RSS: ಆರ್‌ಎಸ್‌ಎಸ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ತ್ರಿವರ್ಣ ಧ್ವಜವನ್ನೂ ಒಪ್ಪಿಲ್ಲ!

RSS: ಆರ್‌ಎಸ್‌ಎಸ್‌ನ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಅವರು ಮತ್ತೊಮ್ಮೆ ವಾಗ್ದಾಳಿ ಮುಂದುವರಿಸಿದ್ದಾರೆ. ಸಂವಿಧಾನ ಅಷ್ಟೇ ಅಲ್ಲ ತ್ರಿವರ್ಣ ಧ್ವಜವನ್ನು ಸಹ ಆರೆಸ್ಸೆಸ್ ಅವರು ಒಪ್ಪುವುದಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಜವಾಹರಲಾಲ್ ನೆಹರೂ ಅವರು ನಮ್ಮ ಸಂವಿಧಾನ ಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ, ಸಂವಿಧಾನದ ಲೋಕಾರ್ಪಣೆ ಆಗುತ್ತಿದ್ದಾಗ, ಇದೇ ಆರ್‌ಎಸ್‌ಎಸ್‌ನವರು ದೆಹಲಿಯ ರಾಮಲೀಲಾ ಮೈದಾನದಲ್ಲಿ 150 ಬಾರಿ ಪ್ರತಿಭಟನೆ ನಡೆಸಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಆರೆಸ್ಸೆಸ್ ನವರು ನಾಗಪುರದಲ್ಲಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ದಿನಗಳಂದು 'ಕರಾಳ ದಿನ'ಗಳನ್ನು ಆಚರಿಸುತ್ತಿದ್ದರು. ಅವರು ಸಂವಿಧಾನಕ್ಕಾಗಲಿ, ತ್ರಿವರ್ಣ ಧ್ವಜಕ್ಕಾಗಲಿ ಗೌರವ ನೀಡಲಿಲ್ಲ, ಹಾಗೂ ತ್ರಿವರ್ಣ ಧ್ವಜಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರಿಗೂ ಗೌರವ ನೀಡುತ್ತಿರಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ದೂರಿದ್ದಾರೆ.

RSS

ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮಾಜವಾದಿ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಆರೆಸ್ಸೆಸ್ ನೋಂದಣಿ ಕಡ್ಡಾಯ" ವಿಷಯದ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. 1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ, ಇಡೀ ಭಾರತ ಒಂದೇ ಧ್ವನಿಯಲ್ಲಿ 1930ರ ಜನವರಿ 26 ರಂದು ನಾವು ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ ಎಂದು ನಿರ್ಧರಿಸಿದಾಗ ಎಲ್ಲರೂ ಅದನ್ನು ಒಪ್ಪಿಕೊಂಡರು. ಆದರೆ ಆರೆಸ್ಸೆಸ್ ಸಂಘಟನೆ ಅದನ್ನು ಒಪ್ಪಿರಲಿಲ್ಲ.

1947 ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಾಗಲೂ, ಆರ್‌ಎಸ್‌ಎಸ್ ನಮ್ಮ ತ್ರಿವರ್ಣ ಧ್ವಜವನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ಅವರ 'ಆರ್ಗನೈಸರ್' ಪತ್ರಿಕೆಯಲ್ಲಿ 1947 ರ ಆಗಸ್ಟ್ 14 ರಂದು ತ್ರಿವರ್ಣ ಧ್ವಜದ ಬಗ್ಗೆ ಒಂದು ಲೇಖನ ಬರುತ್ತದೆ. ಅದರಲ್ಲಿ ಹೀಗೆ ಬರೆಯಲಾಗಿತ್ತು: "ವಿಧಿಯಾಟದಿಂದ ಅಧಿಕಾರಕ್ಕೆ ಬಂದಿರುವ ಜನರು ನಿಮ್ಮ ಕೈಗೆ ತ್ರಿವರ್ಣ ಧ್ವಜವನ್ನು ನೀಡಬಹುದು, ಆದರೆ ಅದನ್ನು ನಾವು ಎಂದಿಗೂ ಗೌರವಿಸುವುದಿಲ್ಲ ಮತ್ತು ಸ್ವೀಕರಿಸುವುದಿಲ್ಲ. ನಾವು ಎಂದರೆ ಯಾರು ಇಲ್ಲಿ ಆರ್‌ಎಸ್‌ಎಸ್. 'ಮೂರು' ಎಂಬ ಪದವೇ ಅಶುಭ ಮತ್ತು ಮೂರು ಬಣ್ಣಗಳಿರುವ ಧ್ವಜವು ಕೆಟ್ಟ ಮಾನಸಿಕ ಪರಿಣಾಮವನ್ನು ಬೀರುತ್ತದೆ ಹಾಗೂ ದೇಶಕ್ಕೆ ಹಾನಿಕಾರಕವಾಗಿದೆ." ಎಂದು ಹೇಳಿದ್ದರು ಅಂತ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಎಲ್ಲ ಹಗರಣಗಳು ಬಿಜೆಪಿ ಬಾಗಿಲಿಗೆ ಬಂದು ನಿಲ್ಲಲಿದೆ!

