ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ರಾಷ್ಟ್ರಪತಿ ಕೋವಿಂದ್ ಜೂ.13ರಿಂದ ಎರಡು ದಿನಗಳ ಕರ್ನಾಟಕ ಭೇಟಿ
ಬೆಂಗಳೂರು, ಜೂ.6: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜೂ.13ರಿಂದ ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ.
ಅಧಿಕೃತ ಪ್ರವಾಸದ ಮಾಹಿತಿ ಪ್ರಕಾರ ರಾಷ್ಟ್ರಪತಿ ಅವರು ಜೂ.13ರಂದು ಬೆಳಗ್ಗೆ ಬೆಂಗಳೂರು ತಲುಪುತ್ತಾರೆ. ಅಂದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಿಲಿಟರಿ ಶಾಲೆಯ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ರಾತ್ರಿ ರಾಜಭವನದಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.
ಜೂ. 14ರಂದು ಕನಕಪುರ ರಸ್ತೆ ದೊಡ್ಡಕಲ್ಲಸಂದ್ರದಲ್ಲಿ ವೈಕುಂಠ ಬೆಟ್ಟದಲ್ಲಿ ಇಸ್ಕಾನ್ ಸಂಸ್ಥೆ ನಿರ್ಮಿಸಿರುವ ತಿರುಪತಿ ತಿರುಮಲ ದೇವಸ್ಥಾನ ಮಾದರಿಯ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಅಂದು ಸಂಜೆ ದೆಹಲಿಗೆ ಮರಳಿದ್ದಾರೆ ಎಂದು ಪ್ರವಾಸದ ಪಟ್ಟಿ ತಿಳಿಸಿದೆ.
Recommended Video
South Africaಗೆ ನಡುಕ ಹುಟ್ಟಿಸಲು Dinesh Karthik ಹೇಗೆ ಪ್ರಾಕ್ಟೀಸ್ ಮಾಡ್ತಿದ್ದಾರೆ ನೋಡಿ | OneIndia Kannada
Comments
English summary
President Ram Nath Kovind visit Bengaluru on June-13. Participate at the Platinum Jubliee celebrations of Rasthtriya Military School.