Railway Projects: ಕರ್ನಾಟಕಕ್ಕೆ ರೈಲ್ವೆ ಅನ್ಯಾಯ? ಎಂಬಿ ಪಾಟೀಲ್ ಆರೋಪಕ್ಕೆ ಪ್ರತಾಪ್ ಸಿಂಹ ಕೊಟ್ಟ ಉತ್ತರವೇನು?

ಬೆಂಗಳೂರು: ನಾನು ಸಂಸದನಾಗಿದ್ದಾಗಲೇ ಮೈಸೂರು-ಬೆಂಗಳೂರು ಚತುಷ್ಪಥ ಹಳಿ ಹಾಕುವುದಕ್ಕೆ (Quadrapuling) ರೈಲ್ವೆ ಮಂಡಳಿ ಆದೇಶ ಮಾಡಲಾಗಿದೆ. ಅಭಿವೃದ್ಧಿ, ವಾಸ್ತವ ವಿಷಯದಲ್ಲಿ ನಾವು ಕಾಂಗ್ರೆಸ್ಸಿಗರಿಂದ ಹೇಳಿಸಿಕೊಳ್ಳುವುದಿಲ್ಲ ಎಂದು ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಅವರಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಿರುಗೇಟು ನೀಡಿದ್ದಾರೆ.

ದೇಶದ ಏಳು ಮಾರ್ಗಗಳನ್ನು ಚುತುಷ್ಟಥ ರೈಲ್ವೆ ಮಾರ್ಗವಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವರು ಹೇಳಿದ್ದಾರೆ. ಇದರಲ್ಲಿ ಕರ್ನಾಟಕ ಮಾರ್ಗವಾಗಿ ಹಾದು ಹೋಗುವ, ರಾಜ್ಯದ ಒಂದೇ ಒಂದು ರೈಲು ಮಾರ್ಗವನ್ನು ಆಯ್ಕೆ ಮಾಡದೇ ಕಡೆಗಣಿಸಲಾಗಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಎಂಬಿ ಪಾಟೀಲ್ ಅವರು ಶುಕ್ರವಾರ ಹೇಳಿದ್ದರು. ಇದಕ್ಕೆ ಪ್ರತಾಪ್ ಸಿಂಹ ಅವರು ಶನಿವಾರ ಎಕ್ಸ್ ಪೋಸ್ಟ್ ಮೂಲಕ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

Pratap Simha Hits Back at MB Patil Over Karnataka Rail Projects and Quadrupling of Railway Lines

ಪ್ರತಾಪ್ ಸಿಂಹ ಅವರು ರೈಲ್ವೆ ಕಾಮಗಾರಿಗಳ ಚಾಟ್ ಹಂಚಿಕೊಂಡಿದ್ದಾರೆ. ಭಾರತೀಯ ರೈಲ್ವೆಯು ಒಟ್ಟು 1646 ಕಿಲೋ ಮೀಟರ್ ಉದ್ದದ 12 ಪ್ರಮುಖ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಅಂತಿಮ ಸ್ಥಳ ಸಮೀಕ್ಷೆಗೆ ಸೂಚನೆ ನೀಡಿದೆ. ಅದರಲ್ಲಿ ಪ್ರಸ್ತಾಪಿತ ಯೋಜನೆಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ವೃತ್ತಾಕಾರದ ದ್ವಿಪಥ ರೈಲು ಮಾರ್ಗವು ಇದೆ. ಬೆಂಗಳೂರಿನ ಸುತ್ತಮ 288 ಕಿ.ಮೀ ಉದ್ದದ ಹೊಸ ವೃತ್ತಾಕಾರದ ರೈಲು ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿದೆ.

ಮಾತ್ರವಲ್ಲದೇ ಬೆಂಗಳೂರು-ತುಮಕೂರು (70 ಕಿ.ಮೀ), ಬಂಗಾರಪೇಟೆ-ಜೋಲಾರ್‌ಪೇಟೆ (72 ಕಿ.ಮೀ) ಹಾಗೂ ಚಾಮರಾಜನಗರ-ಮೈಸೂರು (60 ಕಿ.ಮೀ) ಮಾರ್ಗಗಳ 3ನೇ ಮತ್ತು 4ನೇ ಹಳಿಗಳ ವಿಸ್ತರಣೆ ಕಾಮಗಾರಿಗಳಿಗೆ 9 ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದೆ.

