ಸಚಿವ ಪ್ರಿಯಾಂಕ್ ಖರ್ಗೆಗೆ ಒಮ್ಮೆ ಪಾಕಿಸ್ತಾನದ ವಾಯು ನೆಲೆಗಳಿಗೆ ಭೇಟಿ ಕೊಡಿ ಎಂದ ಬಿಜೆಪಿ ನಾಯಕ, ಯಾಕೆ ?

ದೇಶದ ಭದ್ರತೆಯ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರ ನಡುವೆ ವಾಕ್ಸಮರ ಮುಂದುವರಿದಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದು
ಕೊಂಡಿರುವ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳು ನಿಮ್ಮ ಕಾಂಗ್ರೆಸ್ ಕಚೇರಿಯಲ್ಲಿ ಐಟಿ ಸೆಲ್ ನಡೆಸುತ್ತಿದ್ದರಾ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಅಂತ ಪ್ರಶ್ನೆ ಮಾಡಿದ್ದಾರೆ.

ಪಹಲ್ಗಾಮ್‌ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರನ್ನು ಕೊಂದ ಉಗ್ರರು ತರಬೇತಿ ಪಡೆದ ಕೇಂದ್ರಗಳು, ಅಲ್ಲಿ ನೆಲೆಸಿದ್ದ ಅವರ 100ಕ್ಕೂ ಹೆಚ್ಚು ಜಿಹಾದಿ ಸಂಗಡಿಗರು, ಅವರ ತಲೆಗೆ ಮತಾಂಧತೆ ತುಂಬಿದ ಭಯೋತ್ಪಾದಕ ಸಂಘಟನೆಗಳ Most Wanted ನಾಯಕರು, ಅವರು ನಡೆಸುತ್ತಿದ್ದ ಮದರಸಾಗಳು, ಅಲ್ಲಿದ್ದ ಶಸ್ತ್ರಾಸ್ತ್ರ, ಸಂವಹನ ಉಪಕರಣಗಳು, ಅವರಿಗೆ ಬೆಂಬಲವಾಗಿ ನಿಂತಿದ್ದ ಪಾಕಿಸ್ತಾನದ ಸೇನಾ ವಾಯುನೆಲೆಗಳು, ಎಲ್ಲವನ್ನೂ ನಮ್ಮ ಸೇನಾಪಡೆಗಳು ನೆಲಸಮ ಮಾಡಿವೆ ಎಂದು ಹೇಳಿದ್ದಾರೆ.

R Ashok asks Minister Priyank Kharge to visit Pakistan s air bases once

ಮುಂದುವರಿದು ಪಾಕಿಸ್ತಾನದ ಆಶ್ರಯದಲ್ಲಿದ್ದ ಉಗ್ರರ ಸಾಮ್ರಾಜ್ಯವೇ ಧೂಳೀಪಟ ಆಗಿರುವಾಗ ಇನ್ನು ಅಲ್ಲಿ ತಲೆ ಎತ್ತಿದ ಹುಳು-ಹುಪ್ಪಟೆಗಳು ಉಳಿಯುತ್ತವೆಯೇ? ಪಹಲ್ಗಾಮ್ ದಾಳಿ ನಡೆಸಿದ ಉಗ್ರರು ಒಂದು ವೇಳೆ ಇನ್ನೂ ಬದುಕಿದ್ದರೆ, ಅವರು, ಪ್ರಪಂಚದ ಯಾವ ಭೂಭಾಗದಲ್ಲಿ, ಪಾತಾಳದಲ್ಲಿ ಅಡಗಿದ್ದರೂ ನಮ್ಮ ಸೇನಾಪಡೆಗಳು, ರಕ್ಷಣಾ ಪಡೆಗಳು ಇಂದಲ್ಲ ನಾಳೆ ಹಿಡಿದೇ ಹಿಡಿಯುತ್ತಾರೆ. ನಮ್ಮ ಸೇನಾಪಡೆಗಳ ಸಾಮರ್ಥ್ಯದ ಬಗ್ಗೆ ಇನ್ನೂ ಏನಾದರೂ ಅನುಮಾನ ಇದ್ದರೆ ದಯವಿಟ್ಟು ಒಮ್ಮೆ ಪಾಕಿಸ್ತಾನದ ವಾಯು ನೆಲೆಗಳಿಗೆ, ಉಗ್ರರ ಅಡಗುತಾಣಗಳಿಗೆ ಭೇಟಿ ಕೊಟ್ಟು ಬನ್ನಿ ಎಂದು ಸವಾಲು ಎಸೆದಿದ್ದಾರೆ.

Take a Poll

ರಾಷ್ಟ್ರೀಯ ಭದ್ರತೆ ವಿಚಾರ ನಮ್ಮ ಸೇನಾಪಡೆಗಳ ಬಿಡಿ. ಆದರೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳು ಎಲ್ಲಿದ್ದಾರೆ ಎಂದು ಮೊದಲು ಉತ್ತರಿಸಿ ಪುಣ್ಯ ಕಟ್ಟಿಕೊಳ್ಳಿ. ಫೋರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ಸಾಬೀತಾದರೂ ಆ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಂಡರಲ್ಲ, ಬಹುಶಃ ಅವರು ನಿಮಗೆ ಬಹಳ ಬೇಕಾದವರು ಇರಬೇಕು. ಅಂದು ಗೆದ್ದ ರಾಜ್ಯಸಭಾ ಸದಸ್ಯರು ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತರು ಕೂಡ. ಆದ್ದರಿಂದ ಆ ದೇಶದ್ರೋಹಿಗಳು ಎಲ್ಲಿದ್ದಾರೆ ಎಂದು ಬಹುಶಃ ತಮಗೆ ಚೆನ್ನಾಗಿ ಗೊತ್ತಿರಲೇಬೇಕು. ಮೊದಲು ಆ ದೇಶದ್ರೋಹಿಗಳನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿ ಅವರನ್ನ ಜೈಲಿಗೆ ಅಟ್ಟಿ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಭದ್ರತೆ ವಿಚಾರದ ಬಗ್ಗೆ ಚರ್ಚೆ ಮಾಡೋದಕ್ಕೆ ಸಂಸತ್ತಿನಲ್ಲಿ ನಿಮ್ಮ ಪಕ್ಷದ ದೊಡ್ಡ ದೊಡ್ಡ ನಾಯಕರು ಇದ್ದಾರೆ. ತಾವು ಮೊದಲು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದವರನ್ನ ಹುಡುಕಿ, ಅವರ ಹೆಡೆಮುರಿ ಕಟ್ಟಿ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+