ ಚೀಟಿ ವಿಷಯದಲ್ಲಿ ಭಾರೀ ಗೊಂದಲಗಳು ಸೃಷ್ಟಿಯಾಗಿದ್ದವು. ಇದೀಗ ಈ ಗೊಂದಲಗಳಿಗೆ ಬ್ರೇಕ್ ಹಾಕುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ರೇಷನ್ ಕಾರ್ಡ್‌ನಲ್ಲಿ ಹಲವು ಪ್ರಮುಖ ತಿದ್ದುಪಡಿಗಳನ್ನು 2024ನೇ ಸಾಲಿನ ಡಿಸೆಂಬರ್ 31ರ ಒಳಗೆ ಮಾಡಿಸಿಕೊಳ್ಳಬೇಕು.
ಇಲ್ಲದಿದ್ದರೆ ರೇಷನ್ ರದ್ದಾಗಬಹುದಾದ ಆತಂಕವೂ ಎದುರಾಗಿತ್ತು. ರೇಷನ್ ಕಾರ್ಡ್ ತಿದ್ದುಪಡಿ ಅವಧಿ ಮುಕ್ತಾಯವಾಗಿರುವುದರಿಂದ ಮುಂದಿನ ದಿನಗಳಲ್ಲಿ ಎನು ಮಾಡಬೇಕು ಎನ್ನುವ ಗೊಂದಲದಲ್ಲಿ ಪಡಿತರ ಚೀಟಿದಾರರು ಇದ್ದರು. ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಸಮಯವನ್ನು ಇನ್ನೊಂದು ತಿಂಗಳು ಮುಂದೂಡಲಾಗಿದೆ. ಹೀಗಾಗಿ, ಜನವರಿಯಲ್ಲೂ ನೀವು ಪಡಿತರ ಚೀಟಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ಅದರ ವಿವರ ಮುಂದುವರಿದು ಇದೆ.

ರಾಜ್ಯ ಸರ್ಕಾರವು ಏಕಾಏಕಿ ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸುವುದಕ್ಕೆ ಮುಂದಾಗಿದ್ದು ಭಾರೀ ವಿವಾದ ಹಾಗೂ ಗೊಂದಲಗಳಿಗೆ ಕಾರಣವಾಗಿತ್ತು. ಈ ಸಂಬಂಧ ಸರ್ಕಾರ ಈಗಾಗಲೇ ಸ್ಪಷ್ಟನೆ ಕೊಟ್ಟಿದೆ. ಅಲ್ಲದೆ ಸರ್ಕಾರಿ ನೌಕರರ ರೇಷನ್ ಕಾರ್ಡ್ ಮಾತ್ರ ರದ್ದು ಮಾಡುವುದಾಗಿ ಸ್ಪಷ್ಟನೆ ಕೊಟ್ಟಿದೆ.
ಪಡಿತರ ಚೀಟಿಯಲ್ಲಿ ಏನೆಲ್ಲ ಬದಲಾವಣೆ ಮಾಡಿಕೊಳ್ಳಬಹುದು ?
ಪಡಿತರ ಚೀಟಿಯಲ್ಲಿ ಇರುವ ತಪ್ಪು ಹಾಗೂ ಪ್ರಮುಖ ವಿಷಯಗಳನ್ನು ಸರಿಪಡಿಸಿಕೊಳ್ಳಬೇಕು ಅಂತ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೇಳಿತ್ತು. ಆದರೆ ಇದಕ್ಕೆ ಕೊಟ್ಟಿದ್ದ ಸಮಯ ಕಡಿಮೆಯಾಗಿತ್ತು. ಇನ್ನು ಪಡಿತರ ಚೀಟಿಯಲ್ಲಿ ಮನೆ ಯಜಮಾನರ ಹೆಸರು ಬದಲಾವಣೆ, ಹೆಸರು ಸೇರಿಸುವುದು, ಹೆಸರು ಸರಿಪಡಿಸಿಕೊಳ್ಳುವುದು, ಹೆಸರು ತೆಗೆಯುವುದು, ಫೋಟೊ ಚೇಂಜ್ ಮಾಡೋದು ಹಾಗೂ ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಿಕೊಳ್ಳುವುದಕ್ಕೆ ಅವಕಾಶ ಕೊಡಲಾಗಿದೆ.