ಇನ್ನೂ ಹುಬ್ಬಳ್ಳಿ-ಹೊಸಪೇಟೆ (143 ಕಿ.ಮೀ), ಹಾಸನ-ಕುಣಿಗಲ್-ಚಿಕ್ಕಬಾಣಾವರ (166 ಕಿ.ಮೀ), ಬೆಂಗಳೂರು-ಮೈಸೂರು (137 ಕಿ.ಮೀ), ಹೊಸಪೇಟೆ-ವ್ಯಾಸಕಾಲೋನಿ, ಗಿನಿಗೇರಾ-ರಾಯಚೂರು, ಗದಗ-ವಾಡಿ (257 ಕಿ.ಮೀ) ಮಾರ್ಗಗಳ ದ್ವಿಪಥ ಮತ್ತು ಮಾರ್ಗ ವಿಸ್ತರಣೆ ಮಾಡಲಾಗುತ್ತಿದೆ. ಇದರಲ್ಲಿ ಕೆಲವು ಯೋಜನೆ ಆರಂಭವಾಗಿವೆ. ಇನ್ನೂ ಕೆಲವು ಸಮೀಕ್ಷೆ ಹಂತದಲ್ಲಿವೆ. ಇದರಿಂದ ರಾಜ್ಯದ ರೈಲ್ವೆ ಸಾರಿಗೆ ಸಂಪರ್ಕ ಸುಧಾರಣೆ ಆಗಲಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಆದ್ಯತೆ ನೀಡಿದೆ ಎಂದು ತಿಳಿಸಿದ್ದಾರೆ.

ಎಂಬಿ ಪಾಟೀಲ್ ಹೇಳಿದ್ದೇನು?

ಕೇಂದ್ರ ಸರ್ಕಾರವು ದೇಶದಲ್ಲಿ ಸುಗಮ ರೈಲು ಸಂಚಾರ‌ ಮತ್ತು ಸರಕು ಸಾಗಣೆ ಉದ್ದೇಶದಿಂದ ಅತಿಸಾಂದ್ರತೆ ಇರುವ ಏಳು ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ಕರ್ನಾಟಕದ ಒಂದೇ ಒಂದು ಮಾರ್ಗವನ್ನೂ ಪರಿಗಣಿಸದೇ ಅನ್ಯಾಯ ಮಾಡಿದೆ. ಬೆಂಗಳೂರು- ಪುಣೆ- ಮುಂಬೈ, ಬೆಂಗಳೂರು- ಮೈಸೂರು, ಬೆಂಗಳೂರು- ಮಂಗಳೂರು, ಬೆಂಗಳೂರು- ಚೆನ್ನೈ, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ವಿಜಯಪುರ, ಬೆಂಗಳೂರು- ಕಲಬುರಗಿ- ಹೀಗೆ ಹತ್ತಾರು ಅತಿದಟ್ಟಣೆಯ ಮಾರ್ಗಗಳು ರಾಜ್ಯದಲ್ಲಿವೆ. ಕೇಂದ್ರ ಸರ್ಕಾರ ಸಮಗ್ರವಾಗಿ ಚತುಷ್ಪಥ ಮಾರ್ಗಗಳನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಎಂಬಿ ಪಾಟೀಲರು ಆಗ್ರಹಿಸಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಮೂಲಕ ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ಕೇಂದ್ರ ಆಯ್ಕೆ ಮಾಡಿದ 7 ಮಾರ್ಗಗಳು ಯಾವುವು?

ದೆಹಲಿ- ಹೌರಾ, ಹೌರಾ- ಚೆನ್ನೈ, ಚೆನ್ನೈ- ಮುಂಬೈ, ಮುಂಬೈ- ದೆಹಲಿ, ದೆಹಲಿ-ಚೆನ್ನೈ, ಮುಂಬೈ- ಹೌರಾ, ದೆಹಲಿ- ಗುವಾಹಟಿ ಸೇರಿ ಒಟ್ಟು 7 ರೈಲ್ವೆ ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಅಶ್ವಿನಿ ವೈಷ್ಣವ್ ಘೋಷಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+