Ration Card: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌.. ಅಲೆದಾಟದ ರಿಸ್ಕ್‌ಗೆ ಬ್ರೇಕ್‌

Ration Card: ರಾಜ್ಯದಲ್ಲಿ ಇದೀಗ ಅನರ್ಹ ಪಡಿತರ ಚೀಟಿದಾರರನ್ನ ಪತ್ತೆಹಚ್ಚುವ ಕಾರ್ಯದಲ್ಲಿದೆ. ಈ ನಡುವೆಯೇ ಆಹಾರ ಇಲಾಖೆಯೂ ರೇಷನ್‌ ಕಾರ್ಡ್‌ದಾರರಿಗೆ ಇ-ಕೆವೈಸಿ ಸಂಬಂಧ ಶುಭ ಸುದ್ದಿಯೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿದಾರರಿಗೆ ತೊಂದರೆ ಗದಂತೆ ಕಡ್ಡಾಯ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ನೂತನ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರಿಂದಾಗಿ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಹಾಗೂ ಸರ್ವರ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುವ ಕಿರಿಕಿರಿಯಿಂದ ಸಂಪೂರ್ಣ ಮುಕ್ತಿ ನೀಡಿದೆ.

Ration Card e-KYC Karnataka Complete Online Process Status Check and Latest Food Department Update

ಈ ಯೋಜನೆಯ ಮುಖ್ಯ ಉದ್ದೇಶ ಏನು?

ಪ್ರಸ್ತುತ ಮೊಬೈಲ್ ಅಪ್ಲಿಕೇಶನ್ ಮೂಲಕ ಕೇವಲ ಕೆಲವೇ ನಿಮಿಷಗಳಲ್ಲಿ ಪ್ರತಿಯೊಬ್ಬ ಪಡಿತರ ಫಲಾನುಭವಿಯೂ ಮನೆಯಲ್ಲೇ ಕುಳಿತು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಿ, ಅರ್ಹ ಬಡ ಕುಟುಂಬಗಳಿಗೆ ಹಾಗೂ ನಿಜವಾದ ಫಲಾನುಭವಿಗಳಿಗೆ ಮಾತ್ರ ಆಹಾರ ಧಾನ್ಯಗಳು ಸಿಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

5 ವರ್ಷಕ್ಕಿಂತ ಸಣ್ಣ ಮಕ್ಕಳನ್ನು ಹೊರತುಪಡಿಸಿ ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಒಂದು ವೇಳೆ ನಿಗದಿತ ಸಮಯದೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಪೂರೈಕೆ ಸ್ಥಗಿತಗೊಳ್ಳುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ ಎನ್ನುವ ಮಾಹಿತಿ ಇದೆ.

ಆನ್‌ಲೈನ್‌ನಲ್ಲಿ ಇ-ಕೆವೈಸಿ ಪ್ರಕ್ರಿಯೆ ವಿವರ

* ಮೊಬೈಲ್ ಮೂಲಕ ಪ್ರಕ್ರಿಯೆ ಆರಂಭಿಸುವ ಮುನ್ನ ಕುಟುಂಬದ ಸದಸ್ಯರ ಆಧಾರ್ ವಿವರಗಳು ಹಾಗೂ ಮೂಲ ಪಡಿತರ ಚೀಟಿ ಲಭ್ಯ ಇರಬೇಕು.
* ಆಧಾರ್ ಕಾರ್ಡ್‌ಗೆ ಸಕ್ರಿಯ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು (ಒಟಿಪಿ ಪಡೆಯಲು).
* ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಈಗಾಗಲೇ ಲಿಂಕ್ ಆಗಿರಬೇಕು. ಲಿಂಕ್ ಆಗಿರದಿದ್ದರೆ ಮೊದಲು ನ್ಯಾಯಬೆಲೆ ಅಂಗಡಿಗೆ ಭೇಟಿ ಇದನ್ನು ಪೂರ್ಣಗೊಳಿಸಿಕೊಳ್ಳಬೇಕಾಗುತ್ತದೆ.
* ಮೊಬೈಲ್‌ನಲ್ಲಿ ಇ-ಕೆವೈಸಿ ಮಾಡುವ ವಿಧಾನ
* ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್‌ಗಳ ಮುಖಾಂತರ 'ಮುಖ ಪರಿಶೀಲನೆ' ಮೂಲಕ ಪ್ರಕ್ರಿಯೆ ನಡೆಸಬಹುದು.