ಬಿಜೆಪಿಗರ ಎದೆ ಸೀಳಿದರೆ ಭ್ರಷ್ಟಾಚಾರ ಮಾತ್ರ ಕಾಣುತ್ತದೆ, ಅಂತೆಯೇ ಎಲ್ಲಾ ಹಗರಣಗಳ ಮೂಲ ಕೆದಕಿದರೆ ಬಿಜೆಪಿಯ ಬಾಗಿಲಿಗೆ ಬಂದು ನಿಲ್ಲುತ್ತದೆ! ಸಾಲು ಸಾಲು ನೇಮಕಾತಿ ಹಗರಣಗಳನ್ನು ನಡೆಸಿದ ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷ ಯಡಿಯೂರಪ್ಪನವರ ಕುಟುಂಬದ ಸಂಬಂಧಿಯಂತೆ. ಆತನ ಮನೆಯಲ್ಲಿ ಯಡಿಯೂರಪ್ಪನವರ ಹಾಗೂ ವಿಜಯೇಂದ್ರರವರ ಫೋಟೋಗಳನ್ನು ಭಕ್ತಿಪೂರ್ವಕವಾಗಿ ಹಾಕಿದ್ದಾನಂತೆ. ಇದನ್ನು ಹೇಳಿರುವುದು ಯಡಿಯೂರಪ್ಪನವರ ಕುಟುಂಬದ ಆಳ ಅಗಲಗಳನ್ನು ಚೆನ್ನಾಗಿ ಬಲ್ಲಂತಹ ಯತ್ನಾಳ್ ಅವರು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕರ್ನಾಟಕ ಸರ್ಕಾರವೇ ನೇಮಿಸಿದ್ದ ಕೆಪಿಎಸ್‌ಸಿ ಅಧ್ಯಕ್ಷನ ಅಕ್ರಮಗಳಲ್ಲಿ ವಿಜಯೇಂದ್ರ ಯಡಿಯೂರಪ್ಪ ಅವರೂ ಪಾಲುದಾರರೇ, ವಿಜಯೇಂದ್ರರವರೇ, ಕೆಪಿಎಸ್‌ಸಿ ವಿಚಾರದಲ್ಲಿ ನಿಮ್ಮ ಒಳಮರ್ಮಗಳು ಬಯಲಾಗುವ ಭಯದಿಂದ ಪ್ರತಿಭಟನೆ ಎಂಬ ನಾಟಕ ಶುರು ಮಾಡಿರುವಿರಾ. ವಿಜಯೇಂದ್ರರವರೇ, ನಿಮ್ಮಲ್ಲಿ ಎಳ್ಳು ಕಾಳಷ್ಟು ನೈತಿಕತೆ ಇದ್ದರೆ ಯತ್ನಾಳ್ ಅವರು ಎತ್ತಿರುವ ವಿಷಯಗಳಿಗೆ ಉತ್ತರ ಹೇಳಿ, ನಿಮಗೂ ಶಿವಶಂಕರಪ್ಪನಿಗೂ ಏನು ಸಂಬಂಧ, ಅಂತಹ ಭ್ರಷ್ಟನನ್ನು ನಿಮ್ಮ ಸರ್ಕಾರ ಕೆಪಿಎಸ್‌ಸಿಗೆ ನೇಮಿಸಿದ್ದೇಕೆ.

ನಿಮ್ಮ ವ್ಯವಹಾರಗಳಿಗೆ ಆತ ಬೇನಾಮಿಯೇ, ನಿಮ್ಮ ಹಾಗೂ ನಿಮ್ಮ ಪೂಜ್ಯ ತಂದೆಯವರ ಮೇಲೆ ಆತನಿಗೆ ಫೋಟೋ ಇಟ್ಟುಕೊಳ್ಳುವಷ್ಟು ಕೃತಜ್ಞನಾಗಿರುವುದೇಕೆ ? ತಾವು ಇದುವರೆಗೂ ಆತನ ವಿರುದ್ಧ ಒಂದೇ ಒಂದು ಪದ ಮಾತನಾಡದಿರುವುದೇಕೆ, ಈ ಪ್ರಶ್ನೆಗಳಿಗೆ ಉತ್ತರ ನೀಡುವ ನೈತಿಕ ಧೈರ್ಯ ನಿಮ್ಮಲ್ಲಿದೆಯೇ ಎಂದೂ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+