ಕರೋನಾ ವೈರಸ್ ರಾತ್ರಿ ಮಾತ್ರಾ ಹರಡುತ್ತಾ ? ನೈಟ್‌ ಕರ್ಫ್ಯೂ ವಿರುದ್ಧ ಜನಾಕ್ರೋಶ

ಬೆಂಗಳೂರು, ಡಿಸೆಂಬರ್ 24 : ಬ್ರಿಟನ್ ನಿಂದ ರೂಪಾಂತರಿ ಕರೋನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇವತ್ತು ರಾತ್ರಿಯಿಂದ ಜಾರಿಗೆ ಬರಲಿರುವ ನೈಟ್ ಕರ್ಫ್ಯೂ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಇದೊಂದು ರಾಜಕೀಯ ಗಿಮಿಕ್, ಕರೋನಾ ವೈರಸ್ ರಾತ್ರಿ ಜನ ಸೇರುವುದರಿಂದ ಮಾತ್ರ ಹರಡುತ್ತಾ ? ' ಮಧ್ಯ ರಾತ್ರಿ ಜನ ನಿದ್ದೆ ಮಾಡೋದು ಬಿಟ್ಟು ರೋಡಲ್ಲಿ ಸೇರ್ತಾರಾ ? ನೈಟ್‌ ಕರ್ಫ್ಯೂ ಅನ್ನೋದೇ ಒಂದು ಜೋಕ್. ಇದರಿಂದ ಏನೂ ಪ್ರಯೋಜನವಿಲ್ಲ. ರೂಪಾಂತರಿ ಹೊಸ ವೈರಸ್ ರಾತ್ರಿ ಪಾಳಿ ಮಾತ್ರ ಹರಡುತ್ತದೆಯೇನು ? ಕಳೆದ ಒಂದು ತಿಂಗಳಿನಿಂದ ಶೇ. 5 ರಷ್ಟು ಮಂದಿ ಮಾಸ್ಕ್ ಹಾಕುತ್ತಿಲ್ಲ ಅವರಿಗೆ ಬಾರದ ಈ ವೈರೆಸ್ ರಾತ್ರಿ ಮಾತ್ರ ಹೇಗೆ ಬರುತ್ತೆ ? ಇವು ರಾತ್ರಿ ಕರ್ಫ್ಯೂ ವಿರುದ್ಧ ಜನರು ವ್ಯಕ್ತಪಡಿಸಿರುವ ಆಕ್ರೋಶದ ಮಾತುಗಳು.

ರಾತ್ರಿ ಕರ್ಫ್ಯೂ ಜಾರಿ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಂಚಿಕೊಂಡಿರುವ ಸುತ್ತೋಲೆ ಪತ್ರಕ್ಕೆ ಜನ ಸಾಮಾನ್ಯರೇ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಗುರುವಾರ ರಾತ್ರಿಯಿಂದ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಜಾರಿಗೆ ತರಲಾಗಿದೆ. ಜನ ಸಂಚಾರ , ವಾಹನ ಸಂಚಾರ, ಹೋಟೆಲ್ ರೆಸ್ಟೋರೆಂಟ್ ಇತರೆ ಸೇವೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಕಟ್ಟು ನಿಟ್ಟಾಗಿ ರಾತ್ರಿ ಕರ್ಫ್ಯೂ ಜಾರಿಗೆ ತರುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ, ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Public Raises Voice against Night Curfew in Karnataka

ರಾತ್ರಿ ಕರ್ಫ್ಯೂ ಜಾರಿಯ ಅವಧಿಯಲ್ಲಿ ಸರ್ಕಾರ ಹಾಕಿರುವ ನಿರ್ಬಂಧಗಳ ಬಗ್ಗೆ ಜನರು ಪ್ರಶ್ನೆ ಮಾಡಿದ್ದಾರೆ. ಬಹುತೇಕ ಸೇವೆಗಳಿಗೆ ಅವಕಾಶ ಕೊಡುವ ಮೂಲಕ ರಾತ್ರಿ ಕರ್ಫ್ಯೂ ಜಾರಿಗೆ ತಂದಿರುವುದು ಅದರ ಅರ್ಥವೇ ಕಳೆದುಕೊಂಡಂತೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಎಂದು ಪ್ರಶಾಂತ್ ಎಸ್‌. ಎಂಬುವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಟ್ವೀಟ್ ನಲ್ಲಿ ಕಾಲೆಳೆದಿದ್ದಾರೆ.

