RSS ನೋಂದಣಿ ಬಗ್ಗೆ ಮತ್ತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ: “ಕಾನೂನು, ಹಣಕಾಸಿನ ಹೊಣೆಗಾರಿಕೆ ಸ್ಪಷ್ಟವಾಗಲಿ”

ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮತ್ತೆ ಆರ್‌ಎಸ್‌ಎಸ್ ಬಗ್ಗೆ ಕಟು ವಿಮರ್ಶೆ ಹಾಗೂ ಟೀಕೆ ಮಾಡುವುದನ್ನು ಮುಂದುವರಿಸಿದ್ದಾರೆ. ಆರೆಸ್ಸೆಸ್‌ನ ನೋಂದಣಿ, ಸಾರ್ವಜನಿಕ ಹೊಣೆಗಾರಿಕೆ ಹಾಗೂ ಸಮಾಜದಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಕುರಿತು ಅವರ ಅಭಿಪ್ರಾಯಗಳನ್ನು India Today ಆಯೋಜಿಸಿದ್ದ ದುಂಡುಮೇಜಿನ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ಅವರು ಮಾತನಾಡಿರುವ ಹಲವು ವಿಷಯಗಳು ಮತ್ತೆ ಚರ್ಚೆಗೆ ಕಾರಣವಾಗಿದೆ.

ನೂರು ವರ್ಷಗಳ ಇತಿಹಾಸ ಹೊಂದಿರುವ ಆರ್ಎಸ್‌ಎಸ್ ಏಕೆ ನೋಂದಣಿ ಮಾಡಿಕೊಂಡಿಲ್ಲ ಎಂದು ಪ್ರಶ್ನಿಸುವುದು ತಪ್ಪೇ? ಇದು ಯಾರನ್ನೂ ಗುರಿಯಾಗಿಸಿಕೊಂಡ ಪ್ರಶ್ನೆಯಲ್ಲ. ಸಂವಿಧಾನ ನನಗೆ ನೀಡಿರುವ ಹಕ್ಕಿನ ಮೂಲಕ ಕೇಳುತ್ತಿರುವ ಸರಳ ಪ್ರಶ್ನೆ. ಆರ್ಎಸ್‌ಎಸ್ ಯಾಕೆ ನೋಂದಣಿ ಮಾಡಿಕೊಳ್ಳುತ್ತಿಲ್ಲ? ಅದರ ಕಾನೂನು ಸ್ಥಾನಮಾನವೇನು? ಅದರ ಹಣಕಾಸು ಮತ್ತು ಹೊಣೆಗಾರಿಕೆಗಳ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟತೆ ಏಕೆ ಇರಬಾರದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ.

RSS

ಮುಂದುವರಿದು ಈ ಪ್ರಶ್ನೆಗಳಿಗೆ ಬಿಜೆಪಿ ಅಥವಾ ಆರ್ಎಸ್‌ಎಸ್ ನಾಯಕರು ಸಮರ್ಪಕ ಉತ್ತರ ನೀಡುವ ಬದಲು, ಪ್ರಶ್ನೆ ಕೇಳಿದವರನ್ನೇ ಗುರಿಯಾಗಿಸುವುದು ಏಕೆ ಆರ್ಎಸ್‌ಎಸ್ ನೋಂದಣಿ ಮತ್ತು ಕಾನೂನು ಸ್ಥಾನಮಾನದ ಕುರಿತು ನನ್ನ ಪ್ರಶ್ನೆಗಳು ಹೊಸದಲ್ಲ. ಈ ವಿಚಾರವಾಗಿ ಆರ್ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಂದಲೂ ಪ್ರತಿಕ್ರಿಯೆ ಬಂದಿರುವುದು ಸಾರ್ವಜನಿಕ ದಾಖಲೆಗಳಲ್ಲಿದೆ.

ಇನ್ನು, ನನ್ನ ರಾಜಕೀಯ ಬದುಕಿನ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ಒಂದು ವಿಷಯ ನೆನಪಿರಲಿ. ನಾನು ಒಂದು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಅದೇ ಚಿತ್ತಾಪುರದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಮೂರು ಬಾರಿ ಗೆಲ್ಲಿಸಿದ್ದಾರೆ. ನನ್ನ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಅದನ್ನು ನಾನು ಎಂದಿಗೂ ಮುಚ್ಚಿಡುವುದಿಲ್ಲ. ಆದರೆ ನನ್ನ ಪ್ರತಿಯೊಂದು ಗೆಲುವನ್ನೂ ನನ್ನ ತಂದೆಯ ಹೆಸರಿನೊಂದಿಗೆ ಮಾತ್ರ ಜೋಡಿಸಿ ನೋಡುವುದು ಚಿತ್ತಾಪುರದ ಮತದಾರರ ತೀರ್ಪಿಗೆ ಅವಮಾನ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ನನ್ನನ್ನು ಗೆಲ್ಲಿಸಿರುವುದು ಚಿತ್ತಾಪುರದ ಜನರು. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಮೊದಲು ತಮ್ಮ ಪಕ್ಷದೊಳಗೆ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಾಯಕರ ಪಟ್ಟಿಯನ್ನೊಮ್ಮೆ ನೋಡಿಕೊಳ್ಳಲಿ. ರಾಜಕೀಯದಲ್ಲಿ ವಂಶವಲ್ಲ, ಜನರ ವಿಶ್ವಾಸವೇ ಅಂತಿಮ ಮಾನದಂಡ. ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ. ಸಂವಿಧಾನ ನೀಡಿರುವ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ. ಸತ್ಯ ಮತ್ತು ಹೊಣೆಗಾರಿಕೆಯ ಪರವಾಗಿ ನನ್ನ ಧ್ವನಿ ಮುಂದುವರಿಯುತ್ತದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+