Puttur Violence: ಪುತ್ತೂರು ಗಲಾಟೆ ಬೆನ್ನಲ್ಲೇ ಕರ್ನಾಟಕದ ಕಾನೂನು ಸುವ್ಯವಸ್ಥೆ ಬಗ್ಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿ ಜನಸೇವಾ ಕೇಂದ್ರದ ಲ್ಯಾಮಿನೇಷನ್ ವಿವಾದದ ನೆಪದಲ್ಲಿ ನಡೆದಿರುವ ಗಲಾಟೆ, ಹಿಂಸಾಚಾರ ಹಾಗೂ ಪೋಲಿಸರ ವಾಹನವನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಹೇಳಲಾಗಿದೆ. ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡಿವೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದಕ್ಕೆ ಈ ಘಟನೆಯೇ ಕಾರಣ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿವೆ.
ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಪುತ್ತೂರು ನಗರದಲ್ಲಿ ಹಾಡುಹಗಲೇ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ರಕ್ಷಣೆಗೆ ಬಂದ ಪೊಲೀಸರ ಕಣ್ಣೆದುರೇ ಪೊಲೀಸ್ ಜೀಪಿನೊಳಗೆ ನುಗ್ಗಿ ಮತ್ತೆ ಹಲ್ಲೆ ನಡೆಸುವ ಮಟ್ಟಿಗೆ ದುಷ್ಕರ್ಮಿಗಳು ಧೈರ್ಯ ತೋರಿರುವುದು ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆಯ ದುರವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಪೊಲೀಸರ ಉಪಸ್ಥಿತಿಯಲ್ಲಿಯೇ ನಾಗರಿಕರಿಗೆ ಸುರಕ್ಷತೆ ಇಲ್ಲದಿದ್ದರೆ, ಸಾಮಾನ್ಯ ಜನರ ಭದ್ರತೆಯ ಪರಿಸ್ಥಿತಿ ಏನಾಗಿರಬಹುದು..?? ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿಯಿಂದ, ತಾವು ಏನು ಮಾಡಿದರೂ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ತಮ್ಮ ರಕ್ಷಣೆಗೆ ನಿಲ್ಲುತ್ತಾರೆ, ಯಾರೂ ಪ್ರಶ್ನಿಸುವುದಿಲ್ಲ ಎನ್ನುವ ಮನಸ್ಥಿತಿ ಮತಾಂಧ ಹಾಗೂ ಕಿಡಿಗೇಡಿ ಶಕ್ತಿಗಳಲ್ಲಿ ಬೆಳೆದಿದೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ.
ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ವಿರುದ್ಧ ದ್ವೇಷದ ರಾಜಕಾರಣದಲ್ಲಿ ನಿರತರಾಗಿರುವ ಬದಲು, ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯತ್ತ ಗಮನ ಹರಿಸಬೇಕು. ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ, ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿ ಜನಸೇವಾ ಕೇಂದ್ರದ ಲ್ಯಾಮಿನೇಷನ್ ವಿವಾದದ ನೆಪದಲ್ಲಿ ನಡೆದಿರುವ ಗಲಾಟೆ, ಹಿಂಸಾಚಾರ ಹಾಗೂ ಪೋಲಿಸರ ವಾಹನವನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಅತ್ಯಂತ ಕಳವಳಕಾರಿ. ಇದು ಕರಾವಳಿಯಲ್ಲಿ ಮತಾಂಧರು ಕಾನೂನನ್ನು ತಾವೇ ಕೈಗೆತ್ತಿಕೊಳ್ಳುತ್ತಿರುವುದಕ್ಕೆ ಮತ್ತೊಂದು ಉದಾಹರಣೆ. ಸಣ್ಣಪುಟ್ಟ ಕಾರಣಗಳ ನೆಪ ಮಾಡಿಕೊಂಡು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸುವುದು, ಅಂಗಡಿಗೆ ನುಗ್ಗಿ ಬೆದರಿಕೆ ಹಾಕುವುದು ಮತ್ತು ರಸ್ತೆಯಲ್ಲಿ ಕಾನೂನನ್ನು ಗಾಳಿಗೆ ತೂರಿ ಉದ್ಧಟತನ ತೋರುತ್ತಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ನಿದರ್ಶನ. ಈ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯದ ನೇರ ಪರಿಣಾಮವಾಗಿದೆ.
ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲು ಬಂದಾಗ, ಆರೋಪಿಗಳ ಪರ ನಿಂತು ಪೊಲೀಸರ ವಾಹನವನ್ನೇ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸುವ ಧೈರ್ಯ ಈ ಮತಾಂಧರಿಗೆ ಬಂದಿರುವುದಾದರೂ ಹೇಗೆ. ಸರ್ಕಾರ ತಮ್ಮ ಪರವಾಗಿದೆ, ಪೊಲೀಸ್, ಕಾನೂನಿನ ಯಾವ ಭಯ ತಮಗಿಲ್ಲ, ತಮಗೇನೂ ಆಗುವುದಿಲ್ಲ ಎಂಬ ಧೈರ್ಯ ಅವರಿಗೆ ಯಾರ ಕೊಡುಗೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೊಡಲೇ ಅತ್ತ ಗಮನಹರಿಸಿ, ಪೊಲೀಸ್ ಇಲಾಖೆಗೆ ಮುಕ್ತ ಸ್ವಾತಂತ್ರ್ಯ ನೀಡಿ, ಕರ್ತವ್ಯನಿರತ ಪೊಲೀಸರ ಮೇಲೆ ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಗೂಂಡಾಗಿರಿ ನಡೆಸಿದ ಎಲ್ಲಾ ಮತಾಂಧರ ವಿರುದ್ಧ ದಾಕ್ಷಿಣ್ಯವಿಲ್ಲದೆ ಕಠಿಣ ಕ್ರಮ ಜರುಗಿಸಬೇಕು.
ಜನರಿಗೆ ರಾಜ್ಯದಲ್ಲಿ ಸರ್ಕಾರವಿದೆ, ಜಂಗಲ್ ರಾಜ್ ಇಲ್ಲ ಎನ್ನುವ ಧೈರ್ಯ ಮೂಡುವಂತೆ ನೋಡಿಕೊಳ್ಳಬೇಕು. ಸ್ಥಳೀಯ ಸಣ್ಣ ವ್ಯಾಪಾರಸ್ಥರು, ಹಾಗೂ ಕಾನೂನು ಪಾಲಕ ಜನರೊಂದಿಗೆ ಪಕ್ಷ ಸದಾ ನಿಂತಿದೆ. ಪರಿಸ್ಥಿತಿ ಕೈಮೀರುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿ ಎನ್ನುವುದೇ ನಮ್ಮ ಆಗ್ರಹವಾಗಿದೆ ಎಂದು ಹೇಳಿದ್ದಾರೆ.
In Puttur, Karnataka, fanatical elements assaulted a Hindu woman in broad daylight and then brazenly entered a police jeep, in the presence of police officers, to continue the attack. Such audacity exists only when criminals believe they enjoy political protection.
— Shobha Karandlaje (@ShobhaBJP) August 22, 2026
Mr. Kharge,… pic.twitter.com/rEuMwvO0tR


Click it and Unblock the Notifications