Public Raises Voice against Night Curfew in Karnataka

ಜನರು ಮಲಗಿರುವಾಗ ರಾತ್ರಿ ಕರ್ಫ್ಯೂ ಜಾರಿಗೆ ತಂದು ಏನು ಪ್ರಯೋಜನ ? ಈಗಿರುವ ನಿಯಮದ ಪ್ರಕಾರ ಬಹುತೇಕ ಸೇವೆ ಹನ್ನೊಂದು ಗಂಟೆಗೆ ಸ್ಥಗಿತಗೊಳ್ಳಲಿದೆ. ರಾತ್ರಿ ಕರ್ಫ್ಯೂ ಎಂಬುದು ರಾಜಕೀಯ ಗಿಮಿಕ್ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

Public Raises Voice against Night Curfew in Karnataka

ಅರ್ಧ ರಾಜ್ಯದ ಜನರು ಮಾಸ್ಕ್ ಹಾಕುವುದನ್ನು ತ್ಯಜಿಸಿದ್ದಾರೆ. ಇನ್ನು ಕರೋನಾ ವೈರಾಣುವನ್ನು ನೈಟ್ ಕರ್ಫ್ಯೂ ಹೇಗೆ ತಡೆಯಬಲ್ಲದು, ಇದೊಂದು ಅರ್ಥವಿಲ್ಲದ ಆದೇಶ ಎಂದು ಎಂದು ಕೆಲವರು ಕಾಲಳೆದಿದ್ದಾರೆ. ಇನ್ನೂ ಕೆಲವರು ಮಧ್ಯ ರಾತ್ರಿ ಮಾಜಿಕ್ ಆಗಬಹುದು ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ರಾತ್ರಿ ಕರ್ಪ್ಯೂ ಜಾರಿಗೆ ತಂದಿರುವ ಸರ್ಕಾರದ ಆದೇಶದ ವಿರುದ್ಧ ಜನ ಸಾಮಾನ್ಯರು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Public Raises Voice against Night Curfew in Karnataka

ವಾಸ್ತವ ನೆಲೆಗಟ್ಟಿನಲ್ಲಿ ನೋಡಿದಾಗ, ರಾತ್ರಿ ಹನ್ನೊಂದು ಗಂಟೆಯಿಂದ ಬಹುತೇಕ ವಹಿವಾಟು ಸ್ಥಗಿತಗೊಳ್ಳುತ್ತದೆ. ಬೆಂಗಳೂರು ನಗರ ಹೊರತು ಪಡಿಸಿದರೆ ಹಳ್ಳಿ ಹಾಗು ಜಿಲ್ಲೆಗಳಲ್ಲಿ ಬಹುತೇಕ ಹತ್ತು ಗಂಟೆಗೆ ರಾತ್ರಿ ಕರ್ಫ್ಯೂ ಗಿಂತಲೂ ಭಿನ್ನವಾಗಿ ಇರಲ್ಲ. ಇನ್ನೂ ವಾಹನ ಸಂಚಾರ, ಅಗತ್ಯ ವಸ್ತುಗಳ ಪೂರೈಕೆಗೂ ಅವಕಾಶ ಕಲ್ಪಿಸಲಾಗಿದೆ. ಕೇವಲ ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆಗೆ ಅಡೆತಡೆಯಾಗುವುದು ಬಿಟ್ಟರೆ ರಾತ್ರಿ ಕರ್ಫ್ಯೂ ನಿಯಮಗಳಿಗೂ, ರಾಜ್ಯದಲ್ಲಿ ರಾತ್ರಿಯಿರುವ ಸ್ಥಿತಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+