ದೇವನಹಳ್ಳಿಯಲ್ಲಿ ₹600 ಕೋಟಿಯ ಬೃಹತ್ ಘಟಕಕ್ಕೆ ಚಾಲನೆ: ರಾಜ್ಯದಲ್ಲಿ ಪ್ರತ್ಯೇಕ ಕೈಗಾರಿಕಾ ಪಾರ್ಕ್: ಎಂಬಿ ಪಾಟೀಲ್

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಕುಂದಾಣ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ ದಕ್ಷಿಣ ಕೊರಿಯಾ ಮೂಲದ ಡಿ.ಎನ್.ಸೊಲ್ಯೂಷನ್ಸ್‌ ಕಂಪನಿಯು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ತಯಾರಿಕೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಆಂಡ್ ಡಿ) ಘಟಕವನ್ನು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಮಶೀನ್‌ ಟೂಲ್‌ ತಯಾರಿಕೆಗೆ ಹೆಸರಾಗಿರುವ ಡಿ.ಎನ್.ಸೊಲ್ಯೂಷನ್ಸ್‌ ಕಂಪನಿಯೊಂದಿಗೆ ಎರಡು ವರ್ಷಗಳ ಹಿಂದೆ ನಾನು ಕೊರಿಯಾ ಪ್ರವಾಸ ಕೈಗೊಂಡಿದ್ದಾಗ ಈ ಒಡಂಬಡಿಕೆ ಆಗಿತ್ತು. ಇಷ್ಟು ಕ್ಷಿಪ್ರ ಅವಧಿಯಲ್ಲಿ ತಯಾರಿಕೆ ಮತ್ತು ಆರ್‌ & ಡಿ ಘಟಕಗಳು ಸಿದ್ಧವಾಗಿರುವುದು ದೊಡ್ಡ ದಾಖಲೆಯಾಗಿದೆ. ಹೀಗೆ ಎರಡೂ ಸ್ಥಾವರಗಳು ಒಂದೆಡೆ ಸಾಕಾರಗೊಂಡಿರುವುದು ವಿಶಿಷ್ಟ ಸಂಗತಿಯಾಗಿದೆ' ಎಂದು ತಿಳಿಸಿದರು.

DN Solutions

ಮಶೀನ್‌ ಟೂಲ್ಸ್‌ ನಿರ್ಣಾಯಕ ಪಾತ್ರ: ಪಾಟೀಲ

ರಾಜ್ಯವು ಸೇವಾಧಾರಿತ ಆರ್ಥಿಕತೆಯಿಂದ ಉತ್ಪಾದನೆ ಆಧರಿತ ಆರ್ಥಿಕತೆಯಾಗಿ ರೂಪಾಂತರಗೊಳ್ಳುತ್ತಿರುವ ಸಂಕ್ರಮಣಾವಸ್ಥೆಯಲ್ಲಿದೆ. ತಯಾರಿಕೆ ವಲಯದಲ್ಲಿ ಬರುವ ಆಟೋಮೊಬೈಲ್‌, ಹೆವಿ ಎಂಜಿನಿಯರಿಂಗ್‌, ಏರೋಸ್ಪೇಸ್‌, ರಕ್ಷಣೋದ್ಯಮ, ಪ್ರಿಸಿಷನ್‌ ತಯಾರಿಕೆ ಹೀಗೆ ಪ್ರತಿಯೊಂದರಲ್ಲೂ ಮಶೀನ್‌ ಟೂಲ್ಸ್‌ ನಿರ್ಣಾಯಕ ಪಾತ್ರ ವಹಿಸುತ್ತದೆ. ನಾವು ಹೆಚ್ಚಾಗಿ ಈ ಸ್ವರೂಪದ ಬಂಡವಾಳ ಹೂಡಿಕೆಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಅವರು ವಿವರಿಸಿದರು.