ಪಡಿತರ ಚೀಟಿ ತಿದ್ದುಪಡಿ ಅವಧಿ ವಿಸ್ತರಣೆ
ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡುವುದಕ್ಕೆ ಈ ಹಿಂದೆ 2024ನೇ ಸಾಲಿನ ಡಿಸೆಂಬರ್ 31ರ ವರೆಗೆ ಅವಕಾಶ ಕೊಡಲಾಗಿತ್ತು. ಇದೀಗ ಈ ಅವಧಿಯನ್ನು ವಿಸ್ತರಿಸಲಾಗಿದ್ದು. ಪಡಿತರ ಚೀಟಿ ತಿದ್ದುಪಡಿ ಅವಧಿಯು 2025ನೇ ಸಾಲಿನ ಜನವರಿ ತಿಂಗಳ 31ರ ವರೆಗೆ ಇರಲಿದೆ. ಈ ಅವಧಿಯಲ್ಲಿ ನೀವು ರೇಷನ್ ಕಾರ್ಡ್ ತಿದ್ದುಪಡಿಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳು
ರೇಷನ್ ಕಾರ್ಡ್ ತಿದ್ದುಪಡಿಗೆ ಅಗತ್ಯ ದಾಖಲೆಗಳನ್ನು ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ತಿದ್ದುಪಡಿ ಮಾಡಿಸಲು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಅಥವಾ ಆದಾಯ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಇನ್ನು ಆರು ವರ್ಷದ ಒಳಗಿನ ಮಕ್ಕಳಿದ್ದರೆ, ಜನನ ಪ್ರಮಾಣ ಪತ್ರ ದಾಖಲೆ ಸಲ್ಲಿಸಿ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬಹುದು: ರೇಷನ್ ಕಾರ್ಡ್ ತಿದ್ದುಪಡಿಯ ಅವಧಿಯಷ್ಟೇ ಎಲ್ಲಿ ಮಾಡಿಸಬೇಕು ಎನ್ನುವ ಬಗ್ಗೆಯೂ ಗೊಂದಲ ಸೃಷ್ಟಿಯಾಗಿತ್ತು. ರೇಷನ್ ಕಾರ್ಡ್ ತಿದ್ದುಪಡಿಯನ್ನು ಬೆಂಗಳೂರಿನಲ್ಲಿ ಬೆಂಗಳೂರು ಒನ್‌ಗಳಲ್ಲಿ ಹಾಗೂ ಕರ್ನಾಟಕದ ಇನ್ನುಳಿದ ಜಿಲ್ಲೆಗಳಲ್ಲಿ ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಅವಕಾಶ ನೀಡಲಾಗಿದೆ.
ಗೊಂದಲಗಳಿಗೆ ಬ್ರೇಕ್: ರಾಜ್ಯ ಸರ್ಕಾರವು ಕೊನೆಗೂ ರೇಷನ್ ಕಾರ್ಡ್ ಗೊಂದಲಗಳಿಗೆ ಬ್ರೇಕ್ ಹಾಕಿದೆ. ಇದೀಗ ನೀವು ಜನವರಿ 31ರ ವರೆಗೆ ರೇಷನ್ ಕಾರ್ಡ್‌ನಲ್ಲಿ ಯಾವುದಾದರು ಬದಲಾವಣೆಗಳು ಇದ್ದರೆ ಮಾಡಿಕೊಳ್ಳಲು ಅವಕಾಶ ಇರಲಿದೆ. ಈ ಅವಧಿಯ ಒಳಗಾಗಿ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.












Click it and Unblock the Notifications