New Alcohol Price: ಎಣ್ಣೆ ಪ್ರಿಯರಿಗೆ ಶಾಕ್: ಯಾವೆಲ್ಲ ಎಣ್ಣೆ ಬ್ರ್ಯಾಂಡ್ ಬೆಲೆ ಜಾಸ್ತಿ ಆಗಿದೆ ನೋಡಿ!
Alcohol Price Hike Karnataka: ರಾಜ್ಯ ಕಾಂಗ್ರೆಸ್ ಸರ್ಕಾರವು ಮದ್ಯ ಪ್ರಿಯರಿಗೆ ಇಂದಿನಿಂದ (ಜನವರಿ 20)ರಿಂದ ಮದ್ಯ ಬೆಲೆಯನ್ನು ಏರಿಕೆ ಮಾಡುವ ಮೂಲಕ ಶಾಕ್ ಕೊಟ್ಟಿದೆ. ಹೊಸ ಮದ್ಯದ ಬೆಲೆಯು ಕರ್ನಾಟಕದಲ್ಲಿ ಜನವರಿ 20ರಿಂದಲೇ ಜಾರಿಯಾಗಿದೆ. ಮದ್ಯಪ್ರಿಯರು ಸಮಾಧಾನಪಡುವ ಸಂಗತಿಯೆಂದರೆ ಎಲ್ಲಾ ಮದ್ಯಗಳ ಬೆಲೆಯಲ್ಲೂ ಹೆಚ್ಚಳವಾಗಿಲ್ಲ. ಕೇವಲ ಕೆಲವೊಂದು ಪ್ರಮುಖ ಎಣ್ಣೆಗಳ ಬೆಲೆ ಮಾತ್ರ ಹೆಚ್ಚಳವಾಗಿದೆ. ಆದರೆ ಎಣ್ಣೆಗಳ ಬೆಲೆಯು 10 ರೂಪಾಯಿಯಿಂದ 55 ರೂಪಾಯಿಯ ವರೆಗೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಈಗಾಗಲೇ ವಿವಿಧ ವಸ್ತುಗಳ ಬೆಲೆ ಏರಿಕೆಯಾಗಿದೆ. ಅಲ್ಲದೆ ವಿವಿಧ ಸೇವೆಗಳ ಬೆಲೆಯನ್ನೂ ಹೆಚ್ಚಳ ಮಾಡಲಾಗಿದೆ. ಮೆಟ್ರೋ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ವಿವಿಧ ಸೇವೆಗಳ ಬೆಲೆ ಈಗಾಗಲೇ ಹೆಚ್ಚಳವಾಗಿದೆ. ಇದರ ನಡುವೆ ರಾಜ್ಯದಲ್ಲಿ ಎಣ್ಣೆಯ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಯಾವೆಲ್ಲ ಎಣ್ಣೆಯ ಬ್ರ್ಯಾಂಡ್ ಹಾಗೂ ಯಾವ ಎಣ್ಣೆಯ ಬೆಲೆ ಎಷ್ಟಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆಲ್ಲರಿಗೂ ಈಗ ರಾಜ್ಯ ಕಾಂಗ್ರೆಸ್ ಸರ್ಕಾರವು ಹೊಸ ವರ್ಷದ ಮೊದಲ ತಿಂಗಳಿನಲ್ಲೇ ದೊಡ್ಡ ಮಟ್ಟದ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಈಗಾಗಲೇ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದ್ದು. ಪ್ರತಿದಿನವೂ ಒಂದಿಲ್ಲೊಂದು ವಸ್ತು ಹಾಗೂ ಸೇವೆಗಳ ಬೆಲೆಯು ನಿರಂತರವಾಗಿ ಜಾಸ್ತಿ ಆಗ್ತಿದೆ. ಈ ರೀತಿ ಇರುವಾಗಲೇ ಮದ್ಯ ಪ್ರಿಯರ ಜೇಬಿಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. ಈಗ ಸರ್ಕಾರವು ಎಣ್ಣೆ ಪ್ರಿಯರಿಗೆ ಅದರಲ್ಲೂ ಮುಖ್ಯವಾಗಿ ಬಿಯರ್ ಪ್ರಿಯರಿಗೆ ಶಾಕ್ ನೀಡಲಾಗಿದೆ. 2024 -2025ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಮಟ್ಟದ ಆದಾಯ ಬಂದಿಲ್ಲ ಅಂತ ಹೇಳಲಾಗಿದೆ.