ಯಾವೆಲ್ಲಾ ಆ್ಯಪ್‌ಗಳನ್ನ ಇನ್‌ಸ್ಟಾಲ್ ಮಾಡಬೇಕು?: ಗೂಗಲ್ ಪ್ಲೇ ಸ್ಟೋರ್‌ನಿಂದ Mera eKYC (ಅಥವಾ Mera KYC) ಮತ್ತು Aadhaar FaceRD ಎಂಬ ಎರಡು ಅಧಿಕೃತ ಅಪ್ಲಿಕೇಶನ್‌ಗಳನ್ನು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ.

Mera eKYC ಆ್ಯಪ್ ಓಪನ್ ಮಾಡಿ ಕ್ಯಾಮೆರಾ ಮತ್ತು ಲೊಕೇಶನ್ ಅನುಮತಿ ನೀಡಿ. ರಾಜ್ಯವಾಗಿ ಕರ್ನಾಟಕವನ್ನು ಆಯ್ಕೆ ಮಾಡಿ, ಆಧಾರ್ ಸಂಖ್ಯೆ ಹಾಗೂ ಸ್ಕ್ರೀನ್ ಮೇಲಿರುವ ಕ್ಯಾಪ್ಚಾ ಕೋಡ್ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್‌ಗೆ ಬರುವ 6 ಅಂಕಿಗಳ ಒಟಿಪಿ ಹಾಕಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಕುಟುಂಬದ ವಿವರಗಳು ಕಾಣಿಸುತ್ತವೆ.

ಆ್ಯಪ್‌ನಲ್ಲಿರುವ Face e-KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈ ವೇಳೆ ಮೊಬೈಲ್ ಕ್ಯಾಮೆರಾ ಆನ್ ಆಗುತ್ತದೆ. ಉತ್ತಮ ಬೆಳಕಿರುವ ಸ್ಥಳದಲ್ಲಿ ನಿಂತು, ಯಾವುದೇ ಮಾಸ್ಕ್ ಅಥವಾ ಕನ್ನಡಕ ಧರಿಸದೆ ಸ್ಪಷ್ಟವಾಗಿ ಮುಖ ಕಾಣಿಸುವಂತೆ ಫೋಟೋ ತೆಗೆದು ಸಬ್ಮಿಟ್ ಮಾಡಿ. ಇದು ಹೊಂದಾಣಿಕೆಯಾದರೆ ಮಾತ್ರ Success ಅಥವಾ Status 'Y' ಎಂದು ತೋರಿಸುತ್ತದೆ.

ಇ-ಕೆವೈಸಿ ಸ್ಟೇಟಸ್ ಚೆಕ್‌ ಮಾಡುವುದು ಹೇಗೆ?

ಆ್ಯಪ್‌ನಲ್ಲಿ ಅಥವಾ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.karnataka.gov.inಗೆ ಭೇಟಿ ನೀಡಿ, e-Servicesನಲ್ಲಿ ನಿಮ್ಮ ರೇಷನ್ ಕಾರ್ಡ್ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ ಇ-ಕೆವೈಸಿ ಯಶಸ್ವಿಯಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. Status Y ಎಂದರೆ ಪೂರ್ಣಗೊಂಡಿದೆ, Status N ಎಂದರೆ ಬಾಕಿ ಇದೆ ಎಂದರ್ಥ.

ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ ದೇಶದ ಎಲ್ಲೇ ಪಡಿತರ ಪಡೆಯಲು ಇದು ಅಗತ್ಯವಾಗಿದೆ. ಕೊನೆಯ ದಿನಾಂಕಕ್ಕೆ ಕಾಯದೆ ತಕ್ಷಣವೇ ಇ-ಕೆವೈಸಿ ಪೂರ್ಣಗೊಳಿಸುವುದು ಸೂಕ್ತ. ತಾಂತ್ರಿಕ ಅಡಚಣೆಗಳಿದ್ದರೆ ಉಚಿತ ಸಹಾಯವಾಣಿ ಸಂಖ್ಯೆ 1967ಗೆ ಕರೆ ಮಾಡಿ ನೆರವು ಪಡೆಯಬಹುದು ಎಂದು ತಿಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+