ಕರ್ನಾಟಕ ಶೇ.52ರಷ್ಟು ಕೊಡುಗೆ

ದೇಶದ ಒಟ್ಟಾರೆ ಮಶೀನ್‌ ಟೂಲ್ಸ್‌ ತಯಾರಿಕೆ ವಲಯಕ್ಕೆ ರಾಜ್ಯವು ಶೇ.52ರಷ್ಟು ಕೊಡುಗೆ ನೀಡುತ್ತಿದೆ. ಡಿ.ಎನ್.ಸೊಲ್ಯೂಷನ್ಸ್‌ ತನ್ನ ಹೂಡಿಕೆಗೆ ನಮ್ಮಲ್ಲಿಗೆ ಬರಲು ಇದು ಪ್ರಮುಖ ಕಾರಣವಾಗಿದೆ. ಇಲ್ಲಿ ಈಗಾಗಲೇ 350 ಮಂದಿ ಉದ್ಯೋಗನಿರತರಾಗಿರುವುದು ಸಂತಸದ ಸಂಗತಿಯಾಗಿದೆ. ಕಂಪನಿಯು ಇಲ್ಲಿಂದಲೇ ತನ್ನ ಜಾಗತಿಕ ಮಟ್ಟದ ಪೂರೈಕೆಯನ್ನು ನಿರ್ವಹಿಸಬೇಕು. ಜತೆಗೆ ನಮ್ಮಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಪ್ರಶಿಕ್ಷಣ, ತರಬೇತಿ ಮತ್ತು ಉದ್ಯಮಸಂಬಂಧಿ ಕಾರ್ಯಕ್ರಮಗಳಲ್ಲಿ ಕಂಪನಿಯು ಸಕ್ರಿಯ ಭಾಗವಾಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಉತ್ತಮ ಕೈಗಾರಿಕೆ ಸೌಲಭ್ಯ, ಏಕಗವಾಕ್ಷಿ ವ್ಯವಸ್ಥೆ

ಕರ್ನಾಟಕ ಕೈಗಾರಿಕಾಸ್ನೇಹಿ ನೀತಿಗಳಲ್ಲಿ ಮುಂಚೂಣಿಯಲ್ಲಿದೆ. ಏಕಗವಾಕ್ಷಿ ವ್ಯವಸ್ಥೆ ಮತ್ತು ತಿದ್ದುಪಡಿಯ ಮೂಲಕ ರೂಪಿಸಿರುವ ಕೈಗಾರಿಕಾ ಸೌಲಭ್ಯ ವಿಧೇಯಕಗಳು ಹೂಡಿಕೆದಾರರಿಗೆ ಬೆರಳತುದಿಯಲ್ಲಿ ಸೇವೆ ಒದಗಿಸುತ್ತಿವೆ. ಇದು ನಮ್ಮ ಸುಗಮ ವಾಣಿಜ್ಯ ಸಂಸ್ಕೃತಿಯ ಭಾಗವಾಗಿದ್ದು, ಅಗತ್ಯ ಪ್ರಕ್ರಿಯೆಗಳನ್ನೆಲ್ಲ ತುಂಬಾ ಸರಳಗೊಳಿಸಲಾಗಿದೆ ಎಂದು ಪಾಟೀಲ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಪ್ರತ್ಯೇಕ ಕೈಗಾರಿಕಾ ಪಾರ್ಕ್

ಜಪಾನ್ ಟೂಲ್ಸ್ ಪಾರ್ಕ್ ಮಾದರಿಯಲ್ಲೇ ಕೋರಿಯಾ ದೇಶದ ಕಂಪನಿಗಳ ಸಲುವಾಗಿ ರಾಜ್ಯದಲ್ಲಿ ಪ್ರತ್ಯೇಕ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ತುಮಕೂರು ಸಮೀಪ ಸ್ಥಾಪಿಸಿರುವ ಜಪಾನ್ ಟೂಲ್ಸ್ ಕೈಗಾರಿಕಾ ಪಾರ್ಕ್ ಈಗ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ಕೋರಿಯಾ ಪಾರ್ಕ್ ಕೂಡ ಅಭಿವೃದ್ಧಿ ಪಡಿಸಲಾಗುವುದು. ಎಲ್ಲಿ ಮಾಡಬೇಕು ಎಂಬುದನ್ನು ನಂತರದ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಡಿ ಎನ್ ಸಲ್ಯೂಷನ್ಸ್ ಕಂಪನಿಯ ಅಧ್ಯಕ್ಷ ವೊನ್‌ ಜಾಂಗ್‌ ಕಿಮ್‌ ಅವರು, ಸಂಸ್ಥೆ ನಡೆದು ಬಂದ ಹಾದಿ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಮಿಷಿನ್ ಟೂಲ್ ಉತ್ಪಾದನೆಯಲ್ಲಿ 2035ರ ವೇಳೆಗೆ ದೇಶದಲ್ಲೇ ಮೊದಲ ಸ್ಥಾನಕ್ಕೇರುವ ವಿಶ್ವಾಸ ಇದ್ದು, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗಲಿವೆ ಎಂದು ಜಾಂಗ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+