ರಾಜ್ಯ ಸರ್ಕಾರದ ಖಜಾನೆ ಹಣ ಹರಿದು ಬರುವ ಪ್ರಮುಖ ಆದಾಯ ಮೂಲಗಳಲ್ಲಿ ಅಬಕಾರಿ ಇಲಾಖೆಯು ಪ್ರಮುಖವಾಗಿದೆ. ಆದರೆ 2024 -25ನೇ ಸಾಲಿನಲ್ಲಿ ವರ್ಷಾಂತ್ಯದ ಡಿಸೆಂಬರ್ ಹಾಗೂ ಜನವರಿ ಮೊದಲ ವಾರದಲ್ಲಿ ಮಾತ್ರ ಹೆಚ್ಚು ಎಣ್ಣೆ ಸೇಲ್ ಆಗಿದೆ. ಆದರೆ ಉಳಿದ ತಿಂಗಳುಗಳಲ್ಲಿ ಮದ್ಯ ಮಾರಾಟ ಹೇಳಿಕೊಳ್ಳುವಷ್ಟು ಇರಲಿಲ್ಲ ಅಂತ ಹೇಳಲಾಗಿದೆ. ಹೊಸ ವರ್ಷದ ಪ್ರಾರಂಭದಲ್ಲೆಲ್ಲಾ ಭರ್ಜರಿ ಮದ್ಯ ಮಾರಾಟವಾಗಿರುವುದು ನಿಜ. ಆದರೆ ವರ್ಷ ಪೂರ್ತಿ ನಿರೀಕ್ಷಿತ ಆದಾಯ ಸರ್ಕಾರಕ್ಕೆ ಬಂದಿಲ್ಲ. ಇದೀಗ ಜನವರಿ 20ರಿಂದ ರಾಜ್ಯದಲ್ಲಿ ಯಾವ ಮದ್ಯದ ಬೆಲೆ ಹೆಚ್ಚಳ ಹಾಗೂ ಯಾವ ಬ್ರ್ಯಾಂಡ್‌ನ ಬೆಲೆ ಹೆಚ್ಚಳವಾಗಿದೆ ಎನ್ನುವ ಕಂಪ್ಲೀಟ್ ಮಾಹಿತಿ ನೋಡೋಣ.
ಸ್ಟ್ರಾಂಗ್ ಬಿಯರ್ ಬೆಲೆ ಹೆಚ್ಚಳ: ರಾಜ್ಯ ಸರ್ಕಾರವು ವಿವಿಧ ಮದ್ಯದ ಬೆಲೆಯನ್ನು ಹೆಚ್ಚಳ ಮಾಡಿದೆ. ಆದರೆ ಮುಖ್ಯವಾಗಿ ಸ್ಟ್ರಾಂಗ್ ಬಿಯರ್‌ನ ಬೆಲೆ ಮಾತ್ರ ಹೆಚ್ಚಳವಾಗಿದೆ . ಹಲವು ಪ್ರಮುಖ ಬಿಯರ್‌ಗಳ ಬೆಲೆ ಹೆಚ್ಚಳವಾಗುತ್ತಿದೆ. ದೊಡ್ಡ ಮೊತ್ತದ ಬಿಯರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ 300 ರೂಪಾಯಿಯ ಒಳಗಿನ ಬಿಯರ್ ಬೆಲೆಯು ಭರ್ಜರಿ ಹೆಚ್ಚಳವಾಗಿದೆ.
ಈ ಬಿಯರ್‌ಗಳ ಬೆಲೆ ಹೆಚ್ಚಳ: ವುಡ್‌ಪೆಕರ್ ಗ್ಲೈಡ್, ಹಂಟರ್, ಬ್ಲ್ಯಾಕ್ ಫೋರ್ಟ್,ವುಡ್‌ಪೆಕರ್ ಕ್ರೆಸ್ಟ್, ಲೆಜೆಂಡ್ ಹಾಗೂ ಪವರ್ ಕೂಲ್ ಬಿಯರ್‌ಗಳ ಬೆಲೆ ಹೆಚ್ಚಳವಾಗಿದೆ.
ಬಿಯರ್ - ಹೊಸ ಬೆಲೆ - ಹಳೆಯ ಬೆಲೆ
ವುಡ್‌ಪೆಕರ್ ಗ್ಲೈಡ್ 240 ರೂಪಾಯಿ | 230 ರೂ.
ವುಡ್‌ಪೆಕರ್ ಕ್ರೆಸ್ಟ್ 250 ರೂಪಾಯಿ | 240 ರೂ.
ಹಂಟರ್ 190 ರೂಪಾಯಿ | 180 ರೂ.
ಬ್ಲ್ಯಾಕ್ ಫೋರ್ಟ್ 160 ರೂಪಾಯಿ | 145 ರೂ.
ಪವರ್ ಕೂಲ್ 155 ರೂಪಾಯಿ | 130 ರೂ.
ಲೆಜೆಂಡ್ 145 ರೂಪಾಯಿ | 100 ರೂ.












Click it and Unblock the Notifications